- ಅಮೆಜಾನ್, ಫ್ಲಿಪ್ಕಾರ್ಟ್ (Amazon, Flipkart) ಗೋದಾಮುಗಳ ಮೇಲೆ ಬಿಸಿಎಸ್ ಅಧಿಕಾರಿಗಳ ದಾಳಿ (Amazon Flipkart warehouses seized)
- ಅಸುರಕ್ಷಿತ ಮತ್ತು ಪ್ರಮಾಣೀಕರಿಸದ ಉತ್ಪನ್ನಗಳ ಮಾರಾಟ (Selling products)
- ದಿಲ್ಲಿ, ಉತ್ತರಪ್ರದೇಶದಲ್ಲಿರುವ ಗೋದಾಮುಗಳ (Warehouses in Delhi and Uttar Pradesh) ಮೇಲೆ ಕೂಡ ದಾಳಿ ನಡೆಸಿ ನಕಲಿ ವಸ್ತುಗಳ ವಶ
Tamilnadu: ಕಡ್ಡಾಯ ಪ್ರಮಾಣೀಕರಣ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಮಾನದಂಡಗಳ ಬ್ಯೂರೋ (BIS) ಅಮೆಜಾನ್ (Amazon) ಮತ್ತು ಫ್ಲಿಪ್ಕಾರ್ಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ (E-commerce) ತಾಣಗಳಿವೆ ನೋಟಿಸ್ ನೀಡಿದೆ.
ಗ್ರಾಹಕ ವ್ಯವಹಾರಗಳು (Consumer Affairs) , ಆಹಾರ ಮತ್ತು ಸಾರ್ವಜನಿಕ ವಿತರಣಾ (Food and public distribution) ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಿಐಎಸ್, ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಗೋದಾಮುಗಳ ಮೇಲೆ ದಾಳಿ ಮಾಡಿ ಬಿಐಎಸ್ ಪ್ರಮಾಣೀಕರಣದ (BIS certification) ಕೊರತೆಯಿರುವ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ.
ವಸ್ತುಗಳನ್ನು ವಶಪಡಿಸಿಕೊಂಡ (Items seized) ನಂತರ ಬಿಎಸ್ಐ ಸಂಸ್ಥೆಯು ಬಿಎಸ್ಐ ಕಾಯ್ದೆ 2016ರ ಪ್ರಕಾರ ಇ–ಕಾಮರ್ಸ್ (E-commerce) ತಾಣಗಳನ್ನು ಹೊಣೆ ಮಾಡಲು ಕಾನೂನು ಕ್ರಮ ಕೈಗೊಳ್ಳಲು (Legal action) ಮುಂದಾಗಿದೆ. ಬಿಐಎಸ್ ಕಾಯ್ದೆ, 2016 ರ ಸೆಕ್ಷನ್ 17(1) ಮತ್ತು 17(3) ರ ಉಲ್ಲಂಘನೆಗಾಗಿ ಈ ವೇದಿಕೆಗಳ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಿದೆ.

ಎಲ್ಲಾ ಉತ್ಪನ್ನಗಳ ಮಾರಾಟಗಾರರು ಅನ್ವಯವಾಗುವ ಕಾನೂನುಗಳು (Laws applicable to sellers) , ನಿಯಮಗಳು ಮತ್ತು ಅಮೆಜಾನ್ ನೀತಿಗಳನ್ನು ಪಾಲಿಸಬೇಕು ಎಂದು ಅಮೆಜಾನ್ ಸಂಸ್ಥೆ ಹೇಳಿಕೆ ಹೇಳಿದೆ.ನಮ್ಮ ಆಯ್ಕೆಯು ಉದ್ಯಮ-ಸ್ವೀಕರಿಸಲ್ಪಟ್ಟ ಮಾನದಂಡಗಳನ್ನು ಪೂರೈಸುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಮತ್ತು ಅಸುರಕ್ಷಿತ ಉತ್ಪನ್ನಗಳ ಮಾರಾಟವನ್ನು (Sale of unsafe products) ತಡೆಯಲು ನಾವು ನವೀನ ಸಾಧನಗಳನ್ನು ಅಭಿವೃದ್ಧಿಪಡಿಸುತ್ತೇವೆ.
