ಹೊಸ ವೈರಸ್ (New virus), ರೂಪಾಂತರಗೊಂಡ ವೈರಸ್ (Virus) ಸೇರಿದಂತೆ ಹಲವು ಮಾರಣಾಂತಿಕ ರೋಗಗಳು ಹಲವು ದೇಶಗಳಲ್ಲಿ ಮತ್ತೆ ಆತಂಕದ ವಾತಾವರಣ (Atmosphere of anxiety) ಸೃಷ್ಟಿಸಿದೆ. 2023ರಲ್ಲಿ ಪೆರು ಸೇರಿದಂತೆ ಆಫ್ರಿಕಾ ದೇಶಗಳಲ್ಲಿ (African countries) ಕಾಣಿಸಿಕೊಂಡ ಗುಲ್ಲೆನ್ ಬಾರ್ ಸಿಂಡ್ರೋಮ್(Guillain-Barre Syndrome) ಮಾರಣಾಂತಿಕ ರೋಗ (A deadly disease) ಇದೀಗ ಭಾರತದಲ್ಲಿ (India) ಹೆಚ್ಚಾಗುತ್ತಿದೆ. ಇದೀಗ ಪುಣೆಯಲ್ಲಿ (Pune) ಈ ಗುಲ್ಲೆನ್ ಬಾರ್ ಸಿಂಡ್ರೋಮ್ (Gullen Bar Syndrome) ಆರೋಗ್ಯ ಸಮಸ್ಯೆಗೆ ಮೊದಲ ಬಲಿಯಾಗಿದೆ. ಸೋಲಾಪುರದ ಶಂಕಿತ ಗುಲ್ಲೆನ್ ಬಾರ್ ಸಿಂಡ್ರೋಮ್ ರೋಗಿ ಮೃತಪಟ್ಟಿರವುದು ಮಹಾರಾಷ್ಟ್ರದ ಪುಣೆಯಲ್ಲಿ (Pune, Maharashtra) ಆತಂಕದ ವಾತಾವರಣ ಸೃಷ್ಟಿಸಿದೆ.
ಗುಲ್ಲೆನ್ ಬಾರ್ ಸಿಂಡ್ರೋಮ್ (Gullen Bar Syndrome) ಪ್ರಮುಖವಾಗಿ ಮೆದುಳು ಹಾಗೂ ಬೆನ್ನು ಹುರಿ ನರಗಳ ಮೇಲೆ ಗಂಭೀರ ಪರಿಣಾಮ (Serious effect on nerves) ಬೀರುತ್ತದೆ. ಈ ರೋಗ ಕಾಣಿಸಿಕೊಂಡವರಲ್ಲಿ ರೋಗ ಪ್ರತಿರೋಧ ಶಕ್ತಿ (Disease resistance) ಕುಂದಲಿದೆ. ಪ್ರಮುಖವಾಗಿ ಮೆದುಳು ಹಾಗೂ ಬೆನ್ನು ಹುರಿ ನರಗಳು ಶಕ್ತಿಹೀನವಾಗಲಿದೆ. ತೀವ್ರ ಅಸ್ವಸ್ಥತೆ (Severe discomfort) ಕಾಣಿಸಿಕೊಳ್ಳಲಿದೆ. ಇದರ ಪರಿಣಾಮ ತಾತ್ಕಾಲಿಕ ಪಾರ್ಶ್ವವಾಯು (Paralysis) ಅಥವಾ ದೌರ್ಬಲ್ಯಕ್ಕೆ ಕಾರಣವಾಗಲಿದೆ.ಎದೆಯ ಸ್ನಾಯುಗಳ (Chest muscles) ಮೇಲೆ ಈ ಸಮಸ್ಯೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಎದೆ ಸ್ನಾಯು ಸಮಸ್ಯೆಯಿಂದ ಉಸಿರಾಟದ ಸಮಸ್ಯೆಗಳು (Breathing problems) ಕಾಣಿಸಿಕೊಳ್ಳಲಿದೆ. ಹೀಗಾಗಿ ರೋಗಿಗಳಿಗೆ ವೆಂಟಿಲೇಟರ್ (Ventilator) ನೆರವು ಪಡೆಯುವ ಅನಿವಾರ್ಯತೆ ಎದುರಾಗಬಹುದು.

