- ಬಾಡಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಸರ್ಕಾರದಿಂದ (Amendment of Karnataka Rent Bill ) ಹೊಸ ಕಾನೂನು ಪ್ರಸ್ತಾಪ
- ಮನೆ ಮಾಲೀಕರ ಅನುಮತಿ ಇಲ್ಲದೇ ಬಾಡಿಗೆ ನೀಡಿದರೆ ಇನ್ಮುಂದೆ ₹50,000 ದಂಡ; ಆನ್‌ಲೈನ್ ನೋಂದಣಿ ಕಡ್ಡಾಯ
- ಅನಧಿಕೃತ ಬ್ರೋಕರ್‌ಗಳಿಗೆ ದಿನಕ್ಕೆ ₹25,000 ದಂಡ
Belgavi: ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಕಳೆದ ಕೆಲ ವರ್ಷಗಳಿಂದ ಬಾಡಿಗೆ ಮನೆಗಳ ಸಂಖ್ಯೆ (Amendment of Karnataka Rent Bill) ಹೆಚ್ಚಾಗುತ್ತಿರುವುದರಿಂದ, ಈ ಏರಿಕೆಗೆ ಅನುಗುಣವಾಗಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಕಲಹಗಳೂ ಹೆಚ್ಚಾಗುತ್ತಿವೆ.
ಬಾಡಿಗೆ ಒಪ್ಪಂದಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು, ಕಾನೂನುಬದ್ಧ ದಾಖಲೆಗಳ ಕೊರತೆ, ಮತ್ತು ಮಧ್ಯವರ್ತಿಗಳ ಅನೌಪಚಾರಿಕ ವ್ಯವಹಾರಗಳು ಜನರಿಗೆ ತೊಂದರೆ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಬಾಡಿಗೆ ಸಂಬಂಧಿತ ವ್ಯವಸ್ಥೆಗೆ ಹೊಸ ರೂಪ ನೀಡಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ (H.K.Patel) ಅವರು ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ–2025 ಅನ್ನು ವಿಧಾನಸಭೆಯಲ್ಲಿ ಅಧಿಕೃತವಾಗಿ ಮಂಡಿಸಿದರು.
1999ರ ಬಾಡಿಗೆ ಕಾಯ್ದೆಗೆ ಮೆರಗು ನೀಡುವ ಉದ್ದೇಶದಿಂದ ತರಲಾಗಿರುವ (Amendment of Karnataka Rent Bill) ಈ ಮಸೂದೆ, ಬಾಡಿಗೆ ವಲಯದಲ್ಲಿನ ಎರಡು ಬದಿಗಳಾದ ಬಾಡಿಗೆದಾರರು ಮತ್ತು ಮಾಲೀಕರಿಬ್ಬರಿಗೂ ಸಮಾನ ನ್ಯಾಯ ನೀಡುವತ್ತ ಲಕ್ಷ್ಯ ಹರಿಸಿದೆ.
ಇನ್ನು ಹೊಸದಾಗಿ ಪ್ರಸ್ತಾಪಿಸಿರುವ ತಿದ್ದುಪಡಿಗಳಲ್ಲಿ ದಂಡ ಮೊತ್ತಗಳ ಏರಿಕೆ ದೊಡ್ಡ ಬದಲಾವಣೆಯಾಗಿ ಕಾಣಿಸುತ್ತದೆ.
ಇದುವರೆಗೆ ಬಾಡಿಗೆ ಮನೆಯನ್ನು ಮಾಲೀಕರ ಅನುಮತಿ ಇಲ್ಲದೇ ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದರೆ ಶೇ.5000 ದಂಡ ವಿಧಿಸುತ್ತಿದ್ದರು.
ಆದರೆ ಈಗ ಈ ಮೊತ್ತವನ್ನು 50,000 ರೂ.ವರೆಗೆ ಏರಿಸಲು ಸರ್ಕಾರ ತೀರ್ಮಾನಿಸಿದೆ.
ಶೇಕಡಾ 90ರಷ್ಟು ದಂಡ ಹೆಚ್ಚಳವನ್ನು ಒಳಗೊಂಡಿರುವ ಈ ಬದಲಾವಣೆ ಮೂಲಕ ನಿಯಮಗಳನ್ನು ಕಟ್ಟು ನಿಟ್ಟಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಅಲ್ಲದೆ, ಕಳೆದ ಕೆಲವು ವರ್ಷಗಳಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುವ ಬ್ರೋಕರ್‌ಗಳ (Broker) ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅನೇಕ ದೂರಗಳು ದಾಖಲಾಗಿರುವುದರಿಂದ, ಅವರ ಮೇಲಿನ ನಿಗಾವ್ಯವಸ್ಥೆಯೂ ಕಠಿಣಗೊಳ್ಳಲಿದೆ.
ಕಾಯ್ದೆಯ ಸೆಕ್ಷನ್ (Section) 20ರ ಅನ್ವಯ, ನೋಂದಣಿ ಮಾಡಿಕೊಳ್ಳದ ಬ್ರೋಕರ್‌ಗಳಿಗೆ ಪ್ರತಿದಿನ ₹25,000 ದಂಡ ವಿಧಿಸಲಾಗುವುದು.
