Karnataka : 2023ರ ವಿಧಾನಸಭಾ ಚುನಾವಣಾ(Assembly elections) ಉದ್ದೇಶದ ಹಿನ್ನೆಲೆ ಕರ್ನಾಟಕ ರಾಜ್ಯದ(AmitShah accused Congress and JDS) ಹಳೇ ಮೈಸೂರು ಭಾಗಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ,
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಭ್ರಷ್ಟ ಮತ್ತು ಪರಿವಾರವಾದಿ ಪಕ್ಷಗಳು ಎಂದು ನೇರವಾಗಿ ದೂಷಿಸಿದ್ದಾರೆ.
ಕರ್ನಾಟಕದಲ್ಲಿ ಚುನಾವಣಾ ಅಂಗವಾಗಿ ಕಣಕ್ಕಿಳಿದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ಕರ್ನಾಟಕದ ಹಳೇ ಮೈಸೂರು ಭಾಗಕ್ಕೆ ಭೇಟಿ ನೀಡಿ ಮಾತನಾಡಿದ್ದು,
ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS) ಎರಡು ಪಕ್ಷಗಳು ಭ್ರಷ್ಟತೆಯಲ್ಲಿ ತೊಡಗಿಸಿಕೊಂಡಿದೆ ಹಾಗೂ ‘ಪರಿವಾರವಾದಿ’ (ಕುಟುಂಬ ರಾಜಕೀಯ) ಮಾಡುವ ಪಕ್ಷಗಳಾಗಿವೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಮಂಡ್ಯ ಮತ್ತು ಹಳೇ ಮೈಸೂರು ಭಾಗದ ಜನರು ಬಿಜೆಪಿಯನ್ನು(BJP) ಬೆಂಬಲಿಸಿ ಮತ್ತೊಮ್ಮೆ ಕರೆತರುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಒತ್ತಿ ಹೇಳಿದರು. ಒಕ್ಕಲಿಗ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ದುರ್ಬಲವಾಗಿದೆ ಎಂದು ಪರಿಗಣಿಸಲಾಗಿದ್ದು,
ಇದನ್ನೂ ಓದಿ : https://vijayatimes.com/football-superstar-pele/
2023ರ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಲು ಇತ್ತ ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಬಾರಿ ಮಂಡ್ಯ(Mandya), ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದಿಂದ ಗೆಲ್ಲಿಸಬೇಕು, ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪರಿವಾರವಾದಿ (ಕುಟುಂಬ ರಾಜಕೀಯ) ಪಕ್ಷಗಳು,
ಎರಡು ಪಕ್ಷಗಳು ಭ್ರಷ್ಟ ದರೋಡೆಕೋರರು ಎಂದು ಅಮಿತ್ ಶಾ ಹೇಳಿದರು.
ರಾಜ್ಯ ಬಿಜೆಪಿಯ ಜನಸಂಕಲ್ಪ ಯಾತ್ರೆಯ(Janasankalpa Yatra) ಅಂಗವಾಗಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಎರಡೂ ಪಕ್ಷಗಳ ಆಡಳಿತವನ್ನು ನೋಡಿದ್ದೇವೆ,
ಕಾಂಗ್ರೆಸ್ ಬಂದರೆ ಕರ್ನಾಟಕವು ದೆಹಲಿಯ ಎಟಿಎಂ ಆಗುತ್ತದೆ ಮತ್ತು ಜೆಡಿಎಸ್ ಬಂದಾಗ ಅದು ಎಟಿಎಂ ಆಗುತ್ತದೆ.
ಒಂದು ಕುಟುಂಬಕ್ಕಾಗಿ, ಈ ಎರಡು ಪಕ್ಷಗಳು ಪದೇ ಪದೇ ಭ್ರಷ್ಟಾಚಾರದ ಮೂಲಕ ಕರ್ನಾಟಕದ ಪ್ರಗತಿಯನ್ನು ನಿಲ್ಲಿಸಿವೆ. ‘ಪರಿವಾರವಾದ’ ಮತ್ತು ಭ್ರಷ್ಟಾಚಾರದಿಂದ ಮುಕ್ತರಾಗುವ ಸಮಯ ಬಂದಿದೆ.
ಒಂದು ಬಾರಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಬೇಕು. ಹಾಗೆ ಡಬಲ್ ಇಂಜಿನ್ ಸರ್ಕಾರವನ್ನು ತರಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಮುಂದಿನ ಐದು ವರ್ಷಗಳಲ್ಲಿ ಮೋದಿ ಜೀ(Narendra modi) ಅವರ ನೇತೃತ್ವದಲ್ಲಿ ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುತ್ತೇವೆ ಎಂದು ಹೇಳಿದ ಅವರು,
ಇದನ್ನೂ ಓದಿ : https://vijayatimes.com/kumaraswamy-statement-about-cow/
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಭ್ರಷ್ಟ, ಕೋಮುವಾದಿ ಮತ್ತು ಅಪರಾಧಿಗಳ ರಕ್ಷಕ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja Bommai), ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi),
ರಾಜ್ಯ ಬಿಜೆಪಿ ಮುಖ್ಯಸ್ಥ ನಳಿನ್ ಕುಮಾರ್ ಕಟೀಲ್(Nalin Kumar Kateel), ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(CT Ravi) ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 2018ರ ವಿಧಾನಸಭಾ ಚುನಾವಣೆಗೆ ಮಂಡ್ಯದಿಂದ ಪ್ರಚಾರ ಆರಂಭಿಸಿದ್ದನ್ನು ನೆನಪಿಸಿದ ಅವರು,
ಇದನ್ನೂ ಓದಿ : https://vijayatimes.com/siddaramaiah-vs-state-bjp/
ಕರ್ನಾಟಕದ ಜನತೆ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದು, ನಮ್ಮನ್ನು ಏಕೈಕ ದೊಡ್ಡ ಪಕ್ಷವನ್ನಾಗಿ ಮಾಡಿದ್ದಾರೆ.
ನಂತರ ಮತ್ತೊಮ್ಮೆ 2019ರ ಲೋಕಸಭೆ ಚುನಾವಣೆಯಲ್ಲಿ(Lok Sabha Elections) ಮೋದಿ ಅವರ ನಾಯಕತ್ವದಲ್ಲಿ ಶೇಕಡಾ 52 ರಷ್ಟು ಮತ ಹಂಚಿಕೆಯೊಂದಿಗೆ ಕರ್ನಾಟಕವು ಬಿಜೆಪಿಗೆ 28 ರಲ್ಲಿ 25 ಸ್ಥಾನಗಳನ್ನು ಗಳಿಸಿತು ಎಂದು ಹೇಳಿದರು.