Heath : ದಂಟಿನ ಸೊಪ್ಪು ಯಾರಿಗೆ ತಾನೇ ತಿಳಿದಿಲ್ಲ. ಪ್ರತಿಯೊಬ್ಬರು ಪಲ್ಯ ಸಾಂಬರ್ ಗಳನ್ನು ತಿoದಿರುತ್ತೇವೆ. ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುವ ಅತ್ಯಂತ ಜನಪ್ರಿಯ ಸೊಪ್ಪು. ಈ ಸೊಪ್ಪು ಹೆಚ್ಚು ನಾರಿನಾಂಶದಿಂದ ಕೂಡಿರುವ ದಂಟಿನ ಸೊಪ್ಪಿನ ಪಲ್ಯನ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಈ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ದಂಟಿನ ಸೊಪ್ಪು ಪ್ರೋಟೀನ್ (Protein) ಮಿನರಲ್ಸ್ (Minerals), ವಿಟಮಿನ್ ಎ ಮತ್ತು ಸಿ,ಐರನ್ ಪೊಟ್ಯಾಶಿಯಂ ಹಾಗೂ ಗಂಧಕವನ್ನು ಹೊಂದಿರುತ್ತದೆ. ಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ,,ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿ ಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಮಗೆ ಗೊತ್ತಿಲ್ಲದಂತೆ ಎರಡು ತುತ್ತು ಜಾಸ್ತಿ ಹೊಟ್ಟೆ ಒಳಗೆ ಇಳಿದಿರುತ್ತದೆ…..
ಇಂಥ ದೈವದತ್ತವರವಾದ ದಂಟಿನ ಸೊಪ್ಪಿನ ಔಷಧೀಯ ಗುಣಗಳನ್ನು ತಿಳಿಯೋಣ ಬನ್ನಿ…..
- ಈ ಸೊಪ್ಪಿನಲ್ಲಿ ನಾರಿನಾoಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯು (digestion) ಸರಾಗವಾಗಿ ನಡೆಯುತ್ತದೆ.
- ದೇಹದ ಅತೀ ಉಷ್ಣತೆಯಿಂದ ಬಳಲುತ್ತಿರುವವರು ದಂಟಿನ ಸೊಪ್ಪನ್ನು ಉಪಯೋಗಿಸಿದರೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ.
- ದಂಟಿನ ಸೊಪ್ಪಿನಲ್ಲಿರುವ ನಾರಿನಾಂಶವು ಮಲ ಬದ್ಧತೆಗೆ ತುಂಬಾ ಒಳ್ಳೆಯ ಔಷಧಿ.
ಇದನ್ನೂ ಓದಿ : https://vijayatimes.com/husband-and-wife-aggreement/
- ದಂಟಿನ ಸೊಪ್ಪಿನಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್ ಗಳು ಹಾಗೂ ಉತ್ತಮ ಪೌಷ್ಟಿಕಾಂಶಗಳು (Good nutrition) ತಾಯಿಯ ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ.
- ನಾರಿನಂಶವು ತ್ವರಿತವಾಗಿ ಜೀರ್ಣಕ್ರಿಯೆ ನಡೆಯುವಂತೆ ಮಾಡಿ ಹಸಿವನ್ನು ಹೆಚ್ಚಿಸುತ್ತದೆ.
- ದಂಟಿನ ಸೊಪ್ಪು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರಕ್ತವನ್ನು ಶುದ್ಧೀಕರಿಸುತ್ತದೆ.
- ಅಷ್ಟೇ ಅಲ್ಲದೆ ಗರ್ಭಿಣಿ ಸ್ತ್ರೀಯರು ಮತ್ತು ಬಾಣಂತಿಯರು ಜೇನುತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಒಂದು ಲೋಟ ತಾಜಾ ಸೊಪ್ಪಿನ ರಸವನ್ನು ಕುಡಿಯುವುದರಿಂದ ಹೆರಿಗೆಯ ನಂತರದಲ್ಲಿ ಎದೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ.