ಹಿಂದಿನ ₹2,000 ದಂಡಕ್ಕೆ ಹೋಲಿಸಿದರೆ ಇದು ದೊಡ್ಡ ಮಟ್ಟದ ಏರಿಕೆ.
ಇದೇ ತಪ್ಪನ್ನು ನಿರಂತರವಾಗಿ ಮುಂದುವರಿಸಿದರೆ ದಿನಕ್ಕೆ ಇನ್ನೂ ₹20,000 ಹೆಚ್ಚುವರಿ ದಂಡ ವಿಧಿಸುವ ನಿಬಂಧನೆಯೂ ಸೇರಿಸಲಾಗಿದೆ.
ಬಾಡಿಗೆ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ತೆಗೆದುಕೊಂಡಿರುವ ಪ್ರಮುಖ ಹೆಜ್ಜೆ ಎಂದರೆ, ಬಾಡಿಗೆ ಒಪ್ಪಂದಗಳನ್ನು ಆನ್‌ಲೈನ್ (Online) ಮೂಲಕ ನೋಂದಾಯಿಸುವ ಪೋರ್ಟಲ್ (Portal) ಪ್ರಾರಂಭವಾಗಿದೆ.
ನಗರಗಳಲ್ಲಿ ಸಾಮಾನ್ಯವಾಗಿ ಕೈಬರಹದ ಅನೌಪಚಾರಿಕ ಒಪ್ಪಂದಗಳು ನಡೆದು ಅನೇಕ ವಿವಾದಗಳಿಗೆ ಕಾರಣವಾಗುತ್ತವೆ.
ಹೊಸ ಪೋರ್ಟಲ್ ಬಳಸಿ ದಾಖಲೆಗಳನ್ನು ಡಿಜಿಟಲ್ (Digital) ರೂಪದಲ್ಲಿ ಸಂರಕ್ಷಿಸುವ ಮೂಲಕ, ಬಾಡಿಗೆ ವಿವಾದಗಳು ಕಡಿಮೆಯಾಗಲಿದ್ದು, ಇರುವುಡು ಪಕ್ಷಗಳಿಗೂ ಕಾನೂನುಬದ್ಧ ದಾಖಲೆಗಳು ಲಭ್ಯವಾಗಲಿದೆ.
ಬಾಡಿಗೆ ಒಪ್ಪಂದಗಳ ಡಿಜಿಟಲೀಕರಣದಿಂದ ಅನಗತ್ಯ ಮಧ್ಯವರ್ತಿಗಳ ಪ್ರಭಾವ ಕಡಿಮೆಯಾಗುವ ಸಾಧ್ಯತೆಗಳೂ ಇದ್ದು, ಇದರಿಂದ ಸಾಮಾನ್ಯ ಜನರು ದುಬಾರಿ ಕಮಿಷನ್‌ಗಳಿಗೆ ಸಿಲುಕದಂತೆ ರಕ್ಷಣೆ ಸಿಗುತ್ತದೆ.
ಮಸೂದೆ ಪ್ರಕಾರ, ಮನೆ ಮಾಲೀಕರು ಬಾಡಿಗೆದಾರರನ್ನು ಮನೆ ಖಾಲಿ ಮಾಡುವಂತೆ ಹೇಳುವುದಕ್ಕೂ ಈಗ ನಿರ್ದಿಷ್ಟ ನೋಟಿಸ್ (Notice) ಅವಧಿ ಮೊದಲೇ ನೀಡುವುದು ಕಡ್ಡಾಯ. ಇದರಿಂದ ಬಾಡಿಗೆದಾರರಿಗೆ ತಕ್ಷಣದ ಅನ್ಯಾಯವಾಗದಂತೆ ಸರ್ಕಾರ ಉದ್ದೇಶಿಸಿದೆ.
ಜೊತೆಗೆ, ಕಡಿಮೆ ಬಾಡಿಗೆಗೆ ಮನೆ ನೀಡುವ ಮನೆಮಾಲೀಕರಿಗೆ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿ ನೀಡುವ ಪ್ರಸ್ತಾಪವೂ ಸರ್ಕಾರದ ಚಿಂತನೆಯಲ್ಲಿದೆ.
ಇದು ನಗರಗಳಲ್ಲಿ ಕಡಿಮೆ ಬಾಡಿಗೆಯ ಮನೆಗಳ ಲಭ್ಯತೆ ಹೆಚ್ಚಿಸಲು ನೆರವಾಗಲಿದೆ. ಬಾಡಿಗೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಇದು ಸಹಾಯಕವಾಗಬಹುದು ಎಂಬ ನಿರೀಕ್ಷೆ ಮೂಡಿದೆ.
ಇದನ್ನು ಓದಿ : ತಿರುಮಲ ತಿರುಪತಿ ದೇವಸ್ಥಾನದಲ್ಲಿ ರೇಷ್ಮೆ ಶಾಲು ಪೂರೈಕೆಯಲ್ಲಿ ಅಕ್ರಮ: 10 ವರ್ಷಗಳಿಂದ ನಡೆಯುತ್ತಿದ್ದ ವಂಚನೆ ಬಯಲು