download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಆ್ಯಂಬುಲೆನ್ಸ್ ವಾಹನಕ್ಕೆ ದಾರಿ ಬಿಡದೆ ಪುಂಡಾಟ: ಪೊಲೀಸರ ಅತಿಥಿಯಾದ ಕಾರ್ ಡ್ರೈವರ್

ರಸ್ತೆಯಲ್ಲಿ ಇತರ ವಾಹನಗಳು ಬದಿಗೆ ಸರಿದು ಆ್ಯಂಬುಲೆನ್ಸ್​ ಗೆ ದಾರಿ ಮಾಡಿ ಕೊಡುತ್ತಿದ್ದರೂ, ಇರ್ಟಿಗಾ KA19 MJ 8924 ಕಾರಿನ ಚಾಲಕ ಅಡ್ಡಾದಿಡ್ದಿಯಾಗಿ ಚಲಿಸಿ, ಆ್ಯಂಬ್ಯುಲೆನ್ಸ್ ನ ಮುಂದೆ ಮತ್ತಷ್ಟು ವೇಗವಾಗಿ ಸಾಗಿದ್ದಾನೆ.

ಮಂಗಳೂರು, ಜು. 20: ಆ್ಯಂಬುಲೆನ್ಸ್​ಗೆ ದಾರಿ ಬಿಡದೆ ಪುಂಡಾಟ ಮೆರೆದ ಕಾರು ಚಾಲಕನಿಗೆ ಪೊಲೀಸರು ಠಾಣೆಯ ದಾರಿ ತೋರಿಸಿದ್ದಾರೆ.

ಜು.19ರ ಸೋಮವಾರ ಸಂಜೆ ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ತುರ್ತುಚಿಕಿತ್ಸೆಗಾಗಿ ರೋಗಿಯನ್ನು ಅಂಬುಲೆನ್ಸ್ ಮುಖಾಂತರ  ಸಾಗಿಸುವ ಸಂದರ್ಭ ರಸ್ತೆಯಲ್ಲಿ ದಾರಿ ಬಿಡದೆ ಅಮಾನವೀಯವಾಗಿ ವರ್ತಿಸಿದ್ದಾನೆ. ರಸ್ತೆಯಲ್ಲಿ ಇತರ ವಾಹನಗಳು ಬದಿಗೆ ಸರಿದು ಆ್ಯಂಬುಲೆನ್ಸ್​ ಗೆ ದಾರಿ ಮಾಡಿ ಕೊಡುತ್ತಿದ್ದರೂ, ಇರ್ಟಿಗಾ KA19 MJ 8924 ಕಾರಿನ ಚಾಲಕ ಅಡ್ಡಾದಿಡ್ದಿಯಾಗಿ ಚಲಿಸಿ, ಆ್ಯಂಬ್ಯುಲೆನ್ಸ್ ನ ಮುಂದೆ ಮತ್ತಷ್ಟು ವೇಗವಾಗಿ ಸಾಗಿದ್ದಾನೆ.

ಕಾರು ಚಾಲಕನ ಈ ಪುಂಡಾಟವನ್ನ ಆ್ಯಂಬ್ಯುಲೆನ್ಸ್ ನಲ್ಲಿದ್ದವರು ಚಿತ್ರಿಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಕಾರು ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರು ಚಾಲಕನ ಬೆನ್ನತ್ತಿದ ಪೊಲೀಸರು
ಮಂಗಳವಾರ, ಕಾರು ಚಾಲಕ ಉಳ್ಳಾಲ ಕುಂಪಲದ ಚರಣ್(31) ವಶಕ್ಕೆ ಪಡೆದು ಪೊಲೀಸ್ ಠಾಣೆಯ ದಾರಿ ತೋರಿಸಿದ್ದು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಆರೋಪಿ ಕಿವಿಗೆ ಇಯರ್ ಫೋನ್ ಇಟ್ಟು ಕಾರು ಚಲಾವಣೆ ನಡೆಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article