ಮಾನವ ನಿರ್ಮಿತ ರಚನೆಗಳು ಕೆಲವೊಮ್ಮೆ ನಮ್ಮಲ್ಲಿ ಅಚ್ಚರಿ ಮೂಡಿಸುತ್ತವೆ, ಅಂತಹ ರಚನೆಗಳಲ್ಲಿ ಕೆಲವು ಅರಮನೆಗಳೂ(Palace) ಸೇರಿವೆ. ಇಂತಹ ಕೆಲವು ವಿಶಿಷ್ಟ(Amazing Palaces Of India) ಅರಮನೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ರಾಂಬಗ್ ಪ್ಯಾಲೇಸ್ : ಜೈಪುರದ(Jaipur) ರಾಂಬಾಗ್ ಅರಮನೆಯನ್ನು 1835ರಲ್ಲಿ ರಾಜಕುಮಾರ್ ರಾಮ್ ಸಿಂಗ್ ಮೊದಲು ಈ ಕಟ್ಟಡವನ್ನು ನಿರ್ಮಾಣ ಮಾಡಲು ಆರಂಭಿಸಿದನು.
1887ರಲ್ಲಿ ಮಹಾರಾಜ ಸವಾಯಿ ಮಾಧೋ ಸಿಂಗ್ ಅವರ ಆಳ್ವಿಕೆಯಲ್ಲಿ ಒಂದು ಸಾಧಾರಣ ರಾಯಲ್ ಬೇಟಿಯ ಲಾಡ್ಜ್ ಆಗಿ ಇದು ಪರಿವರ್ತನೆಯನ್ನ ಕಂಡಿತು.
20ನೇ ಶತಮಾನದ ಆರಂಭದಲ್ಲಿ ಸರ್ ಸ್ಯಾಮ್ಯುಯೆಲ್ ಸ್ವಿಂಟನ್ ಜಾಕೋಬ್ ಸಾಕಷ್ಟು ವಿನ್ಯಾಸವನ್ನು ಮಾಡಿದರು. ಮಹಾರಾಜ 2ನೇ ಸವಾಯಿ ಮಾನ್ ಸಿಂಗ್ ರಾಂಬಗ್ ನಿವಾಸದಲ್ಲಿ ಕೆಲವು ರಾಯಲ್ ಕೋಣೆಗಳನ್ನು ನಿರ್ಮಾಣ ನಿರ್ಮಿಸಿದನು.
ಇದು ಈಗ ವಿಲಾಸಿ ಹೋಟೆಲ್ ಆಗಿದ್ದು ಪ್ರವಾಸಿರನ್ನ ಸೆಳೆಯುತ್ತಿದೆ.
ಇದನ್ನೂ ಓದಿ : https://vijayatimes.com/health-facts-of-clay-pot/
ಫಲಕ್ನುಮ ಪ್ಯಾಲೆಸ್, ಹೈದ್ರಾಬಾದ್ : ಚಾರ್‍ಮಿನಾರ್‍ನಿಂದ 5 ಕಿ.ಮೀ. ದೂರದಲ್ಲಿರುವ ಫಲಕ್ನುಮ ಹೈದರಾಬಾದ್ ಪ್ರಧಾನಿಯಾಗಿದ್ದ ಆರನೇ ನಿಜಾಮ್ ಮೀರ್ ಮಹಬೂಬ್ ಅಲಿ ಖಾನ್ ನವಾಬ್ ಬಹದ್ದೂರ್ ಅವರ ಚಿಕ್ಕಪ್ಪ ಮತ್ತು ಭಾವ ನವಾಬ್ ವಿಕರ್ ಉಲ್ ಉಮ್ರಾ ಇದನ್ನ ನಿರ್ಮಾಣವನ್ನ ಮಾಡಿದರು.
ಫಾಲಕ್-ನುಮಾ ಇದು ಉರ್ದುವಿನಲ್ಲಿ ಆಕಾಶದ ಕನ್ನಡಿ ಅಥವಾ ಆಕಾಶದಂತೆ ಎನ್ನುವ ಅರ್ಥ ನೀಡುತ್ತೆ. 1884ರಲ್ಲಿ 3ನೇ ಸರ್ ವಿಕಾರ್ ಈ ಅರಮನೆಯ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದರು.