- ದಂಟಿನ ಸೊಪ್ಪಿನ ಕಷಾಯವನ್ನು ತಯಾರಿಸಿ ಪ್ರತಿದಿನ ಒಂದು ಲೋಟದಂತೆ ಸೇವಿಸುತ್ತಾ ಬಂದರೆ ಮೂಲವ್ಯಾದಿ ರೋಗಿಗಳ ನೋವು ಮತ್ತು ಉರಿ ಶೀಘ್ರವೇ ಉಪಶಮನವಾಗುತ್ತದೆ. ಹೀಗೆ ದಂಟನ್ನು ಕೇವಲ ಹಸಿರು ಸೊಪ್ಪಾಗಿ ಅಲ್ಲದೆ ತೇವಾಂಶ, ಕೊಬ್ಬು, ಪುಷ್ಟಿ, ಸಾರಜನಕ, ಕಬ್ಬಿಣದ ಅಂಶ ಹೀಗೆ ಆರೋಗ್ಯಕ್ಕೆ ಪೂರಕವಾದ ಔಷಧಿಯ ಗುಣಗಳನ್ನು ಹೊಂದಿದೆ.

- ಮಧುಮೇಹ (Diabetes) ಕೊಲೆಸ್ಟ್ರಾಲ್ (Cholesterol) ನಂತಹ ಕಾಯಿಲೆಗಳಿಗೂ ಇದು ರಾಮಬಾಣ.
- ಆರೋಗ್ಯಕ್ಕೆ ರಾಗಿಮುದ್ದೆ ಎಷ್ಟು ಮುಖ್ಯವೋ ದಂಟಿನ ಸೊಪ್ಪು ಕೂಡ ಅಷ್ಟೇ ಮುಖ್ಯ ಹಾಗೆ ಅದ್ಭುತ ಗುಣವುಳ್ಳ ಸೊಪ್ಪಾಗಿದೆ. ಅತಿಸಾರ, ಜ್ವರದಿಂದ ನರಳುವವರಿಗೆ, ದೃಷ್ಟಿ ದೋಷ, ಕಾಮಾಲೆ ಅಂತ ರೋಗಗಳಿಗೂ ದಿವ್ಯ ಔಷಧ. ದಂಟಿನ ಸೊಪ್ಪು ಕೇವಲ ಆರೋಗ್ಯಕ್ಕೆ ಪೂರಕ ಮಾತ್ರವಲ್ಲದೆ ಸೌಂದರ್ಯವರ್ಧಕವು ಹೌದು.
- ಈ ದಂಟಿನ ಸೊಪ್ಪಿನ ರಸಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ ಕೈಕಾಲುಗಳಿಗೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
- ಇನ್ನು ದಂಟಿನ ಸೊಪ್ಪನ್ನು ಸುಟ್ಟು ಅದರ ಬೂದಿಯನ್ನು ನೀರಿನಲ್ಲಿ ಕಲಸಿ ಮುಖಕ್ಕೆ ಹಚ್ಚುವುದರಿಂದ ಶೀಘ್ರವೇ ಮೊಡವೆಗಳು ಅದರ ಕಲೆಗಳು ನಿವಾರಣೆಯಾಗುತ್ತದೆ.
- ಹಸಿ ದಂಟಿನ ಸೊಪ್ಪಿನ ರಸ ತೆಗೆದು ತಲೆಯ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ಸಮೃದ್ಧಿಯಾಗಿ ಬೆಳೆಯುವುದು ರೇಷ್ಮೆಯಂತೆ ನುಣುಪಾಗುತ್ತದೆ ಅಲ್ಲದೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಇದನ್ನೂ ಓದಿ : https://vijayatimes.com/ksrtc-bus-fare-hike/
- ದಂಟಿನ ಸೊಪ್ಪಿನ ರಸವನ್ನು ತಲೆಗೆ ಹಚ್ಚುತ್ತಾ ಬಂದರೆ ಬಾಲ ನೆರೆಯನ್ನು ಕೂಡ ತಡೆಯುತ್ತದೆ. ದಂಟಿನ ಸೊಪ್ಪಿನಲ್ಲಿ ಆರೋಗ್ಯಕ್ಕೆ,ಸೌಂದರ್ಯಕ್ಕೆ ಪ್ರತಿಯೊಂದಕ್ಕೂ ಕೂಡ ಅತ್ಯದ್ಭುತವಾದಂತಹ ಅಂಶಗಳನ್ನು ಒಳಗೊಂಡಿರುವ ಈ ದಂಟಿನ ಸೊಪ್ಪು ದೈವದತ್ತ ವರವೆಂದರೂ ಕೂಡಾ ತಪ್ಪಾಗಲಾರದು.
- ಯಶಸ್ವಿನಿಗೌಡ. ಆರ್