ವಾಷಿಂಗ್ಟನ್, ಆ. 04: ಕೊರೊನಾ ಅವಧಿಯಲ್ಲಿ ಮನೆ ಬಾಡಿಗೆ ಪಾವತಿಸಲಾಗದೇ ಪರಿತಪಿಸುತ್ತಿದ್ದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೋಗ ತಡೆ ಮತ್ತು ನಿಯಂತ್ರಣ ಕೇಂದ್ರ (ಸಿಡಿಸಿ) ‘ಬಾಡಿಗೆ ಪಾವತಿಸದಿದ್ದರೂ ಅವರನ್ನು ಮನೆಗಳಿಂದ ಹೊರ ಹಾಕದಂತೆ ರಕ್ಷಿಸುವಂತಹ ಹೊಸ ನಿಯಮ’ವನ್ನು ಜಾರಿಗೊಳಿಸಿದೆ.
ಮಂಗಳವಾರ ಈ ಹೊಸ ನಿಯಮವನ್ನು ಪ್ರಕಟಿಸಲಾಗಿದ್ದು, ಇದು ಅಕ್ಟೋಬರ್ 3ರವರೆಗೆ ಜಾರಿಯಲ್ಲಿರಲಿದೆ.
ಕೊರೊನಾ ಡೆಲ್ಟಾ ರೂಪಾಂತರ ತಳಿ ಹರಡುತ್ತಿರುವುದರ ಜೊತೆಗೆ, ರಾಜ್ಯ ಸರ್ಕಾರಗಳು ಬಾಡಿಗೆ ಸಹಾಯ ಧನವನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಘೋಷಿಸಿದ ಈ ಹೊಸ ನಿಯಮದಿಂದ ಲಕ್ಷಾಂತರ ಜನರು ನೆಮ್ಮದಿಯಾಗಿ ಈಗಿರುವ ಮನೆಗಳಲ್ಲೇ ಮುಂದುವರಿಸಲು ಸಹಾಯವಾಗಿದೆ.