Bengaluru : ಸದ್ಯ ಸಾಂಡಲ್ವುಡ್ನಲ್ಲಿ ತಮ್ಮ ಮೊದಲ ಚಿತ್ರಕ್ಕೆ ಭಾರೀ ಮೊತ್ತದ ಸಂಭಾವನೆ ಪಡೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಪ್ರೇಮ್ (Nenapirali Prem) ಅವರ ಮಗಳು ಅಮೃತಾ ಪ್ರೇಮ್ (Amrita prem first remuneration).

ಹೌದು, ಸದ್ಯ ಅಮೃತಾ ಪ್ರೇಮ್ ಡಾಲಿ ಪಿಕ್ಚರ್ಸ್ನಲ್ಲಿ ನಿರ್ಮಾಣವಾಗುತ್ತಿರುವ “ಟಗರು ಪಲ್ಯ”(Tagaru Palya) ಚಿತ್ರದ ಮೂಲಕ ಚಂದನವನಕ್ಕೆ (Amrita prem first remuneration) ಕಾಲಿಡುತ್ತಿದ್ದಾರೆ.
ಇದನ್ನೂ ನೋಡಿ : https://fb.watch/hg0uqq_x3w/
ಪಾದಾರ್ಪಣೆ ಮಾಡುತ್ತಿರುವ ಮೊದಲ ಸಿನಿಮಾದಲ್ಲೇ ಯುವ ನಟಿ ಅಮೃತಾ ಪ್ರೇಮ್ಪಡೆದ ಸಂಭಾವನೆ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೇ ಎಂದು ಕನ್ನಡದ ಹಲವು ನಿರ್ಮಾಪಕರು ತೆರೆಮರೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಮೂಲಗಳ ಪ್ರಕಾರ ಡಾಲಿ ಪಿಕ್ಚರ್ಸ್ಮೂಲಕ ಸ್ಯಾಂಡಲ್ವುಡ್ಗೆ ಕಾಲಿಡುತ್ತಿರುವ ಅಮೃತಾ ಪ್ರೇಮ್ಅವರು, https://vijayatimes.com/shiv-sena-smeared-karnataka-buses/
ತಮ್ಮ ಮೊದಲ ಚಿತ್ರಕ್ಕೆ 10 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೊಸ ನಟಿಯರಿಗೆ ಅವಕಾಶ ನೀಡುವುದೇ ದೊಡ್ಡ ವಿಚಾರವಾಗಿರುವ ಸಂದರ್ಭದಲ್ಲಿ ಡಾಲಿ ಧನಂಜಯ ಅವರು ಅಮೃತಾ ಪ್ರೇಮ್ಅವರಿಗೆ ಕೆಲ ಹಿರಿಯ ನಟಿಯರಿಗೆ ಕೊಡುವ ಸಂಭಾವನೆಯನ್ನೇ ನೀಡಿದ್ದಾರೆ.

ಇನ್ನು ಡಾಲಿ ಧನಂಜಯ್ನಿರ್ಮಾಣದ `ಟಗರು ಪಲ್ಯ’ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ನಟ ನಾಗಭೂಷಣಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಫಸ್ಟ್ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ʼಟಗರು ಪಲ್ಯ’ಚಿತ್ರದಲ್ಲಿ ಅಮೃತಾ ಪ್ರೇಮ್, ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : https://vijayatimes.com/belgaum-border-dispute/
ಇನ್ನೊಂದೆಡೆ ಕನ್ನಡ ಚಿತ್ರರಂಗದಲ್ಲಿ ನೆಪೋಟಿಸಂ ಹೆಚ್ಚುತ್ತಿದೆ ಎಂದು ಆರೋಪಿಸಿರುವ ಕೆಲವರು, “ಸ್ಟಾರ್ ಕಲಾವಿದರ ಮಕ್ಕಳಿಗೆ ಸುಲಭವಾಗಿ ಅವಕಾಶಗಳು ಸಿಗುತ್ತದೆ” ಎಂದು ದೂರಿದ್ದಾರೆ.
ಅಮೃತಾ ಪ್ರೇಮ್ಚಿತ್ರರಂಗದ ಪ್ರವೇಶದ ಮೂಲಕ ನೆಪೋಟಿಸಂ ಕುರಿತು ಚರ್ಚೆಯಂತೂ ಜೋರಾಗಿದೆ. ಈಗ ನಟ ಡಾಲಿ ಧನಂಜಯ್ ಅವರ ಮೇಲೆ ನೆಪೋಟಿಸಂ ಆರೋಪ ಕೇಳಿಬಂದಿದೆ.
- ಮಹೇಶ್.ಪಿ.ಎಚ್