Sandalwood : ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರ ಜಗತ್ತಿನಾದ್ಯಂತ ಚಿತ್ರಪ್ರೇಮಿಗಳನ್ನು ಆಕರ್ಷಿಸಿದೆ. ಇದೀಗ ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ (Allu Arjun Loves Kantara) ಕೂಡ ಕಾಂತಾರ ಚಿತ್ರದ ಅಭಿಮಾನಿಯಾಗಿದ್ದಾರೆ.
ಕಾಂತಾರ ಚಿತ್ರವನ್ನು ವೀಕ್ಷಿಸಿದ ಅವರು ಭಾವುಕರಾಗಿ ಈ ಕುರಿತು ತಮ್ಮ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.

“ಕಾಂತಾರ ಒಂದು ಅದ್ಭುತ ಅನುಭವ. ಕಾಂತಾರ ನೀಡುವ ಒಂದು ಸಿನಿಮೀಯ ಅನುಭವವನ್ನು ತಪ್ಪಿಸಿಕೊಳ್ಳಬಾರದು. ನಮ್ಮ ಮನ ಸೆರೆಹಿಡಿಯುವ ಹಿನ್ನೆಲೆ ಸಂಗೀತ, ಅದ್ಭುತ ಛಾಯಾಗ್ರಹಣ, ರಿಷಬ್ ಶೆಟ್ಟಿ ಅವರಿಂದ ಅದ್ಭುತವಾದ ನಿರ್ದೇಶನ,
ಅತ್ಯುತ್ತಮ ನಟನೆ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ನನ್ನ ಕಣ್ಣುಗಳನ್ನು (Allu Arjun Loves Kantara) ತೇವಗೊಳಿಸಿತು. ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಅಲ್ಲು ಅರ್ಜುನ್ಗೂ ಮುನ್ನ ರಾಮ್ ಗೋಪಾಲ್ ವರ್ಮಾ(Ram Gopal Varma) ಅವರು “ಈಗ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಅವರು ಗುಳಿಗ ದೈವದಿಂದ ಗುಣಿಸಿದ ಶಿವನಂತಿದ್ದಾರೆ.
ಇನ್ನೊಂದೆಡೆ 300 ಕೋಟಿ, 400 ಕೋಟಿ, 500 ಕೋಟಿ ಬಜೆಟ್ ಚಲನಚಿತ್ರ ನಿರ್ಮಾಪಕರು ಈ ಚಿತ್ರವನ್ನು ನೋಡಿ ಹೃದಯಾಘಾತದಿಂದ ಸಾಯುತ್ತಿದ್ದಾರೆ.
ಇದನ್ನೂ ಓದಿ : https://vijayatimes.com/narayana-murthy-over-rishi/
ಬಿಗ್ ಬಜೆಟ್ ಚಿತ್ರಗಳು ಮಾತ್ರ ಜನರನ್ನು ಥಿಯೇಟರ್ಗಳಿಗೆ ಎಳೆಯುತ್ತವೆ ಎಂಬ ಚಲನಚಿತ್ರ ಜನರಲ್ಲಿರುವ ಮಿಥ್ಯೆಯನ್ನು ರಿಷಬ್ ಶೆಟ್ಟಿ ಅವರ ಕಾಂತಾರ ನಾಶಪಡಿಸುತ್ತದೆ.
ಕಾಂತಾರ ಚಿತ್ರ ಮುಂಬರುವ ದಶಕಗಳಲ್ಲಿ ಎಲ್ಲ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಪ್ರಮುಖ ಪಾಠವಾಗಲಿದೆ.” ಎಂದು ಬರೆದುಕೊಂಡಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ (The kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri) ಕೂಡ ಕಾಂತಾರ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರ ವೀಕ್ಷಿಸಿದ ನಂತರ ವೀಡಿಯೊವನ್ನು ಹಂಚಿಕೊಂಡಿದ್ದು, “ಕಾಂತಾರ ಒಂದು ವಿಶಿಷ್ಟ ಅನುಭವ. ಅಂತಹ ಚಿತ್ರವನ್ನು ನಾನು ಎಂದಿಗೂ ನೋಡಿಲ್ಲ.

ಚಿತ್ರವು ಕಲೆ ಮತ್ತು ಜಾನಪದದಿಂದ ತುಂಬಿದೆ. ಇಂತಹ ಅದ್ಭುತ ಚಿತ್ರ ನಿರ್ಮಿಸಿದ್ದಕ್ಕಾಗಿ ರಿಷಬ್ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ಮದ್ಯೆ ಕಂಗನಾ ರಣಾವತ್, ಪ್ರಭಾಸ್, ಕಿಚ್ಚ ಸುದೀಪ್ ಸೇರಿದಂತೆ ಅನೇಕ ತಾರೆಯರು ಸಹ ಚಿತ್ರವನ್ನು ವೀಕ್ಷಿಸಿ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
- ಮಹೇಶ್.ಪಿ.ಎಚ್