ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸಿದ ‘ಪುಷ್ಪಾರಾಜ್’!

ನಿರ್ದೇಶಕ ಸುಕುಮಾರ್ ಅವರ ಪುಷ್ಪ ದಿ ರೈಸ್(Pushpa D Rise) ಯಶಸ್ಸಿನಲ್ಲಿ ನಟ(Actor) ಅಲ್ಲು ಅರ್ಜುನ್(Allu Arjun) ಖುಷಿಯಾಗಿದ್ದಾರೆ. ಸದ್ಯ ತಮ್ಮ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿರುವ ಸ್ಟೈಲೀಶ್ ಸ್ಟಾರ್(Stylish Star) ಅಲ್ಲು ಅರ್ಜುನ್, ಇತ್ತೀಚೆಗಷ್ಟೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಅಲ್ಲು ಅರ್ಜುನ್ ಅವರ ರೇಂಜ್ ರೋವರ್ ಎಸ್‌ಯುವಿಯಲ್ಲಿ ಟಿಂಟೆಡ್ ವಿಂಡೋ ಶೀಲ್ಡ್‌ಗಳನ್ನು ಬಳಸಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 700 ರೂ. ದಂಡ ಪಾವತಿಸುವಂತೆ ತಿಳಿಸಿದ್ದು, ಚಲನ್‌ ಜಾರಿ ಮಾಡಿದೆ. ಈ ಹಿಂದೆ, ಜೂನಿಯರ್ ಎನ್ಟಿಆರ್, ಮನೋಜ್ ಮಂಚು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರಿಗೂ ಕೂಡ ಇದೇ ರೀತಿ ದಂಡವನ್ನು ಪೊಲೀಸರು ವಿಧಿಸಿದ್ದರು. ಅಲ್ಲು ಅರ್ಜುನ್ ಈಗ ಪುಷ್ಪ : ದಿ ರೂಲ್ ೨ನೇ ಭಾಗದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.

ಈ ಚಿತ್ರವು ಮಾರ್ಚ್‌ನಲ್ಲಿ ತೆರೆಗೆ ಬರಬೇಕಿತ್ತು, ಆದ್ರೆ ಈಗ ಅದನ್ನು ಮತ್ತೊಮ್ಮೆ ಮುಂದೂಡಲಾಗಿದೆ. ವರದಿಗಳ ಪ್ರಕಾರ, ಕಪ್ಪು ಬಣ್ಣದ ಕಿಟಕಿಯ ಶೀಲ್ಡ್‌ಗಳನ್ನು ಬಳಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ನಿಯಮ ಪಾಲಿಸದಿದ್ದಕ್ಕೆ 700 ರೂಪಾಯಿ ದಂಡ ಕಟ್ಟುವಂತೆ ಸೂಚಿಸಿದರು ಎನ್ನಲಾಗಿದೆ. ವಾಹನದೊಳಗೆ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಲು ಟಿಂಟೆಡ್ ಗ್ಲಾಸ್ ಮತ್ತು ಸನ್ ಫಿಲ್ಮ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.

ಪುಷ್ಪಾ ನಂತರ ಅಲ್ಲು ಅರ್ಜುನ್ ಕೈಯಲ್ಲಿ ಸಾಲು ಸಾಲು ಹೊಸ ಸಿನಿಮಾಗಳು ಕೈಯಲಿದ್ದು, ಸುಮಾರು ಐದು ಚಿತ್ರಗಳು ಮುಂದಿವೆ ಎಂದು ತಿಳಿದುಬಂದಿದೆ. ವೇಣು ಶ್ರೀರಾಮ್ ಅವರೊಂದಿಗೆ ಐಕಾನ್ ಆಗಿ, ಕೊರಟಾಲ ಶಿವ, ಎಆರ್ ಮುರುಗದಾಸ್, ಬೋಯಪತಿ ಶ್ರೀನು ಮತ್ತು ಪ್ರಶಾಂತ್ ನೀಲ್ ಅವರೊಂದಿಗೆ ತಲಾ ಒಂದು ಚಿತ್ರ ಕಾಯ್ದುನಿಂತಿವೆ. ಅಲ್ಲು ಅರ್ಜುನ್ ಶೀಘ್ರದಲ್ಲೇ ತಮ್ಮ ಮುಂಬರುವ ಚಿತ್ರಗಳನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.