ಗುಜರಾತ್ ಗಲಭೆ ಪ್ರಕರಣದ(Gujarat Riot Case) ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ಯಾವುದೇ ನಾಟಕ ಮಾಡಿಲ್ಲ ಮತ್ತು ಸತ್ಯಕ್ಕಾಗಿ ಕಾಯುತ್ತಿದ್ದರು ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಹೇಳಿಕೆಯ ವಿರುದ್ಧ ಕೇಂದ್ರ ಸಚಿವ(Home Minister) ಅಮಿತ್ ಶಾ(Amit Shah) ಶನಿವಾರ ವಾಗ್ದಾಳಿ ನಡೆಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ(National Herald Case) ರಾಹುಲ್ ಗಾಂಧಿ ಅವರನ್ನು ಇ.ಡಿ ಪ್ರಶ್ನಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಳೆದ ವಾರ ಜಾರಿ ನಿರ್ದೇಶನಾಲಯದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. “ಮೋದಿ ಜಿ ಎಸ್ಐಟಿ(SIT) ಮುಂದೆ ಹಾಜರಾಗುವಾಗ ನಾಟಕ ಮಾಡಲಿಲ್ಲ. ಎಸ್ಐಟಿ ಸಿಎಂಗೆ ಪ್ರಶ್ನೆ ಮಾಡಲು ಬಯಸಿದರೆ, ಅವರೇ ಸಹಕರಿಸಲು ಸಿದ್ಧ, ಏಕೆ ಪ್ರತಿಭಟನೆ?,” ಎಂದು ಅಮಿತಾ ಶಾ ಹೇಳಿರುವುದನ್ನು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಂವಿಧಾನವನ್ನು ಹೇಗೆ ಗೌರವಿಸಬಹುದು ಎಂಬುದನ್ನು ತೋರಿಸಲು ಮೋದಿಜಿ ಒಬ್ಬ ಅದ್ಬುತ ನಿದರ್ಶನ. ಮೋದಿ ಜೀ ವಿರುದ್ಧ ಆರೋಪ ಮಾಡಿದವರು ಒಂದು ವೇಳೆ ಆತ್ಮಸಾಕ್ಷಿ ಇದ್ದರೇ ಕ್ಷಮೆ ಕೇಳಬೇಕು. ಈ ಪ್ರಕರಣದಲ್ಲಿ ಪ್ರಧಾನಿ ಮೋದಿ ಮತ್ತು ಇತರ 63 ಮಂದಿಗೆ ತನಿಖಾ ಸಂಸ್ಥೆ ನೀಡಿದ ಕ್ಲೀನ್ ಚಿಟ್ ಅನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಒಂದು ದಿನದ ನಂತರವೇ ಈ ಹೇಳಿಕೆ ಬಂದಿದೆ. ಸುಪ್ರೀಂ ಕೋರ್ಟ್ ಗುಜರಾತ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ ಮತ್ತು ಜಾಫ್ರಿ ಅವರ ಮನವಿಯು ಅರ್ಹವಾಗಿಲ್ಲ ಎಂದು ಅವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ.