Bengaluru: ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ (Bangalore) ಚಳಿಯ ವಾತಾವರಣವಿದೆ. ಇದರೊಂದಿಗೆ ಹೆಚ್ಚುತ್ತಿರುವ ಧೂಳಿನಿಂದಾಗಿ ಗಾಳಿಯ (Air) ಗುಣಮಟ್ಟ ಕೂಡ ಕಳಪೆಯಾಗಿದೆ. ದೆಹಲಿಯಂತೆ (Delhi) ಬೆಂಗಳೂರಿನಲ್ಲಿ (Bangalore) ಕೂಡ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕಳಪೆಯಾಗುತ್ತಿದೆ, ಒಂದೆಡೆ ಚಳಿಯ ಪ್ರಮಾಣ (Amount of cold) ಹೆಚ್ಚಾಗಿದ್ದು, ಮತ್ತೊಂದೆಡೆ ಧೂಳು ಗಾಳಿಯೊಟ್ಟಿಗೆ ಸೇರಿಕೊಂಡು ಹಲವು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದ (Karnataka) ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲೂ ವಾಯುಮಾಲಿನ್ಯ ಹೆಚ್ಚಾಗಿದೆ, ತಂಪಾದ ವಾತಾವರಣದ ಧೂಳು ಕೂಡ ಸೇರ್ಪಡೆಗೊಂಡಿದ್ದು, ವಾಯುಮಾಲಿನ್ಯ ಹೆಚ್ಚಾಗಿದೆ.
ಕೆಲವು ಕಡೆಗಳಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೆ , ಇನ್ನು ಕೆಲವೆಡೆ ಪೈಪ್‌ಲೈನ್ ಕಾಮಗಾರಿಗಳಿಗೆ ರಸ್ತೆ (Road to pipeline works) ಅಗೆಯಲಾಗಿವೆ.ಕೆಲಸ ಮುಗಿದ ಬಳಿಕ ರಸ್ತೆ ಮಾಡದೇ ಹಾಗೆ ಬಿಟ್ಟ ಪರಿಣಾಮ ಧೂಳಿನ ಕಣಗಳು ಹೆಚ್ಚಾಗಿವೆ.ನಗರದಲ್ಲಿ ಹಲವು ರಸ್ತೆಗಳು ಹದಗೆಟ್ಟ ಪರಿಣಾಮ ವಾಹನಗಳು ಓಡಾಡುವಾಗ ಧೂಳಿನಿಂದ ಜನರ ಓಡಾಟಕ್ಕೆ ಸಂಕಷ್ಟ (Problem) ಎದುರಾಗಿದ್ದರೆ, ಅತ್ತ ಆರೋಗ್ಯ ಸಮಸ್ಯೆಗಳಿಗೂ (Health Problems) ಕಾರಣವಾಗುತ್ತಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಗರಿಷ್ಟ ಮಟ್ಟಕ್ಕೆ ತಲುಪಿದ್ದು, ಹೆಲ್ತ್ ಎಮರ್ಜೆನ್ಸಿ ಶುರುವಾದಂತಿದೆ. ಈ ಆತಂಕ ಇದೀಗ ಬೆಂಗಳೂರಿಗೂ ಕಾಡುತ್ತಿದೆ. ನಗರದ ಹಲವೆಡೆ ಮಾಲಿನ್ಯದ ಪ್ರಮಾಣ ಹೆಚ್ಚಾಗಿ ಬೆಂಗಳೂರು ದೆಹಲಿಯಂತೆ ಆಗಲಿದೆಯೇ! ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಬೆಂಗಳೂರಿನ ಹಲವೆಡೆ ಮಧ್ಯಮ ವರ್ಗದ (Middle class) ಗಾಳಿಯ ಗುಣಮಟ್ಟ ಹೊಂದಿದೆ ಇನ್ನೂ 100 ಒಳಗೆ ಗಾಳಿಯ ಗುಣಮಟ್ಟ (Air Quality Index) ಇರಬೇಕು. ಆದರೆ ನಗರದ ಹಲವೆಡೆ ಗಾಳಿಯ ಗುಣಮಟ್ಟ 100ಕ್ಕಿಂತ ಹೆಚ್ಚಿಗೆ ಆಗಿದೆ. ಪರಿಣಾಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ಹೆಬ್ಬಾಳ AQI 98 ರಿಂದ 129ಗೆ ತಲುಪಿದೆ.ಜೆ.ಪಿ ನಗರ (JP Nagar) 5ನೇ ಬ್ಲಾಕ್ AQI 90 ರಿಂದ 122ಗೆ ತಲುಪಿದೆ.ಮೈಸೂರು ರಸ್ತೆಯ ಬಳಿ AQI 70 ರಿಂದ 114ಗೆ ತಲುಪಿದೆ.ಸಿಲ್ಕ್ ಬೋರ್ಡ್ (Silk board) ನಲ್ಲಿ AQI ರಿಂದ 119ಗೆ ತಲುಪಿದೆ. ಪೀಣ್ಯ ಇಂಡಸ್ಟ್ರಿಯಲ್ (Peenya Industrial) ಏರಿಯಾ AQI 80 ರಿಂದ – 111ಗೆ ತಲುಪಿದೆ.ಮೈಲಸಂದ್ರ AQI 78 ರಿಂದ 122 ಗೆ ತಲುಪಿದೆ. ಇದರಿಂದಾಗಿ ಶ್ವಾಸಕೋಶ ಹಾಗೂ ಉಸಿರಾಟ ತೊಂದರೆ, ಹೃದ್ರೋಗಿಗಳು (Heart patients) , ಮಕ್ಕಳು ಮತ್ತು ಹಿರಿಯ ವಯಸ್ಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಒಟ್ಟಿನಲ್ಲಿ ತಂಪು ವಾತಾವರಣ ಜೊತೆ ನಗರದಲ್ಲಿ ವಾಹನಗಳ ಹೊಗೆ, ರಸ್ತೆಯಿಂದ ಬರುವ ಧೂಳಿನಿಂದ ವಾಯು ಮಾಲಿನ್ಯ ಹೆಚ್ಚಾಗಿದ್ದು, ಉಸಿರಾಟ ಜೊತೆಗೆ ಧೂಳು ಮನುಷ್ಯನ ರಕ್ತ ನಾಳಗಳಿಗೆ ಸೇರುವ ಮೂಲಕ ಶ್ವಾಸಕೋಶ ಮತ್ತು ಹೃದಯ ಕಾಯಿಲೆಗಳು, ಪಾರ್ಶ್ವವಾಯು ನಂತಹ ಖಾಯಿಲೆಗೆ ಕಾರಣವಾಗಲಿದೆ.