ಉಗ್ರಾಣಗಳ ಕೃಷಿ ಉತ್ಪನ್ನಗಳ ಮಾರಾಟದ ಮೇಲೂ ಸೆಸ್ ಪಾವತಿ ಕಡ್ಡಾಯ
ಅಮೆಜಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಪ್ಲಾಟ್‌ಫಾರ್ಮ್ ವೇದಿಕೆಗಳು ಎಪಿಎಂಸಿ ನಿಯಂತ್ರಣಕ್ಕೆ
ಸೆಸ್ ಪಾವತಿಸದೆ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಹೊಸ ಅಸ್ತ್ರ (Amendment Bill passed in the Assembly)
Bengaluru: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (Agricultural produce market) ವ್ಯವಹಾರಕ್ಕೆ ಸಂಬಂಧ ಪಟ್ಟ ಹಾಗೆ ನಿಯಂತ್ರಣ ಮತ್ತು ತಿದ್ದುಪಡಿ ವಿಧೇಯಕ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.ಮಸೂದೆ ಮಂಡಿಸಿ ಸದನಕ್ಕೆ ವಿವರ ನೀಡಿದ ರಾಜ್ಯ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (State Agriculture Marketing Minister Shivanand Patil), ಈ ಹಿಂದೆ ಸರ್ಕಾರ ಎಪಿಎಂಸಿ ಯಾರ್ಡ್‌ಗಳನ್ನು (APMC yards) ಮಾತ್ರ ನಿಯಂತ್ರಿಸುತ್ತಿತ್ತು.
ಆದರೆ ಈ ಮಸೂದೆ ಕಾನೂನು ಆಗಿ ಜಾರಿಗೆ ಬಂದರೆ ಅಮೆಜಾನ್ (Amazon), ಬಿಗ್ ಬ್ಯಾಸ್ಕೆಟ್ (Big Basket), ಡಿ.ಮಾರ್ಟ್ (D.Mart) ಸೇರಿದಂತೆ ಎಲ್ಲ ಇ–ಪ್ಲಾಟ್‌ಫಾರ್ಮ್ ವೇದಿಕೆಗಳು ಇನ್ಮುಂದೆ ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಸೆಸ್ ಪಾವತಿಸದೆ ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ಈ ಕಾನೂನು ತರುತ್ತಿದ್ದೇವೆ ಎಂದು ಪಾಟೀಲ್ ಸದನಕ್ಕೆ ತಿಳಿಸಿದ್ದಾರೆ.
ಇನ್ನು ತಿದ್ದುಪಡಿ ಮಸೂದೆ ಪರಿಣಾಮವಾಗಿ ಉಗ್ರಾಣಗಳಲ್ಲಿ (Warehouse) ನಡೆಯುವ ಕೃಷಿ ಉತ್ಪನ್ನಗಳ ಮಾರಾಟದ ಮೇಲೂ ಸೆಸ್ ಪಾವತಿ ಕಡ್ಡಾಯವಾಗಲಿದೆ. ಇದರೊಂದಿಗೆ ಇ- ಪ್ಲಾಟ್ ಫಾರ್ಮ್ (E-platform) ಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ನೀಡುವ, ಸೆಸ್ ವಿಧಿಸಿ, ವಸೂಲಿ ಮಾಡುವ ಮತ್ತು ಪರವಾನಗಿ ರದ್ದುಪಡಿಸುವ ಅಥವಾ ಅಮಾನತುಪಡಿಸುವ ಅಧಿಕಾರ ಎಪಿಎಂಸಿ ಅಧಿಕಾರಿಗಳಿಗೆ ಲಭಿಸಲಿದೆ.

ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿ, ಆದೇಶ ಹೊರಡಿಸುವ ಅಧಿಕಾರ ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ದೊರೆಯಲಿದೆ ಎಂದು ವಿವರಿಸಿದ್ದಾರೆ.ಇತ್ತೀಚೆಗೆ ಉದಾನ್ ಎನ್ನುವ ಕಂಪನಿ (E-company ) ಸೆಸ್ ಪಾವತಿಸದಿದ್ದಕ್ಕೆ ರೂ. 25 ಲಕ್ಷ ದಂಡ ಪಾವತಿಸಿದೆ ಎಂದು ತಿಳಿಸಿದ ಸಚಿವರು, E-ಕಾಮರ್ಸ್ ಪ್ಲಾಟ್‌ಫಾರ್ಮ್’ ಅನ್ನು ಆನ್‌ಲೈನ್ ಮಾಧ್ಯಮ ಎಂದು ಬಿಲ್ ವ್ಯಾಖ್ಯಾನಿಸುತ್ತದೆ.
ಇದು ಮಾರುಕಟ್ಟೆ ಪ್ರದೇಶದ ಪರವಾನಗಿ ಪಡೆದ Retail ವ್ಯಾಪಾರಿಗಳಿಗೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.ಇ- ಪಾವತಿ ವಿಧಾನದ (E- Payment method) ಮೂಲಕ ರೈತರು ಹಣ ಪಾವತಿಸಲು ಅವಕಾಶ ಮಾಡಿಕೊಡುತ್ತದೆ.(Amendment Bill passed in the Assembly)
ಇದನ್ನು ಓದಿ: ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್:ಬಸ್, ಮೆಟ್ರೋ ಬೆಲೆ ಏರಿಕೆಯಾಯ್ತು ಈಗ ಆಟೋ ಸರದಿ
ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳ ಮಾರಾಟದ ಬೆಲೆಯ ಶೇಕಡಾ ಐದು ಮತ್ತು ಇತರ ಎಲ್ಲಾ ಅಧಿಸೂಚಿತ ಉತ್ಪನ್ನಗಳಿಗೆ ಶೇಕಡಾ 2 ರ ಮಿತಿ ಇರಲಿದೆ. ಉಗ್ರಾಣಗಳಲ್ಲಿ ಮಾರಾಟಗಾರರ ಸರಕುಗಳ ಸುರಕ್ಷಿತ ಶೇಖರಣೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಬೆಂಕಿ, ಕಳ್ಳತನ, ಪ್ರವಾಹ, ಮಳೆ ಅಥವಾ ಇತರ ನೈಸರ್ಗಿಕ ವಿಪತ್ತುಗಳ (Natural disasters) ವಿರುದ್ಧ ಸಾಕಷ್ಟು ವಿಮಾ ರಕ್ಷಣೆಯನ್ನು ಒದಗಿಸಬೇಕು ಎಂದು ಅವರು ತಿಳಿಸಿದ್ದಾರೆ.