• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಪ್ರಕೃತಿ ಪ್ರಿಯರಿಗಾಗಿ ಭಾರತದ 6 ಅತ್ಯಂತ ಸುಂದರವಾದ ಉದ್ಯಾನವನ ಇಲ್ಲಿದೆ

Mohan Shetty by Mohan Shetty
in ದೇಶ-ವಿದೇಶ, ಮಾಹಿತಿ
ಪ್ರಕೃತಿ ಪ್ರಿಯರಿಗಾಗಿ ಭಾರತದ 6 ಅತ್ಯಂತ ಸುಂದರವಾದ ಉದ್ಯಾನವನ ಇಲ್ಲಿದೆ
0
SHARES
3
VIEWS
Share on FacebookShare on Twitter

India : ಭಾರತವು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ವಿವಿಧ ಭವ್ಯವಾದ ಸ್ಮಾರಕಗಳು ಮತ್ತು ಸೊಗಸಾದ ಉದ್ಯಾನಗಳನ್ನು(amazing garden of india) ಹೊಂದಿದೆ. ಈ ಅದ್ಭುತ ಉದ್ಯಾನವನಗಳು ಭಾರತದಾದ್ಯಂತ ಕಂಡುಬರುತ್ತವೆ.

ಭಾರತದಲ್ಲಿನ(India) ಉದ್ಯಾನಗಳು  ಸಸ್ಯಶಾಸ್ತ್ರೀಯ ಕಲಾಕೃತಿ ಮತ್ತು ಸಸ್ಯ ಸಂರಕ್ಷಣೆಗಾಗಿ ಹಾಟ್‌ಸ್ಪಾಟ್‌ಗಳಾಗಿವೆ.

Garden of India

ಭಾರತದಲ್ಲಿ ನೋಡಲೇಬೇಕಾದ ಕೆಲವು ಸುಂದರವಾದ ಉದ್ಯಾನವನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಈ  ಉದ್ಯಾನಗಳಿಗೆ ನೀವು ನಿಮ್ಮ ಕುಟುಂಬದೊಂದಿಗೆ ಭೇಟಿ ನೀಡಿ.

  • ರೋಸ್ ಗಾರ್ಡನ್, ಚಂಡೀಗಢ :

ಪ್ರಕೃತಿಯ ಶ್ರೇಷ್ಠತೆಯ ನಡುವೆ ವಿಶ್ರಾಂತಿ ಪಡೆಯಲು, ಚಂಡೀಗಢದ(Chandigarh) 16ನೇ ಸೆಕ್ಟರ್‌ನಲ್ಲಿರುವ ರೋಸ್ ಗಾರ್ಡನ್‌ಗೆ ಭೇಟಿ ನೀಡಬೇಕು. ಉದ್ಯಾನವು ಸುಂದರವಾದ ಹೂವುಗಳಿಂದ ತುಂಬಿದೆ.

ಇದು ಪ್ರವಾಸಿಗರು ಮತ್ತು ಹೊರಾಂಗಣ ಉತ್ಸಾಹಿಗಳ ನೆಚ್ಚಿನ ತಾಣವಾಗಿದೆ.

ಇದನ್ನೂ ಓದಿ : https://vijayatimes.com/congress-leader-demands-arrest/

  • ಲೋದಿ ಗಾರ್ಡನ್, ದೆಹಲಿ

ಲೋದಿ ಗಾರ್ಡನ್ಸ್ ಹೊಸ ದೆಹಲಿಯಲ್ಲಿರುವ(Delhi) ನಗರ ಉದ್ಯಾನವಾಗಿದೆ. 90 ಎಕರೆಗೂ ಹೆಚ್ಚು ವಿಸ್ತಾರವಾಗಿದೆ. ಇದು ದೆಹಲಿಯ ಸಫ್ದರ್ಜಂಗ್ ಸಮಾಧಿಯ ಬಳಿ ಇದೆ.

ಇದು ಮೊಹಮ್ಮದ್ ಶಾ ಅವರ ಸಮಾಧಿ ಮತ್ತು ಸಿಕಂದರ್ ಲೋದಿ ಅವರ ಸಮಾಧಿಯನ್ನು ಹೊಂದಿದೆ. 

