vijaya times advertisements
Visit Channel

Bihar Politics : ಲಾಲು ತೊಡೆಯ ಮೇಲೆ ಕೂರಲು ನಿತೀಶ್ ಬಿಹಾರಕ್ಕೆ ದ್ರೋಹ ಬಗೆದಿದ್ದಾರೆ ; ಅಮಿತ್ ಶಾ

Amit shah

Bihar : ಕೇಂದ್ರ ಗೃಹ ಸಚಿವ (Union Home Minister) ಅಮಿತ್ ಶಾ ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Amit shah slams nithish kumar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Amit shah slams nithish kumar

2024 ರಲ್ಲಿ ತಾನು ಪ್ರಧಾನಿಯಾಗುವ ಗುರಿ ಹೊಂದಿದ್ದು, ಲಾಲು ಪ್ರಸಾದ್ ಯಾದವ್(Lalu Prasad Yadav) ಅವರ ತೊಡೆಯ ಮೇಲೆ ಕುಳಿತುಕೊಳ್ಳಲು ನಿತೀಶ್ ಕುಮಾರ್ ದ್ರೋಹ ಮಾಡಿದ್ದಾರೆ ಎಂದು ಹೇಳುವ ಮುಖೇನ ಜೆಡಿಯು ಪಕ್ಷದ (JDU Party) ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : https://vijayatimes.com/is-dumas-beach-haunted/

ಎರಡು ದಿನಗಳ ಬಿಹಾರ ಪ್ರವಾಸದಲ್ಲಿರುವ ಅಮಿತ್ ಶಾ, ಲಾಲು ಪ್ರಸಾದ್ ಯಾದವ್ (Lalu Prasad Yadav) ತೊಡೆಯ ಮೇಲೆ ಕೂರಲು ನಿತೀಶ್ ಕುಮಾರ್ ಬಿಜೆಪಿಗೆ (BJP) ಹಾಗೂ ಬಿಹಾರಕ್ಕೆ ದ್ರೋಹ ಮಾಡಿದ್ದಾರೆ. ನಿತೀಶ್ ಕುಮಾರ್ಗೆ ಸೀಮಾಂಚಲ್ ತಕ್ಕ ಪ್ರತ್ಯುತ್ತರ ನೀಡಲಿದೆ.

Amit shah

ರಾಜಕೀಯ ಮೈತ್ರಿ ಬದಲಿಸಿ ನಿತೀಶ್ ಕುಮಾರ್ ಪ್ರಧಾನಿಯಾಗಬಹುದೇ? ಪ್ರಧಾನಿ ನರೇಂದ್ರ ಮೋದಿ ನಿಮಗೆ ಸಿಎಂ ಸ್ಥಾನದ ಭರವಸೆ ನೀಡಿದ್ದರಿಂದ ಬಿಜೆಪಿ ಉದಾತ್ತತೆ ತೋರಿಸಿದೆ.

ಆದರೆ, ಲೋಕಸಭೆ ಚುನಾವಣೆ ಹತ್ತಿರ ಬಂದಾಗ, ನೀವು ಮುಂದಿನ ಪ್ರಧಾನಿಯಾಗುವ ಆಸೆಯಿಂದ ನಮಗೆ ದ್ರೋಹ ಮಾಡಿದ್ದೀರಿ.

https://youtu.be/Cudrke2v31Y ತಿನ್ನುವ ಆಹಾರದಲ್ಲಿ ಹುಳ!

ಬಿಹಾರದ ಜನತೆಗೆ ನಿಮ್ಮ ಪರಿಚಯ ಚೆನ್ನಾಗಿದೆ. ಬಿಹಾರ ಜನತೆಗೆ ಈಗ ನಿಮ್ಮ ಬಣ್ಣ ತಿಳಿದಿದೆ ಎಂದು ಹೇಳಿದರು. ಪೂರ್ಣೆಯಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ,

ಮಾತನಾಡಿದ ಹಿರಿಯ ಬಿಜೆಪಿ ನಾಯಕ ಅಮಿತ್ ಶಾ, ನಿತೀಶ್ ಕುಮಾರ್ ನಾನು ಅಶಾಂತಿಯನ್ನು ಹುಟ್ಟುಹಾಕಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳುತ್ತಾರೆ.

Bihar

ನಾನು ಅಶಾಂತಿ ಹುಟ್ಟಿಸಲು ಇಲ್ಲಿಗೆ ಬಂದಿಲ್ಲ. ಅದಕ್ಕೆ ಲಾಲು ಪ್ರಸಾದ್ ಯಾದವ್ ಸಾಕು. ನಿತೀಶ್ ಜೀ ಅವರು ಲಾಲು ಜಿ ಅವರ ತೊಡೆಯ ಮೇಲೆ ಕುಳಿತಿರುವಾಗ,

ಗಡಿ ಜಿಲ್ಲೆಗಳು ಭಾರತದ ಒಂದು ಭಾಗವೆಂದು ಹೇಳಲು ನಾನು ಇಲ್ಲಿದ್ದೇನೆ. ಭಯಪಡಬೇಡಿ. ಪ್ರಧಾನಿ ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ನಾವು ಚಿಂತಿಸಬೇಕಾಗಿಲ್ಲ!

ಇದನ್ನೂ ಓದಿ : https://vijayatimes.com/araga-jnanendra-statement/

ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪೂರ್ಣಿಯಾದ ಚುನಾಪುರ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದ ಕೇಂದ್ರ ಸಚಿವರು, ಅಲ್ಲಿಂದ ರಂಗಭೂಮಿ ಮೈದಾನಕ್ಕೆ ತೆರಳಿ ‘ಜನಸಭಾ ರ್ಯಾಲಿ’ ಉದ್ದೇಶಿಸಿ ಮಾತನಾಡಿದರು.

Latest News

PFI
ಪ್ರಮುಖ ಸುದ್ದಿ

PFI ಸೇರಿ ಅದರ 8 ಸಹವರ್ತಿ ಸಂಸ್ಥೆಗಳ ಮೇಲೆ ನಿಷೇಧ ಹೇರಿದ ಕೇಂದ್ರ ಗೃಹ ಸಚಿವಾಲಯ!

“ಕೇಂದ್ರ ಸರ್ಕಾರ, ಐದು ವರ್ಷಗಳ ಅವಧಿಗೆ ಪಿಎಫ್‌ಐ ಅನ್ನು ನಿಷೇಧಿಸಿರುವುದು ದೃಢ ಮತ್ತು ಸಮಯೋಚಿತ ಕ್ರಮ. ಆದರೆ ಈ ಹಿಂದೆ ಕಾಂಗ್ರೆಸ್, ಎಸ್ಪಿ.

Cricket
ಕ್ರೀಡೆ

ಇಂದು ಭಾರತ- ದ.ಆಫ್ರಿಕಾ ನಡುವೆ ಮೊದಲ T-20 ಪಂದ್ಯ ; ವೇಳೆ, ನೇರಪ್ರಸಾರ, ತಂಡಗಳ ಮಾಹಿತಿ ಇಲ್ಲಿದೆ ನೋಡಿ

ಈ ಸರಣಿಯು ವಿಶ್ವಕಪ್​ನ ಪೂರ್ವ ಸಿದ್ಧತಾ ಪಂದ್ಯವೆಂದು ಪರಿಗಣಿಸಲಾಗಿದೆ. ಈ ಸರಣಿಗೂ ರೋಹಿತ್ ಶರ್ಮಾ(Rohit Sharma) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ.

ಪ್ರಮುಖ ಸುದ್ದಿ

220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

(PAR Act on PFI workers) ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ, ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯುತ್ತಾರೆ.