ದೆಹಲಿ, ಜ. 01: ಭಾರತಕ್ಕೆ ಭೇಟಿ ನೀಡಿದ ಒಂದು ವರ್ಷದ ಬಳಿಕ ಅಮೆಜಾನ್ ಸಿಇಓ ಜೆಫ್ ಬೆಜೋಸ್ ತನ್ನ ಭವಿಷ್ಯದ ಇಂಜಿನಿಯರ್ ಕಾರ್ಯಕ್ರಮವನ್ನು ದೇಶದಲ್ಲಿ ಪ್ರಸ್ತುತಪಡಿಸುತ್ತಿದೆ.
ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕೋಡಿಂಗ್ ಹಾಗೂ ಇತರೆ ಕಂಪ್ಯೂಟರ್ ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ.
ಈ ವೃತ್ತಿಪರ ಕೌಶಲ್ಯದ ಕಾರ್ಯಕ್ರಮವನ್ನು ಪ್ರಸ್ತುತ ಅಮೆಜಾನ್ ಅಮೆರಿಕಾದಲ್ಲಿ ನಡೆಸುತ್ತಿದೆ. ಅಮೆಜಾನ್, ಭಾರತದಲ್ಲಿ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮವನ್ನು ಮುನ್ನೆಡಸಲು ವ್ಯವಸ್ಥಾಪಕರನ್ನು ಹುಡುಕುತ್ತಿದೆ.
ನಾವು ಭಾರತದಲ್ಲಿ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮವನ್ನ ಪ್ರಾರಂಭಿಸಲು ಹಾಗೂ ನಿರ್ವಹಿಸಬಲ್ಲ ನಾಯಕನ ಹುಡುಕಾಟದಲ್ಲಿದ್ದೇವೆ. ಜಾಬ್ ಪೋಸ್ಟ್ ವೆಬ್ಸೈಟ್ ಉದ್ಯೋಗ ಪಟ್ಟಿಯ ಪ್ರಕಾರ 2021ರಲ್ಲಿ ಕಂಪನಿಯು ಈ ಕಾರ್ಯಕ್ರಮವನ್ನ ಪ್ರಾರಂಭಿಸಲು ಯೋಜಿಸುತ್ತಿದೆ.
ಈ ಪಟ್ಟಿಯಲ್ಲಿ ಅಮೆಜಾನ್ ಇಂಡಿಯಾದ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ತಂಡದ ಭಾಗವಾಗಿ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮವನ್ನ ಮುನ್ನೆಡಸಲು ಪೂರ್ಣ ಸಮಯದ ಗುತ್ತಿಗೆ ಸ್ಥಾನ ಎಂದು ಉಲ್ಲೇಖಿಸಲಾಗಿದೆ.