ಇದು ಅಲ್ಪಾವಧಿಯ ರೋಗವಾಗಿದ್ದರೂ ಮಾರಣಾಂತಿಕವಾಗಿದೆ. ಸೂಕ್ತ ಚಿಕಿತ್ಸೆ (Appropriate treatment) ಮೂಲಕ ರೋಗದಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಸ್ನಾಯು ದೌರ್ಬಲ್ಯ, ತಾತ್ಕಾಲಿಕ ಪಾರ್ಶ್ವವಾಯು ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಗುಲ್ಲೆನ್ ಬಾರ್ ಸಿಂಡ್ರೋಮ್ನಿಂದ (Gullen Bar Syndrome) ಆಗುವ ಪಾರ್ಶ್ವವಾಯು ಸಮಸ್ಯೆಗಳು (Paralysis problems) ನಿಧಾನವಾಗಿ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ಪ್ರಮುಖವಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ರೋಗ ಲಕ್ಷಣಗಳು (Disease symptoms) ಕಂಡುಬಂದರೆ ನಿರ್ಲಕ್ಷವಹಿಸಿದರೆ ಅಪಾಯದ ಸಾಧ್ಯತೆ ಹೆಚ್ಚು.
ಮಕ್ಕಳಲ್ಲಿ ಈ ಗುಲ್ಲೆನ್ ಬಾರ್ ಸಿಂಡ್ರೋಮ್ (Gullen Bar Syndrome) ಸಮಸ್ಯೆ ಭಿನ್ನವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉಸಿರಾಟ ಸಮಸ್ಯೆ (Breathing problem), ನಡೆಯಲು ಸಾಧ್ಯವಾಗದ ಪರಿಸ್ಥಿತಿ, ಕೈ ಕಾಲು ನೋವು, ಮುಖ, ಕುತ್ತಿಗೆ ಭಾಗದ ನೌರಗಳ ದೌ್ಬರ್ಲ್ಯ ಸೇರಿದಂತೆ ಹಲವು ರೋಗಲಕ್ಷಣಗಳ ಮೂಲಕ ಕಾಣಿಸಿಕೊಳ್ಳಲಿದೆ
ಇನ್ನು ಗುಯಿಲಿನ್ ಬಾರ್ ಸಿಂಡ್ರೋಮ್ಗೆ (Gullen Bar Syndrome) ನಿಖರವಾದ ಕಾರಣ ತಿಳಿದಿಲ್ಲ. ಆದರೆ, ಬಹುಪಾಲು ಜನರಲ್ಲಿ ಸೋಂಕು ಪ್ರಾರಂಭವಾದ ಒಂದು, ಎರಡು ವಾರಗಳ ನಂತರ ಮಾತ್ರ ಇದು ಕಾಣಿಸಿಕೊಳ್ಳುತ್ತದೆ. ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ (Campylobacter jejuni) ಎಂಬ ಬ್ಯಾಕ್ಟೀರಿಯಾ (Bacteria) ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಸೈಟೊಮೆಗಾಲೊವೈರಸ್ (Cytomegalovirus), ಎಪ್ಸ್ಟೀನ್ ಬಾರ್ ವೈರಸ್ (Epstein-Barr virus) ಮತ್ತು ಜಿಕಾ ವೈರಸ್ (Zika virus) ಇದಕ್ಕೆ ಕಾರಣವಾಗಿರುತ್ತದೆ. ಪುಣೆಯಲ್ಲಿ ಈಗ ಹರಡುತ್ತಿರುವ ಸಮಸ್ಯೆಗೆ ಕಲುಷಿತ ಆಹಾರ (Contaminated food) ಮತ್ತು ನೀರು ಕಾರಣ ಎನ್ನುತ್ತಾರೆ ತಜ್ಞ ವೈದ್ಯರು.