Ramnagar : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ (Union Minister HD Kumaraswamy) ವಿರುದ್ಧ ಭೂಮಿ ಒತ್ತುವರಿ ಆರೋಪ (Allegation of land encroachment) ಹಿನ್ನಲೆ ಕಂದಾಯ ಇಲಾಖೆ ಅಧಿಕಾರಿಗಳು (Revenue Department officials) ಸರ್ವೇ ನಡೆಸಿದ್ದಾರೆ.ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು 14 ಎಕರೆ ಸರ್ಕಾರಿ ಭೂ ಜಾಗವನ್ನು (Government land) ಕಬಳಿಕೆ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು (Social activists) ದೂರು ನೀಡಿದ್ದರು.ರಾಮನಗರ ತಾಲೂಕಿನ (Ramnagar taluk) ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ (Ketaganahalli) ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ವಿಚಾರವಾಗಿ ಹೈಕೋರ್ಟ್ ಗೆ (High Court) ಅರ್ಜಿ ಸಲ್ಲಿಸಲಾಗಿತ್ತು,ವಿಚಾರದ ಬಗ್ಗೆ ಹೈಕೋರ್ಟ್ (High Court) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಕಂದಾಯ ಇಲಾಖೆ (Revenue Department) ಅಧಿಕಾರಿಗಳು ಸರ್ವೇ ಕಾರ್ಯ (Survey work) ಆರಂಭಿಸಿದ್ದಾರೆ.ಆರೋಪದ ಬಗ್ಗೆ ವರದಿ ನೀಡಲು ವಿಳಂಬ ಮಾಡುತ್ತಿದ್ದ ಹಿನ್ನಲೇ ಕಂದಾಯ ಆಯುಕ್ತರಿಗೆ (Commissioner of Revenue) ತಕ್ಷಣ ವರದಿ ನೀಡುವಂತೆ ಹೈಕೋರ್ಟ್ ಅಧಿಕಾರಿಗಳಿಗೆ ತಾಕಿತ್ತು ಮಾಡಿದೆ.ಭೂ ಕಬಳಿಕೆ ಬಗ್ಗೆ ಸರ್ಕಾರ ವಿಶೇಷ ತನಿಖಾ ತಂಡವನ್ನು (Special Investigation Team) (ಎಸ್‌ಐಟಿ) ರಚನೆ ಮಾಡಿತ್ತು.ಕೇತಗಾನಹಳ್ಳಿಯಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ (Revenue Inspector) ಪ್ರಕಾಶ್ ಮತ್ತು ವಿಎ ವಿಶಾಲಾಕ್ಷಿ ನೇತೃತ್ವದಲ್ಲಿ 35ಕ್ಕೂ ಹೆಚ್ಚು ಸರ್ವೇ ನಂಬರ್ಗಳ ಜಮೀನನ್ನು ಪರಿಶೀಲನೆ ಮಾಡಲಾಗಿದೆ.
ಎಚ್‌ಡಿ ಕುಮಾರಸ್ವಾಮಿ (HD Kumaraswamy), ಅವರ ಸಹೋದರಿ ಅನಸೂಯ ಮಂಜುನಾಥ ಮತ್ತು ಸಂಬಂಧಿ ಡಿ.ಸಿ.ತಮ್ಮಣ್ಣ ಹೆಸರಿನಲ್ಲಿರುವ 110 ಎಕರೆಗೂ ಹೆಚ್ಚು ಜಮೀನನ್ನು ಅಧಿಕಾರಿಗಳು ಸರ್ವೇ ಮಾಡಿ, ಜಿಲ್ಲಾಧಿಕಾರಿಗಳಿಗೆ ವರದಿ (Report to Collector) ನೀಡಲಿದ್ದಾರೆ.14 ಎಕರೆಗೂ ಅಧಿಕ ಸರ್ಕಾರಿ ಜಾಗವನ್ನು ಕಬಳಿಕೆ ಮಾಡಿದ್ದಾರೆ ಎಂದು ಕಂದಾಯ ಇಲಾಖೆ ಲೋಕಾಯುಕ್ತರಿಗೆ (Revenue Department to Lokayukta) 2014 ರಲ್ಲಿ ಮಾಜಿ ಸಂಸದ ದಿವಂಗತ ಜಿ ಮಾದೇಗೌಡ (Former MP Late G Made Gowda) ದೂರು ಸಲ್ಲಿಸಿದ್ದರು.ಕೂಡಲೇ ವರದಿ ನೀಡುವಂತೆ ಹೈಕೋರ್ಟ್ (High Court) ಅಧಿಕಾರಿಗಳಿಗೆ ಆದೇಶ ನೀಡಿದೆ.ಈ ಹಿನ್ನಲೇ ಸರ್ವೇ ಕಾರ್ಯವನ್ನು ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.