ಬೆಂಗಳೂರು, ನ. 12: ಸಿನಿಮಾ ಸ್ಟಾರ್ ನಟ, ನಟಿಯರನ್ನು ಹತ್ತಿರದಿಂದ ನೋಡಬೇಕು, ಮಾತನಾಡಬೇಕು ಎಂಬ ಆಸೆ ಇರುವುದು ಸರ್ವೇ ಸಾಮಾನ್ಯ. ಅದರಂತೆ ಇಲ್ಲೊಬ್ಬರು 75 ವರ್ಷ ಅಜ್ಜಿ 12 ವರ್ಷದಿಂದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಅದರಂತೆ ಇದೀಗ ಅವರ ಕನಸನ್ನು ಅಪ್ಪು ನನಸು ಮಾಡಿದ್ದಾರೆ.
ಜೋಯಿಡಾದ ಬಾಳೆಗೌಡ ನಾಯ್ಕ ಮತ್ತು ಇವರ ಪತ್ನಿ ಕರಿಯವ್ವ ಇಬ್ಬರು ಡಾ. ರಾಜ್ ಕುಮಾರ್ ಅಭಿಮಾನಿ. ಗೋಕಾಕ್ ಚಳುವಳಿ ವೇಳೆ ಡಾ. ರಾಜ್ಕುಮಾರ್ ಜೊತೆಗೆ ಬಾಳೆಗೌಡ ನಾಯ್ಕ ಕೂಡ ಪಾಲ್ಗೊಂಡಿದ್ದರು.
ಇತ್ತೀಚೆಗೆ ಕಾಳಿ ನದಿ ಸಾಕ್ಷ್ಯಚಿತ್ರ ಶೂಟಿಂಗ್ನಲ್ಲಿ ನಟ ಪುನೀತ್ ರಾಜ್ಕುಮಾರ್ ಭಾಗಿಯಾಗಿದ್ದರು. ಜೋಯಿಡಾದ ಬಳಿ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಕರಿಯವ್ವ (75) ಅವರು ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಕೆಲಹೊತ್ತು ಕರಿಯವ್ವ ಜೊತೆಗೆ ಪುನೀತ್ ರಾಜ್ಕುಮಾರ್ ಮಾತನಾಡಿದ್ದಾರೆ. ಅವರ ಅಭಿಮಾನವನ್ನು ಕಂಡು ಅಪ್ಪು ಭಾವುಕರಾಗಿದ್ದಾರೆ. 12 ವರ್ಷದಿಂದ ನೋಡಬೇಕೆಂದಿದ್ದ ಅಜ್ಜಿಯ ಕನಸನ್ನು ದೊಡ್ಮನೆ ಹುಡುಗ ನನಸು ಮಾಡಿದ್ದಾರೆ.