Visit Channel

100ಕ್ಕೂ ಹೆಚ್ಚು ರಾಷ್ಟ್ರಗಳಿಂದ ನಾಯಿ ತರಲು ನಿರ್ಬಂಧ ಹೇರಿದ ಅಮೆರಿಕಾ

dog-dogs-1578381157

ನ್ಯೂಯಾರ್ಕ್‌,ಜೂ.15: ರೇಬಿಸ್ ರೋಗ ಹೆಚ್ಚಾಗಿರುವ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳಿಂದ ನಾಯಿಗಳನ್ನು ಅಮೆರಿಕಕ್ಕೆ ತರುವುದಕ್ಕೆ ಒಂದು ವರ್ಷಗಳ ನಿರ್ಬಂಧ ವಿಧಿಸಲಾಗಿದೆ. ಈ ನಿಬಂಧನೆ ಜುಲೈ 14 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕದ ಆರೋಗ್ಯ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಒಂದು ವೇಳೆ ಅಂಥ ದೇಶಗಳಿಂದ ತರುವಂತಹ ನಾಯಿಗಳಿಗೆ ಈಗಾಗಲೇ ರೇಬೀಸ್ ಲಸಿಕೆ ಹಾಕಿಸಿರುವ ಕುರಿತು ಪುರಾವೆಯನ್ನು ಒದಗಿಸಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ‘ಎಪಿ’ ವರದಿ ಮಾಡಿದೆ.

ಇತ್ತೀಚೆಗೆ ಅಮೆರಿಕಕ್ಕೆ ನಾಯಿಮರಿಗಳನ್ನು ತರುವ ಪ್ರಕ್ರಿಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಈ ಷರತ್ತು ಬದ್ಧ ನಿಬಂಧನೆ ವಿಧಿಸಲಾಗುತ್ತಿದೆ. ಏಕೆಂದರೆ, ನಾಯಿ ಮರಿಗಳಿಗೆ ಲಸಿಕೆ ಹಾಕಿಸುವಷ್ಟು ವಯಸ್ಸಾಗಿರುವುದಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿವೆ.

ಅಮೆರಿಕದ ಆರೋಗ್ಯ ಸಚಿವಾಲಯದ ಈ ಕ್ರಮವನ್ನು ಅಮೆರಿಕದ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡೌಗ್ಲಾಸ್ ಕ್ರಾಟ್ ಶ್ಲಾಘಿಸಿದ್ದಾರೆ. ‘ಅಮೆರಿಕಕ್ಕೆ ಆರೋಗ್ಯವಂತಹ ನಾಯಿಗಳನ್ನು ತರಬೇಕು, ಅದರಲ್ಲೂ ವಿಶೇಷವಾಗಿ ನಾಯಿಮರಿಗಳನ್ನು ತರುವಾಗ ಅವುಗಳ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಬೇಕು‘ ಎಂದು ವಿಸ್ಕಾನ್ ಸಿನ್ನ ಲಾ ಕ್ರಾಸ್‌ನ ಪಶು ತಜ್ಞ ಕ್ರಟ್ಟಾ ಅಭಿಪ್ರಾಯಪಟ್ಟಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.