ಭಾರತದ(Indian) ರಾಜಕೀಯದಲ್ಲಿ(Politics) ಪ್ರಧಾನಿ(Primeminister) ಮೋದಿ(NarendraModi) ನಂತರ ಅತ್ಯಂತ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರು ಯೋಗಿ ಆದಿತ್ಯನಾಥ್(Yogi Adityanath). 2017ರಲ್ಲಿ ಉತ್ತರಪ್ರದೇಶದಲ್ಲಿ(Uttarpradesh) ಮುಖ್ಯಮಂತ್ರಿಯಾಗಿ(Chief Minister) ಆಧಿಕಾರ ಸ್ವೀಕರಿಸಿದ ದಿನದಿಂದ ಯೋಗಿ ಆದಿತ್ಯನಾಥ್ ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ಯೋಗಿ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದೆ. ಇಡೀ ದೇಶಾದ್ಯಂತ ಯೋಗಿಗೆ ಬೆಂಬಲ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ.

ಮುಂದಿನ ಪ್ರಧಾನಿ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಹಾಗಾದರೆ ಯಾರು ಈ ಯೋಗಿ ಆದಿತ್ಯನಾಥ್? ಆತನ ಕೌಟುಂಬಿಕ ಹಿನ್ನೆಲೆ ಏನು? ರಾಜಕೀಯವಾಗಿ ಆತ ಬೆಳೆದದ್ದು ಹೇಗೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ. ಯೋಗಿ ಆದಿತ್ಯನಾಥ್ ಅವರ ಮೂಲ ಹೆಸರು ಅಜಯ್‍ಕುಮಾರ್ ಬಿಸ್ಟ್. 1972ರಲ್ಲಿ ಉತ್ತರಾಖಂಡ ರಾಜ್ಯದ ಪಂಚುರ್ ಎಂಬ ಸಣ್ಣ ಗ್ರಾಮದ, ಬಡ ಕುಟುಂಬದಲ್ಲಿ ಯೋಗಿ ಜನ್ಮ ಪಡೆದರು. ತಂದೆ ಅರಣ್ಯ ಇಲಾಖೆಯಲ್ಲಿ ಸಣ್ಣ ನೌಕರಿಯಲ್ಲಿದ್ದರು. ಯೋಗಿ ಅವರ ತಂದೆಗೆ ಏಳು ಮಕ್ಕಳು. ಕಿರಿಯ ಮಗನಾದ ಅಜಯ್‍ಕುಮಾರ್‍ಗೆ ಮೊದಲಿನಿಂದಲೂ ಆಧ್ಯಾತ್ಮ ಮತ್ತು ಹೋರಾಟದಲ್ಲಿ ಹೆಚ್ಚಿನ ಆಸಕ್ತಿ ಇತ್ತು.

ಈ ಕಾರಣದಿಂದಲೇ ಅಜಯ್‍ಕುಮಾರ್ 19ನೇ ವಯಸ್ಸಿನಲ್ಲಿ ಮನೆ ಬಿಟ್ಟು, ರಾಮಮಂದಿರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಓದುವುದರಲ್ಲಿಯೂ ಮುಂಚೂಣಿಯಲ್ಲಿದ್ದ ಅಜಯ್‍ಕುಮಾರ್, ಹೋರಾಟಕ್ಕೆ ಧುಮುಕಿದ ಪರಿಣಾಮ ತಮ್ಮ ಬಿಎಸ್ಸಿ ಪದವಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಿಂದುತ್ವದ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ಕಾಣಿಸುತ್ತಿದ್ದ ಯುವ ಉತ್ಸಾಹಿ ಅಜಯ್‍ಕುಮಾರ್ ಗೋರಖ್‍ಪುರ್‍ನ ಸಂಸದರು ಮತ್ತು ಗೋರಖ್‍ನಾಥ್ ಮಠದ ಮಹಾಂತರಾಗಿದ್ದ ಅವೈಧ್ಯನಾಥ್ ಅವರ ಕಣ್ಣಿಗೆ ಬೀಳುತ್ತಾರೆ.

ಅವೈಧ್ಯನಾಥ್ ಅವರ ಜೊತೆ ನಾಲ್ಕು ವರ್ಷಗಳ ಕಾಲ ವಿವಿಧ ಕಾರ್ಯಗಳನ್ನು ನಿರ್ವಹಿಸಿದ ಅಜಯ್‍ಕುಮಾರ್, 1996ರಲ್ಲಿ ಮಹಾಂತ್ ಅವೈಧ್ಯನಾಥ್ ಅವರ ಆದೇಶದ ಮೇರೆಗೆ ಸನ್ಯಾಸತ್ವ ಸ್ವೀಕರಿಸಿ, ಗೋರಖ್‍ನಾಥ್ ಮಠದ ಉತ್ತರಾಧಿಕಾರಿಯಾಗಿ ‘ಯೋಗಿ ಆದಿತ್ಯನಾಥ್’ ಎಂಬ ಹೆಸರು ಪಡೆದುಕೊಂಡರು. ಮುಂದೆ ಅವೈಧ್ಯನಾಥ್‍ರು ಕಾಲವಾದ ನಂತರ ಮಠದ ಉಸ್ತುವಾರಿ ಜೊತೆಗೆ ಯೋಗಿ ಆದಿತ್ಯನಾಥ್ ರಾಜಕೀಯಕ್ಕೂ ಕಾಲಿಟ್ಟರು. ಅವೈಧ್ಯನಾಥ್‍ರು ಸ್ಪರ್ಧಿಸುತ್ತಿದ್ದ ಗೋರಖ್‍ಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದರು. ಅಲ್ಲಿಂದ ಸತತವಾಗಿ 5 ಬಾರಿ ಅದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಯೋಗಿ ಆದಿತ್ಯನಾಥ್‍ರದ್ದು.

2014ರ ಲೋಕಸಭೆ ಚನಾವಣೆಯಲ್ಲಿ ಗೆದ್ದು, ಸಂಸದರಾಗಿದ್ದ ಯೋಗಿ ಆದಿತ್ಯನಾಥ್‍ರನ್ನು 2017ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಈಗ 2022ರಲ್ಲಿಯೂ ಮತ್ತೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೇರಿದ್ದಾರೆ. ಆ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಪ್ರಖರ ಹಿಂದುತ್ವವಾದಿ ನಿಲುವು, ಮುನ್ನುಗ್ಗುವ ಛಾತಿ, ಬೆಂಕಿಯಂತ ಮಾತು, ಸರಳ ಜೀವನ, ಭ್ರಷ್ಟಾಚಾರ ರಹಿತ ರಾಜಕೀಯ ಹೀಗೆ ತಮ್ಮ ಅನೇಕ ಗುಣಗಳಿಂದ ಯೋಗಿ ಆದಿತ್ಯನಾಥ್ ಮತದಾರರ ಮನಸೆಳೆದಿದ್ದಾರೆ. ತಮ್ಮ ರಾಜಕೀಯ ಜೀವನದುದ್ದಕ್ಕೂ ತಾನು ನಂಬಿದ ಸಿದ್ದಾಂತದೊಂದಿಗೆ ಮುನ್ನುಗ್ಗುತ್ತಿರುವ ನವಯೋಗಿಗೆ ಶುಭವಾಗಲಿ.