ಅರಮನೆಯ ಒಳಗಿನ ವಿನ್ಯಾಸಗಳನ್ನು ಪೂರ್ಣ ಮಾಡಲಿಕ್ಕೆ ಸುಮಾರು 9 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು. ಅರಮನೆಯು ಚೇಳಿನ ಆಕಾರದಲ್ಲಿ ನಿರ್ಮಿಸಿ ಎರಡು ಕೊಂಡಿಗಳು ಹೋಲುವಂತೆ ಕೊಣೆಗಳನ್ನು ನಿರ್ಮಾಣ ಮಾಡಲಾಗಿದೆ.
ವಿಭಿನ್ನ ಮತ್ತು ವಿಶೇಷವಾಗಿದೆ ಈ ಅರಮನೆ.

ಉಜ್ಜಯಂತ ಅರಮನೆ, ತ್ರಿಪುರ : ಈ ಅರಮನೆಯನ್ನು 1899 ಮತ್ತು 1901ರ ನಡುವೆ ತ್ರಿಪುರದ ಮಹಾರಾಜ ರಾಧಾ ಕಿಶೋರ್ ಮಾಣಿಕ್ಯ ನಿರ್ಮಿಸಿದನು.
ಇದು ಮೊಘಲ್ ತೋಟಗಳಿಂದ ಆವೃತವಾದ ಒಂದು ಸಣ್ಣ ಸರೋವರದ ದಂಡೆಯಲ್ಲಿದೆ. 1949ರಲ್ಲಿ ತ್ರಿಪುರಾವು ಭಾರತಕ್ಕೆ ಸೇರ್ಪಡೆಯಾಗುವವರೆಗೂ ಇದರ ಆಡಳಿತ ಮಣಿಕ್ಯ ರಾಜವಂಶದ ನೆಲೆಯಾಗಿತ್ತು.
ಉಜ್ಜಯಂತ ಅರಮನೆ ಇದೀಗ ರಾಜ್ಯ ವಸ್ತು ಸಂಗ್ರಹಾಲಯವಾಗಿದೆ. ಹಾಗೂ ಈಶಾನ್ಯ ಭಾರತದ ವಾಸಸ್ಥಾನ, ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಸಮುದಾಯದ ಕೌಶಲ್ಯಗಳ ಬಗ್ಗೆ ತಿಳಿಸುತ್ತದೆ.
ಈ ಅರಮನೆಗೆ ಉಜ್ಜಯಂತ ಅರಮನೆ ಎಂಬ ಹೆಸರನ್ನು ಮೊಟ್ಟ ಮೊದಲು ಏಷ್ಯಾದ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್(Ravindranath Tagore) ನೀಡಿದ್ದಾರೆ.
ಲಕ್ಷ್ಮಿ ವಿಲಾಸ್ ಪ್ಯಾಲೆಸ್, ಗುಜರಾತ್ : 1890ರಲ್ಲಿ ನಿರ್ಮಾಣ ಮಾಡಲಾದ ಅರಮನೆ ಲಕ್ಷ್ಮಿ ವಿಲಾಸ್ ಪ್ಯಾಲೆಸ್. ಇದನ್ನು ಇಂಡೋ ಸಾರ್ಸೆನಿಕ್ ರಿವೈವಲ್ ಆರ್ಕಿಟೆಕ್ಚರ್, ಮರಾಠಾದಲ್ಲಿ ನಿರ್ಮಾಣ ಮಾಡಲಾಗಿದೆ.
ಮಹಾರಾಜ 3ನೇ ಸಯಾಜಿರಾವ್ ಗಾಯಕ್‍ವಾಡ್ ಇದನ್ನು ನಿರ್ಮಿಸಿದ್ದಾರೆ.

ಬಂಕಿಹ್ಯಾಮ್ ಅರಮನೆಯ ಗಾತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಿರುವ ಈ ಕಟ್ಟಡವು, ಇಲ್ಲಿಯವರೆಗೂ ನಿರ್ಮಿಸಲಾದ ಅತಿದೊಡ್ಡ ಖಾಸಗಿ ಅರಮನೆಯಾಗಿದೆ.
ಇದು ಬರೋಡದಾ ಜನರು ಹೆಚ್ಚಿನ ಗೌರವವನ್ನು ಹೊಂದಿರುವಂತಹ ರಾಜ ನಿವಾಸವಾಗಿದೆ. 500 ಎಕರೆಗಳಿಂತ ಹೆಚ್ಚಿರುವ ಈ ಅರಮನೆಯು ಮಹಾರಾಜ ಫತೇಹ್ ಸಿಂಗ್ ಮ್ಯೂಸಿಯಂನ್ನು ಹೊಂದಿದೆ.
- ಪವಿತ್ರ