Chitradurga : ರಾಜ್ಯದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದ್ದ ಚಿತ್ರದುರ್ಗದ ಮುರುಘಾಮಠದ(allegation against Shivamurthy Swamiji) ಶಿವಮೂರ್ತಿ ಸ್ವಾಮೀಜಿ(Shiva murthy swamiji) ಮೇಲಿನ ಪೋಕ್ಸೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ. ಶಿವಮೂರ್ತಿ ಸ್ವಾಮೀಜಿ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದ ಇಬ್ಬರು ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ಸಂಗತಿ ತಿಳಿದು ಬಂದಿದೆ.

ಈ ಕುರಿತು ಚಿತ್ರದುರ್ಗ(Chitradurga) ಜಿಲ್ಲಾ ಆಸ್ಪತ್ರೆ ವೈದ್ಯರು ನೀಡಿರುವ ವರದಿಯಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬುದಕ್ಕೆ ವೈದ್ಯಕೀಯ ನಿಖರತೆಗಳು ಕಾಣಿಸುತ್ತಿಲ್ಲ.
ಬಟ್ಟೆಯಲ್ಲಿ ರಕ್ತ ಅಥವಾ ವೀರ್ಯದ ಕಲೆಗಳಾಗಲಿ ಇಲ್ಲ. ಬಾಲಕಿಯರ ಕನ್ಯಾಪೊರೆಗೆ(allegation against Shivamurthy Swamiji) ಯಾವುದೇ ಹಾನಿ ಆಗಿಲ್ಲ ಎಂದು ವರದಿಯಲ್ಲಿ ದೃಢಪಡಿಸಲಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯೆ ಡಾ.ಉಮಾ(Dr Uma) ಅವರು ಪರೀಕ್ಷೆ ನಡೆಸಿ ಈ ವರದಿ ನೀಡಿದ್ದಾರೆ.
ಇನ್ನು ವೈದ್ಯಕೀಯ ಪರೀಕ್ಷೆಯ ವೇಳೆ ಬಾಲಕಿಯರು ಸ್ವಾಮೀಜಿ ನಮ್ಮೊಂದಿಗೆ ದೈಹಿಕ ಸಂಪರ್ಕ ನಡೆಸಿಲ್ಲ,
ಇದನ್ನೂ ಓದಿ: https://vijayatimes.com/congress-tweeted-about-nalinkumar/
ಆತ ನಮ್ಮ ದೇಹದ ಅಂಗಾಂಗಗಳನ್ನು ಸ್ಪರ್ಶಿಸುತ್ತಿದ್ದನು ಎಂದು ತಿಳಿಸಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರದುರ್ಗ ಪೋಕ್ಸೋ ನ್ಯಾಯಾಲಯಕ್ಕೆ(Pocso court) ಗ್ರಾಮಾಂತರ ಠಾಣೆ ತನಿಖಾಧಿಕಾರಿ ಸಲ್ಲಿಸಿರುವ ಆರೋಪ ಪಟ್ಟಿ ಜತೆಗೆ ಈ ವೈದ್ಯಕೀಯ ವರದಿಯನ್ನು ಲಗತ್ತಿಸಲಾಗಿದೆ.
ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಹೀಗಾಗಿ ಫೋರೆನ್ಸಿಕ್(Forensic) ವರದಿಯೂ ಬಂದ ನಂತರ ತನಿಖಾಧಿಕಾರಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ಮೇಲಿರುವ ಪೋಕ್ಸೋ ಪ್ರಕರಣದಿಂದಾಗಿ ಸದ್ಯ ಸ್ವಾಮೀಜಿಗೆ ಜಾಮೀನು(Bail) ನೀಡಿಲ್ಲ. ಸ್ವಾಮೀಜಿ ಜೈಲುವಾಸ ಅನುಭವಿಸುತ್ತಿದ್ದಾರೆ.
ಆದರೆ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್(S K Basavarajan) ಮತ್ತು ಪತ್ನಿ ಸೌಭಾಗ್ಯ ಬಸವರಾಜನ್(Sowbhagya basavarajan) ಅವರಿಗೆ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿದೆ.
ಪ್ರಕರಣ ಹಿನ್ನಲೆ?: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ(Sexual assault) ನಡೆಸಿದ್ದಾರೆ ಎಂದು ಆರೋಪಿಸಿ ಮುರುಘಾ ಮಠದ ವಸತಿ ನಿಲಯದ ಇಬ್ಬರು ಬಾಲಕಿಯರು ಆರೋಪಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನವನ್ನೇ ಉಂಟುಮಾಡಿತ್ತು.