ಚೆನ್ನೈ ಫೆ 02: ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹಬ್ಬಿದ್ದು, ಇದೀಗ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರಿಗೂ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ಐಶ್ವರ್ಯ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಾಹಿತಿ ರಜನಿಕಾಂತ್ ಪುತ್ರಿ ಐಶ್ವರ್ಯಾ, ಕರೋನಾ ಎಲ್ಲಾ ಮುಂಜಾಗ್ರತಾ ಕ್ರಮಗಳ ನಂತರವೂ ತನಗೆ ಕರೋನಾ ಪರೀಕ್ಷೆಯಿಂದಾಗಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಎಲ್ಲರೂ ಮಾಸ್ಕ್ ಧರಿಸಿ, ಲಸಿಕೆ ಪಡೆಯುವುದು ಮರೆಯಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ. ಪೋಸ್ಟ್ ಜೊತೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪೋಟೋ ಕೂಡ ಶೇರ್ ಮಾಡಿದ್ದಾರೆ, ಜೊತೆಗೆ ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ಕೂಡ ಕೊರೊನಾ ಪಾಸಿಟಿವ್ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ದಯವಿಟ್ಟು ಎಲ್ಲರೂ ಮಾಸ್ಕ್ ಧರಿಸಿ. ವ್ಯಾಕ್ಸಿನ್ ಪಡೆದು ಹುಷಾರಾಗಿರಿ ಎಂದು ಐಶ್ವರ್ಯಾ ಅವರು ಪೋಸ್ಟ್ ಮಾಡಿದ್ದಾರೆ.

ಕೇಲವು ದಿನಗಳ ಹಿಂದೆ ಐಶ್ವರ್ಯ ಹಾಗೂ ಧನುಷ್ ಪರಸ್ವರ ದೂರಾಗಲಿದ್ದಾರೆ ಎಂಬ ಮಾಹಿತಿ ಹರಿದಾಡಿದ್ದು ಇದಕ್ಕೆ ಪುಷ್ಟಿ ಎಂಬಂತೆ ಐಶ್ವರ್ಯ ಮತ್ತು ಧನುಷ್ ತಮ್ಮ ಸಾಮಾಜಿಕ ಜಾಲತಾಣದಲ್ಲೂ ನಾವು ದೂರಾಗುತ್ತಿದೇವೆ ಎಂದು ಸ್ಪಷ್ಟನೆ ಕೂಡ ನೀಡಿದ್ದರು.