  • ಹೂಗಳ ಕಣಿವೆ, ಚಮೋಲಿ

ಹಿಮಾಲಯದ ಪಶ್ಚಿಮ(Himalaya Unesco) ಭಾಗದಲ್ಲಿರುವ ಭ್ಯುಂದರ್ ಕಣಿವೆಯ ಮಧ್ಯದಲ್ಲಿರುವ ಈ ಯುನೆಸ್ಕೋ ವಿಶ್ವ ಪರಂಪರೆಯ ತಾಣವು ಭಾರತದ ಅತ್ಯಂತ ಸುಂದರವಾದ ಹೂವಿನ ಕಣಿವೆಗಳಲ್ಲಿ ಒಂದಾಗಿದೆ.

ನೀವು ಹೂವುಗಳನ್ನು ಪ್ರೀತಿಸುತ್ತಿದ್ದರೆ, ಅಪರೂಪದ ಹೂವುಗಳ ನೋಟವನ್ನು ಕಣ್ತುಂಬಿಕೊಳ್ಳಲು ನೀವು ಈ ಕಣಿವೆಗೆ ಚಾರಣವನ್ನು ಮಾಡಬೇಕು.

himalaya unesco

ಹೊಳೆಯುವ ಹಿಮನದಿಗಳು, ಧುಮ್ಮಿಕ್ಕುವ ತೊರೆಗಳು ಮತ್ತು ಹೂವುಗಳಿಂದ ತುಂಬಿದ ಹುಲ್ಲುಗಾವಲುಗಳಿಂದ ಕೂಡಿರುವ ಈ ಕಣಿವೆ ಉದ್ಯಾನವು ಪಾದಯಾತ್ರಿಕರು ಮತ್ತು ಪ್ರಕೃತಿ ಆಸಕ್ತರಿಗೆ ಒಂದು ದೃಶ್ಯ ಹಬ್ಬವಾಗಿದೆ.

  • ಬೊಟಾನಿಕಲ್ ಗಾರ್ಡನ್, ಕೋಲ್ಕತ್ತಾ

ಕಲ್ಕತ್ತಾದ ಬೊಟಾನಿಕಲ್ ಗಾರ್ಡನ್ಸ್ ಅನ್ನು 1787ರಲ್ಲಿ ರಾಬರ್ಟ್ ಕೈಡ್ ಸ್ಥಾಪಿಸಿದರು. ಇದು 109 ಹೆಕ್ಟೇರ್ ಪ್ರದೇಶಲದಲ್ಲಿ ಹರಡಿಕೊಂಡಿದೆ.

ಇದು ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ರಕ್ಷಣೆಯಲ್ಲಿದೆ. 330 ಮೀಟರ್‌ಗಿಂತಲೂ ಹೆಚ್ಚು ಸುತ್ತಳತೆ ಹೊಂದಿರುವ ಉದ್ಯಾನದಲ್ಲಿರುವ ಆಲದ ಮರವು ವಿಶ್ವದ ಅತಿದೊಡ್ಡ ಮರವಾಗಿದೆ. ಇದನ್ನು “ದಿ ಗ್ರೇಟ್ ಆಲದ ಮರ” ಎಂದು ಕರೆಯಲಾಗುತ್ತದೆ.

https://fb.watch/haXfSLemuR/ ಇದ್ಯಾವುದೋ ಕುಗ್ರಾಮ ಅಲ್ಲಾ, ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಬಂಡೇಪಾಳ್ಯದ ನರಕ ಸದೃಶ್ಯ!

  • ಹ್ಯಾಂಗಿಂಗ್ ಗಾರ್ಡನ್, ಮುಂಬೈ

ಮುಂಬೈನ(Mumbai) ಹ್ಯಾಂಗಿಂಗ್ ಗಾರ್ಡನ್ಸ್ ಮಲಬಾರ್ ಬೆಟ್ಟದ ಪಶ್ಚಿಮ ಇಳಿಜಾರಿನಲ್ಲಿ ನೆಲೆಗೊಂಡಿರುವ ತಾರಸಿ ಉದ್ಯಾನವಾಗಿದೆ.