ಅನುಸರಣೆಯಿಲ್ಲದ ಉತ್ಪನ್ನಗಳನ್ನು ತೆಗೆದುಹಾಕುವುದು ಮತ್ತು ಸೂಕ್ತವಾದಾಗ ಹೆಚ್ಚುವರಿ ಮಾಹಿತಿಗಾಗಿ ಮಾರಾಟಗಾರರು, ತಯಾರಕರು ಮತ್ತು ಸರ್ಕಾರಿ ಸಂಸ್ಥೆಗಳನ್ನು ಸಂಪರ್ಕಿಸುವುದು ಸೇರಿದಂತೆ ನಮ್ಮ ಗ್ರಾಹಕರಿಗೆ ಸುರಕ್ಷಿತ ಆಯ್ಕೆಯನ್ನು ಕಾಪಾಡಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕೂಡ ಅಮೆಜಾನ್ ಹೇಳಿದೆ.
ಮಾ.22 ರಂದು ಕರ್ನಾಟಕ ಬಂದ್:ವಾಟಾಳ್ ನಾಗರಾಜ್ ಘೋಷಣೆ
ಮಕ್ಕಳ ಡೈಪರ್ (Kids Diper) , ಮಕ್ಕಳು ಬಳಸುವ ಪ್ಲಾಸ್ಟಿಕ್ ಬಾಟಲ್ (Kids Plastic Bottle) , ಅಹಾರ ಡಬ್ಬಿಗಳು ಸೇರಿದಂತೆ 24 ಹ್ಯಾಂಡ್ ಬ್ಲೆಂಡರ್ಗಳನ್ನು ವಶಪಡಿಸಿಕೊಂಡಿದೆ. ಗೋದಾಮಿನ ಮೇಲಿನ ದಾಳಿಯಲ್ಲಿ ಸರಿಯಾದ ಪ್ರಮಾಣೀಕರಣವಿಲ್ಲದ 58 ಅಲ್ಯೂಮಿನಿಯಂ ಫಾಯಿಲ್ಗಳು (Aluminum foils) , 34 ಲೋಹೀಯ ನೀರಿನ ಬಾಟಲಿಗಳು (Metallic bottles) , 25 ಆಟಿಕೆಗಳು, 20 ಹ್ಯಾಂಡ್ ಬ್ಲೆಂಡರ್ಗಳು, ಏಳು ಪಿವಿಸಿ ಕೇಬಲ್ಗಳು, ಎರಡು ಆಹಾರ ಮಿಕ್ಸರ್ಗಳು ಮತ್ತು 1 ಸ್ಪೀಕರ್ ಸೇರಿದಂತೆ 3600 ಕ್ಕೂ ಹೆಚ್ಚು ವಸ್ತುಗಳು ಪತ್ತೆಯಾಗಿವೆ.ಸಚಿವಾಲಯದ ಪ್ರಕಾರ, ವಶಪಡಿಸಿಕೊಂಡ ವಸ್ತುಗಳಲ್ಲಿ ಡಿಜಿಸ್ಮಾರ್ಟ್, ಆಕ್ಟಿವಾ, ಇನಾಲ್ಸಾ, ಸೆಲ್ಲೊ ಸ್ವಿಫ್ಟ್ ಮತ್ತು ಬಟರ್ಫ್ಲೈನಂತಹ ಬ್ರಾಂಡ್ಗಳ ಉತ್ಪನ್ನಗಳು ಸೇರಿವೆ.
ಬಿಐಎಸ್ ಟೆಕ್ವಿಷನ್ ಇಂಟರ್ನ್ಯಾಷನಲ್ (BIS Techvision International) ವಿರುದ್ಧ ಬಿಐಎಸ್ ಕಾಯ್ದೆ, 2016ರ ಉಲ್ಲಂಘನೆಗಾಗಿ ಎರಡು ನ್ಯಾಯಾಲಯ ಪ್ರಕರಣಗಳನ್ನು ದಾಖಲಿಸಿದೆ. ಇತರ ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳಿಗಾಗಿ ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಯಲ್ಲಿದೆ (Amazon Flipkart warehouses seized) ಎಂದು ಸಚಿವಾಲಯ ತಿಳಿಸಿದೆ.