New Delhi : ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು (Amit Shah promise to wrestlers) ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ
ಅವರನ್ನು ಭೇಟಿಯಾಗಿ, ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ (Head of Indian Wrestling Federation) ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan
Singh) ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಕುಸ್ತಿಪಟುಗಳಾದ ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಗೃಹ ಸಚಿವರನ್ನು ಭೇಟಿಯಾಗಿ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ತ್ವರಿತ ಕ್ರಮ
ತೆಗೆದುಕೊಳ್ಳಬೇಕು ಎಂದು (Amit Shah promise to wrestlers) ಒತ್ತಾಯಿಸಿದ್ದಾರೆ.
ಕುಸ್ತಿಪಟುಗಳ ಮನವಿ ಆಲಿಸಿದ ಅಮಿತ್ ಶಾ, ಕಾನೂನು ಎಲ್ಲರಿಗೂ ಒಂದೇ, ಅದು ತನ್ನದೇ ಆದ ಕ್ರಮಗಳನ್ನು ತೆಗೆದುಕೊಳ್ಳಲಿದೆ. ನ್ಯಾಯಾಲಯ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿದೆ.
ಭಾರತ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ್ದು ನೀವೆಲ್ಲರೂ ನ್ಯಾಯಾಂಗದ ಮೇಲೆ ನಂಬಿಕೆಯನ್ನಿಡಬೇಕು.
ಇದನ್ನೂ ಓದಿ : https://vijayatimes.com/pavagadh-govt-hospital-incident/
ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ತಮ್ಮ ಸರ್ಕಾರ ಬದ್ದವಾಗಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ,
ಕುಸ್ತಿಪಟುಗಳು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ನಾನು ತಪ್ಪು ಮಾಡಿದ್ದರೆ, ನನ್ನ ವಿರುದ್ದದ ಸಾಕ್ಷಿಗಳನ್ನು ಪೊಲೀಸ್ ಅಧಿಕಾರಿಗಳಿಗೆ ಅಥವಾ ನ್ಯಾಯಾಲಯಕ್ಕೆ (Court) ಸಲ್ಲಿಸಲಿ.
ಅದನ್ನು ಬಿಟ್ಟು ದೇಶದ ಗಮನ ಸೆಳೆಯಲು, ಕೇವಲ ಆರೋಪಗಳನ್ನು ಮಾಡುತ್ತಾ, ಪ್ರತಿಭಟನೆ ಮಾಡುವುದು ಸರಿಯಲ್ಲ. ಅವರ ಬಳಿ ಸಾಕ್ಷ್ಯಗಳಿದ್ದರೆ,
ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಎಂದು ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಸವಾಲು ಹಾಕಿದ್ದಾರೆ.

ಮೇ 28ರಂದು ಹೊಸ ಸಂಸತ್ ಉದ್ಘಾಟನೆ ವೇಳೆ ಸಂಸತ್ ಭವನದೆಡೆಗೆ ಮೆರವಣಿಗೆ ಹೊರಟ ಕುಸ್ತಿಪಟುಗಳನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ತದನಂತರ ಕುಸ್ತಿಪಟುಗಳು ತಾವು ಗೆದ್ದಿದ್ದ ಪದಕಗಳನ್ನು ಗಂಗಾ ನದಿಯಲ್ಲಿ ವಿರ್ಸಜನೆ ಮಾಡಲು ಹರಿದ್ವಾರಕ್ಕೆ ತೆರಳಿದ್ದರು. ಆದರೆ ಕೆಲ ರೈತ ಮುಖಂಡರು ಅದನ್ನು ಪಡೆದಿದ್ದರು. ಬಳಿಕ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ಐದು ದಿನದ ಗಡುವು ನೀಡಿದ್ದರು.