ಇದು ಜನನಿಬಿಡ ನಗರದ ಮಧ್ಯದಲ್ಲಿರುವ ಹಸಿರು, ಶಾಂತ ಪ್ರದೇಶವಾಗಿದೆ. ಈ ಉದ್ಯಾನವನವು ಪ್ರವಾಸಿಗರಿಗೆ ನೆಚ್ಚಿನ ರಾತ್ರಿಯ ಹ್ಯಾಂಗ್‌ಔಟ್ ಸ್ಥಳವಾಗಿದೆ.

ಏಕೆಂದರೆ ಇದು ವಿವಿಧ ಪ್ರಾಣಿಗಳಾಗಿ ರೂಪುಗೊಂಡ ಸಸ್ಯಗಳಿಂದ ನಿರ್ಮಾಣವಾಗಿದೆ. ಮುಸ್ಸಂಜೆಯಲ್ಲಿ ಅರೇಬಿಯನ್ ಸಮುದ್ರದ ನೋಟಗಳನ್ನು ಇಲ್ಲಿಂದ ಆಸ್ವಾಧಿಸಬಹುದು.

mumbai garden
  • ಮೊಘಲ್ ಗಾರ್ಡನ್, ಶ್ರೀನಗರ

ಮೊಘಲ್ ಉದ್ಯಾನಗಳು ಮೊಘಲ್ ಯುಗದ ರಚನೆಗಳಾಗಿವೆ. ಇವು ಭವ್ಯವಾದ ವೈಭವವನ್ನು ಪ್ರದರ್ಶಿಸುತ್ತವೆ. ಈ ಉದ್ಯಾನವು ಶಾಲಿಮಾರ್ ಗಾರ್ಡನ್ಸ್, ಚಶ್ಮ್-ಎ-ಶಾಹಿ ಮತ್ತು ನಿಶಾತ್ ಬಾಗ್‌ಗಳ ಸಮ್ಮಿಳನವಾಗಿದೆ.

ಈ ಉದ್ಯಾನದ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ವಿಸ್ತಾರವಾಗಿ ಹರಿಯುವ ಕಾರಂಜಿಗಳು. ಪ್ರತಿಯೊಬ್ಬ  ನೋಡಲೇಬೇಕಾದ ಉದ್ಯಾನವನವಿದು.

  • ಮಹೇಶ್.ಪಿ.ಎಚ್
Tags: amazingIndia

Related News

ಹಾಲಿನ ಪ್ರೋತ್ಸಾಹಧನ 1.50 ರೂ. ಕಡಿತ ! BAMULನಿಂದ ಆದೇಶ
ಪ್ರಮುಖ ಸುದ್ದಿ

ಹಾಲಿನ ಪ್ರೋತ್ಸಾಹಧನ 1.50 ರೂ. ಕಡಿತ ! BAMULನಿಂದ ಆದೇಶ

June 2, 2023
ದೇಶ-ವಿದೇಶ

ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷ : ವಿವಾದವೆಬ್ಬಿಸಿದೆ ರಾಹುಲ್ ಗಾಂಧಿ ಹೇಳಿಕೆ

June 2, 2023
ಎಲೆಕ್ಟ್ರಿಕ್‌ ವಾಹನ ಪ್ರಿಯರಿಗೆ ಶಾಕ್‌ ! ನಾಳೆಯಿಂದ ಎಲೆಕ್ಟ್ರಿಕ್‌ ವಾಹನಗಳ ದರ ಹೆಚ್ಚಳ
ಪ್ರಮುಖ ಸುದ್ದಿ

ಎಲೆಕ್ಟ್ರಿಕ್‌ ವಾಹನ ಪ್ರಿಯರಿಗೆ ಶಾಕ್‌ ! ನಾಳೆಯಿಂದ ಎಲೆಕ್ಟ್ರಿಕ್‌ ವಾಹನಗಳ ದರ ಹೆಚ್ಚಳ

June 2, 2023
ಫೋನ್‌ ಜಾಸ್ತಿ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ
ದೇಶ-ವಿದೇಶ

ಫೋನ್‌ ಜಾಸ್ತಿ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕಿ

June 1, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.