ಅತ್ಯಂತ ಸುಂದರವಾದ, ಯಾವುದೇ ಚಿಕ್ಕ ಕುಂದೂ ಇಲ್ಲದ ಸೌಂದರ್ಯಯುತ ಮುಖ ಅಂದ್ರೆ ಆಂಬರ್ ಹರ್ಡ್(Amber Heard) ಅವರದ್ದಂತೆ. ಹೌದು, ಡಿಜಿಟಲ್ ಫೇಶಿಯಲ್-ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಿದ ಮೌಲ್ಯಮಾಪನದಲ್ಲಿ ಅಂಬರ್ ಮುಖವು 91.85% ನಿಖರವಾಗಿದೆ ಎಂದು ಬ್ರಿಟಿಷ್ ಕಾಸ್ಮೆಟಿಕ್ ಸರ್ಜನ್(British Cosmetic Surgeon) ಡಾ. ಜೂಲಿಯನ್ ಡಿ ಸಿಲ್ವಾ ಅವರು ಅಧ್ಯಯನವೊಂದರಲ್ಲಿ ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ಈ ಅಧ್ಯಯನದ ಪ್ರಕಾರ, ವಿಶ್ವದ ಅತ್ಯಂತ ಸುಂದರವಾದ ಮುಖವು ಅಂಬರ್ ಹರ್ಡ್ ಅವರದ್ದಾಗಿದೆ. ಅನೇಕ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಅಂಬರ್ ಹರ್ಡ್ ಅತ್ಯಂತ ಸುಂದರವಾದ ಮುಖ ಹೊಂದಿದ್ದಾರೆ ಎಂದು ತಜ್ಞರು ತೀರ್ಮಾನಿಸಿದ್ದಾರೆ. UK ಯಲ್ಲಿನ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕರ ಅಧ್ಯಯನವು ಅಂಬರ್ ಅವರ ಮುಖವು ಸ್ಥಿರತೆಯಿಂದ ಕೂಡಿದೆ ಎಂದು ಧೃಡಪಡಿಸಿದೆ. ಕಣ್ಣುಗಳು, ತುಟಿಗಳು ಮತ್ತು ಮುಖದ ಆಕಾರದಂತಹ ವೈಶಿಷ್ಟ್ಯಗಳನ್ನು ಆಧರಿಸಿ, ಈ ಅಧ್ಯಯನವು ಫಲಿತಾಂಶ ನೀಡಿದೆ.
ಈ ಅಧ್ಯಯನವು ಗ್ರೀಕ್ ಗೋಲ್ಡನ್ ರೇಶಿಯೋ ಆಫ್ ಬ್ಯೂಟಿಯನ್ನು ಆಧರಿಸಿದೆ. ಅಂಬರ್ ಹರ್ಡ್ ಅವರು, ಆಕ್ವಾಮ್ಯಾನ್, ನೆವರ್ ಬ್ಯಾಕ್ ಡೌನ್, ಮತ್ತು ಡ್ರೈವ್ ಆಂಗ್ರಿ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಜನಪ್ರಿಯರಾಗಿದ್ದಾರೆ. ಪ್ರಸ್ತುತ ಅಕ್ವಾಮ್ಯಾನ್ ನಲ್ಲಿ ನಟಿಸುತ್ತಿದ್ದಾರೆ. ಅಂಬರ್ಹಾರ್ಡ್ 2015 ರಲ್ಲಿ ಜಾನಿ ಡೆಪ್ ಅವರನ್ನು ವಿವಾಹವಾದರು. ಆದರೆ ತಪ್ಪು ತಿಳುವಳಿಕೆಯಿಂದ ಒಂದು ವರ್ಷದೊಳಗೆ ದಂಪತಿಗಳು ಬೇರ್ಪಟ್ಟರು ಮತ್ತು 2017 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಇತ್ತೀಚಿಗೆ ಸಾಕಷ್ಟು ವಿವಾದಗಳಲ್ಲಿ ಸಿಲುಕಿ ಮಾಧ್ಯಮಗಳ ಅಗ್ರಸುದ್ದಿಯಾಗಿದ್ದರು.
- ಪವಿತ್ರ ಸಚಿನ್