Kollywood Movies : ಕಾಲಿವುಡ್ ನಟ ಶಿವ ಕಾರ್ತಿಕೇಯನ್ (Sivakarthikeyan) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಅಮರನ್’ (Amaran Movie) ಅಕ್ಟೋಬರ್ 31ರಂದು ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿದೆ.ಇದು ಭಯೋತ್ಪಾದಕ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜನ್ (Major Mukund Varadarajan) ಜೀವನ ಚರಿತ್ರೆಯಾಗಿದ್ದು ಲವ್, ಆಕ್ಷನ್ ಮತ್ತು ಭಾವನಾತ್ಮಕ ಥ್ರಿಲ್ಲರ್ (Action and emotional thriller) ಕಥೆಯನ್ನು ಹೊಂದಿರುವ ಈ ಸಿನಿಮಾ ನೋಡಿದವರೆಲ್ಲ ಕಣ್ಣೀರು ಹಾಕಿಕೊಂಡು ಮನೆಗೆ ಮರಳುತ್ತಿದ್ದಾರೆ. ಶಿವಕಾರ್ತಿಕೇಯನ್ (Sivakarthikeyan) ಹಾಗೂ ಸಾಯಿ ಪಲ್ಲವಿ (Sai Pallavi) ನಟನೆಯ ಈ ಸಿನಿಮಾ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಈ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ.
ಅಮರನ್’ (‘Amaran’) ಸಿನಿಮಾ ಭಾರತೀಯ ಸೇನೆಯ ಹೆಮ್ಮೆಯ ಸೈನಿಕ (Proud soldier) ರಿಯಲ್ ಸ್ಟೋರಿ. ತಮಿಳುನಾಡು (Tamil Nadu) ಮೂಲದ ಈ ಯೋಧ ಭಯೋತ್ಪಾದಕರ (Terrorists) ವಿರುದ್ಧ ಹೋರಾಡಿ ವೀರ ಮರಣವನ್ನಿಪ್ಪಿದ್ದರು. ಆ ಯೋಧನ ಹೋರಾಟವನ್ನೇ ಶಿವಕಾರ್ತಿಕೇಯನ್ ರೂಪದಲ್ಲಿ ತೆರೆಮೇಲೆ ತರಲಾಗಿದೆ. ಅಸಲಿಗೆ ಈ ಸಿನಿಮಾದ ಹಿಂದಿನ ರಿಯಲ್ ಹೀರೋನೇ ಮೇಜರ್ ಮುಕುಂದ್ ವರದರಾಜನ್ (Major Mukund Varadarajan) .ದೇಶಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ ವೀರಪುತ್ರನಿಗೆ ಭಾರತೀಯ (Indian for Veeraputra) ಸೇನೆ ನೀಡುವ ಅತ್ಯುನ್ನತ ಪ್ರಶಸ್ತಿ ಅಶೋಕ ಚಕ್ರವನ್ನು (Ashoka Chakra) ನೀಡಲಾಯಿತು. ಇವರ ಹೋರಾಟದ ಬದುಕು, ಕುಟುಂಬ, ಲವ್ ಸ್ಟೋರಿಯನ್ನು ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಮೂಲಕ ತೆರೆಮೇಲೆ ತೋರಿಸಲಾಗಿದೆ. ಈ ಸಿನೆಮಾದ ನಿರ್ದೇಶಕ ರಾಜ್ಕುಮಾರ್ ಪೆರಿಯಾಸಾಮಿ (Rajkumar Periasamy) . ಈ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಅದಕ್ಕೀಗ ಪ್ರತಿಫಲ ಸಿಗುತ್ತಿದೆ.
ದಿನದಿಂದ ದಿನಕ್ಕೆ ಬಾಕ್ಸ್ ಆಫೀಸಿನಲ್ಲಿ (Box office) ಕೂಡಾ ಈ ಸಿನಿಮಾ ನಾಗಾಲೋಟದಲ್ಲಿ ಮುನ್ನುಗ್ತುತ್ತಿದೆ. ಸಿನಿಮಾ ಅಕ್ಟೋಬರ್ 31 ರಂದು ದೀಪಾವಳಿಗೆ ತೆರೆ ಕಂಡಿತ್ತು. ಮೊದಲ ದಿನ ಸಿನಿಮಾ 21.4 ಕೋಟಿ (21.4 crores) ರೂ ಲಾಭ ಮಾಡಿತ್ತು. ಅದರಲ್ಲಿ ತಮಿಳುನಾಡು ಪಾಲೇ ಹೆಚ್ಚಾಗಿತ್ತು. ಎರಡನೇ ದಿನ ಶುಕ್ರವಾರ 19.15 ಕೋಟಿ (19.15 crores) ರೂ ಗಳಿಸಿದರೆ ಮೂರನೇ ದಿನ ಶನಿವಾರ ಸಿನಿಮಾ 21 ಕೋಟಿ (21 crores) ರೂ ಕಲೆಕ್ಷನ್ ಮಾಡಿದೆ ಅದರಲ್ಲಿ ತಮಿಳುನಾಡಿನಿಂದ 17.4 ಕೋಟಿ (17.4 crore) ರೂ. ಕರ್ನಾಟಕದಿಂದ 6 ಲಕ್ಷ (6 lakhs,) , ಹಿಂದಿಯಿಂದ 3 ಲಕ್ಷ (3 lakhs) , ತೆಲುಗು ಭಾಷೆಯಿಂದ 3.5 ಕೋಟಿ (3.5 crore) ಹಾಗೂ ಮಲಯಾಳಂನಿಂದ ಸಿನಿಮಾ 1 ಲಕ್ಷ ರೂ (1 lakh Rs) ಗಳಿಸಿದೆ. ಇನ್ನು 7ನೇ ದಿನ ಕೂಡ ಸಿನಿಮಾ 168 ಕೋಟಿ (168 crores) ರೂಪಾಯಿ ಗಳಿಸಿದೆ. ಪ್ರೇಕ್ಷಕ ಪ್ರಭುಗಳು ಕಥೆಯನ್ನು ಮೆಚ್ಚಿರುವ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಲೆಕ್ಷನ್ ಮಾಡುವ ಎಲ್ಲ ಲಕ್ಷಣಗಳು ಕಂಡುಬರುತ್ತವೆ.