It has become a habit for Rahul Gandhi to make anti-national statements: Amit Shah
New Delhi: ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ (Rahul Gandhi) ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಸಂಸದ ರಾಹುಲ್ ಗಾಂಧಿಗೆ ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದು ಅಭ್ಯಾಸವಾಗಿಬಿಟ್ಟಿದೆ ಮತ್ತು ದೇಶದ ಜನರ ಭಾವನೆಗಳಿಗೆ ಧಕ್ಕೆ ತರುವುದೇ ಕೆಲಸ ಎಂದು ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ದೇಶವನ್ನು ವಿಭಜಿಸುವ ಶಕ್ತಿಗಳ ಪರ ನಿಲ್ಲುವುದು, ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಮಾತುಗಳು ಮತ್ತು ಮೀಸಲಾತಿ ವಿರೋಧಿ ಅಜೆಂಡಾ ಆಗಿರಬಹುದು ಅಥವಾ ವಿದೇಶಿ ವೇದಿಕೆಗಳಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದೇ ಕೆಲಸ ಎಂದು ಹೇಳಿದರು.
ದೇಶದಿಂದ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುವ ಮೂಲಕ ರಾಹುಲ್ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್ನ (Congress) ಮೀಸಲಾತಿ ವಿರೋಧಿ ಮುಖವನ್ನು ಹೊರತಂದಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯು ಪ್ರಾದೇಶಿಕತೆ, ಧರ್ಮ ಮತ್ತು ಭಾಷಿಕ ಭಿನ್ನಾಭಿಪ್ರಾಯದ ರೀತಿಯಲ್ಲಿ ಬಿರುಕುಗಳನ್ನು ಸೃಷ್ಟಿಸುವ ಕಾಂಗ್ರೆಸ್ನ ರಾಜಕೀಯವನ್ನು ಬಹಿರಂಗಪಡಿಸುತ್ತದೆ.
Amit Shah Against Rahul Gandhi Viral News
ಅವರ ಮನಸ್ಸಿನಲ್ಲಿದ್ದ ವಿಚಾರಗಳು ಮಾತಿನ ರೂಪದಲ್ಲಿ ಹೊರಬಂದಿವೆ. ಬಿಜೆಪಿ (BJP) ಇರುವವರೆಗೂ ಮೀಸಲಾತಿಯನ್ನು ಯಾರೂ ರದ್ದು ಮಾಡಲು ಸಾಧ್ಯವಿಲ್ಲ ಮತ್ತು ದೇಶದ ಭದ್ರತೆಯೊಂದಿಗೆ ಆಟವಾಡಲು ಸಾಧ್ಯವಿಲ್ಲ ಎಂದು ನಾನು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ ಎಂದರು. ಅಮೆರಿಕ ಪ್ರವಾಸದ ವೇಳೆ ರಾಹುಲ್ ಗಾಂಧಿ ಅಲ್ಲಿನ ಭಾರತೀಯ ಅಮೆರಿಕನ್ ಸಮುದಾಯದ ನೂರಾರು ಜನರೊಂದಿಗೆ ಸಂವಾದ ನಡೆಸಿದರು.
New Delhi: Rahul Gandhi, who is on a US tour, is making anti-national statements. Home Minister Amit Shah has criticized MP Rahul Gandhi for making anti-national statements.
Home Minister Amit Shah said that Rahul Gandhi and the Congress have become a habit of standing for the forces that divide the country and making anti-national statements. Anti-national speech in Jammu and Kashmir and He said that the work could be anti-national speech and anti-reservation agenda in Kashmir or making anti-India statements in foreign forums.
Rahul Gandhi has once again brought out the anti-reservation face of Congress by talking about ending reservation from the country. Rahul Gandhi’s statement exposes the politics of Congress which creates rifts along the lines of regionalism, religion and linguistic differences.
The ideas in his mind came out in the form of speech. “I want to tell Rahul Gandhi that no one can abolish reservation and play with the security of the country as long as there is BJP,” he said. During his visit to America, Rahul Gandhi interacted with hundreds of people from the Indian American community there.