Bengaluru : ಕರ್ನಾಟಕ ರಾಜ್ಯದಲ್ಲಿ ತಮಿಳು ಚಿತ್ರರಂಗದ ಇಬ್ಬರು ಪ್ರಮುಖ ಸ್ಟಾರ್ ನಾಯಕರಾದ ವಿಜಯ್ (Ajith’s film overtook Warisu) ಮತ್ತು ಅಜಿತ್ ಕುಮಾರ್ ಅವರ ಸಿನಿಮಾ ಒಂದೇ ದಿನ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಅನ್ನು ಧೂಳೆಬ್ಬಿಸಿದೆ!

ತಮಿಳುನಾಡಿನಲ್ಲಿ ವಿಶೇಷವಾಗಿ ಆಚರಿಸುವ ಪೊಂಗಲ್ (Ajith’s film overtook Warisu) ಹಬ್ಬದ ಮೊದಲ ವಾರದಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟರ ಸಿನಿಮಾ ಏಕಕಾಲಕ್ಕೆ ಹಲವೆಡೆ ಬಿಡುಗಡೆಗೊಂಡು ಭಾರಿ ಸಂಚಲನ ಸೃಷ್ಟಿಸುತ್ತಿದೆ.
ಸದ್ಯ ಭಾರತೀಯ ಚಿತ್ರರಂಗದಲ್ಲಿ ಇದೀಗ ಪ್ಯಾನ್ ಇಂಡಿಯಾ (Pan India) ಚಿತ್ರಗಳು ಭಾರಿ ಮನ್ನಣೆಯನ್ನು ಪಡೆಯುತ್ತಿದ್ದು, ಪ್ಯಾನ್ ಇಂಡಿಯಾ ಚಿತ್ರಗಳತ್ತ ಸಿನಿಪ್ರೇಕ್ಷಕರು ಹೆಚ್ಚು ಗಮನ ಹರಿಸುತ್ತಿದ್ದಾರೆ.
https://vijayatimes.com/mahila-congress-demand/
ಕರ್ನಾಟಕ ರಾಜ್ಯದಲ್ಲಿ ಕನ್ನಡ ಸೇರಿದಂತೆ ಪರ ಭಾಷೆ ಸಿನಿಮಾಗಳನ್ನು ವೀಕ್ಷಿಸುವವರ ಸಂಖ್ಯೆ ಅಧಿಕವಾಗಿಯೇ ಇದ್ದು,
ಬುಧವಾರ ತಮಿಳು ಚಿತ್ರರಂಗದ ಸ್ಟಾರ್ ನಟರಾದ ತಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ನಟನೆಯ ಸಿನಿಮಾಗಳು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಂಡಿದೆ.

ಬಿಡುಗಡೆಗೊಂಡ ಮೊದಲ ದಿನವೇ ತಮಿಳಿನ ವಿಜಯ್ ಅಭಿನಯದ ವಾರಿಸು (Varisu) ಮತ್ತು ಅಜಿತ್ ಕುಮಾರ್ ನಟನೆಯ ತುನಿವು (Thunivu) ರಾಜಧಾನಿ ಬೆಂಗಳೂರಿನಲ್ಲಿಯೇ 1200ಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡಿದೆ.
ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್ ಅವರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿರುವುದು ಇಬ್ಬರ ಅಭಿಮಾನಿಗಳಿಗೂ ಅಚ್ಚರಿಯನ್ನು ಉಂಟು ಮಾಡಿದೆ.
ಮೊದಲ ದಿನ ವಾರಿಸು ಚಿತ್ರ ತುನಿವು ಚಿತ್ರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಆದ್ರೆ, ಪ್ರಾರಂಭದಲ್ಲಿ ಕಂಡ ವೇಗ ಎರಡನೇ ದಿನದಲ್ಲಿ ಕೊಂಚ ಕುಸಿದಿದೆ!
ಎರಡನೇ ದಿನದ ಪ್ರದರ್ಶನದಲ್ಲಿ ವಾರಿಸು ಚಿತ್ರ ೩೦೦ಕ್ಕೂ ಅಧಿಕ ಪ್ರದರ್ಶನಗಳನ್ನು ಕಳೆದುಕೊಂಡ ಪರಿಣಾಮ ಇಳಿಕೆ ಕಂಡಿದೆ. ಈ ಪೈಕಿ ತನಿವು ಎರಡನೇ ದಿನದಲ್ಲಿ ಉತ್ತಮ ಪ್ರದರ್ಶನವನ್ನು ಪಡೆದುಕೊಂಡು ಮುಂದೆ ಸಾಗಿದೆ.
ಒಟ್ಟಾರೆ ಅಜಿತ್ ಕುಮಾರ್ ನಟನೆಯ ತುನಿವು ಮತ್ತು ತಳಪತಿ ವಿಜಯ್ ನಟನೆಯ ವಾರಿಸು ಚಿತ್ರಗಳು ಪಡೆದುಕೊಂಡ ಒಟ್ಟು ಪ್ರದರ್ಶನಗಳ ಸಂಖ್ಯೆಯ ಮಾಹಿತಿ ಹೀಗಿದೆ ನೋಡಿ.
ಅಜಿತ್ ಕುಮಾರ್ ನಟನೆಯ ತುನಿವು ಬಿಡುಗೆಯ ದಿನವಾದ ಜನವರಿ ೧೧ ರಂದು ಬೆಂಗಳೂರಿನ (Bengaluru) ಚಿತ್ರಮಂದಿರಗಳಲ್ಲಿ ೫೬೮ ಪ್ರದರ್ಶನಗಳನ್ನು ಪಡೆದುಕೊಂಡಿದೆ.
