Bengaluru: ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ (Global Investors Conference) ಅದ್ಧೂರಿಯಾಗಿ ನಡೆಯುತ್ತಿದ್ದು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕೆಲವು ಏರಿಯಾ ಹಾಗೂ ಪ್ರದೇಶಗಳಲ್ಲಿ ಮಿತಿ ಮೀರಿದ ಟ್ರಾಫಿಕ್ ಜಾಮ್ (Excessive traffic jam) ಉಂಟಾಗುತ್ತಿದೆ. ದೇಶ – ವಿದೇಶದಿಂದ ಹೂಡಿಕೆದಾರರು (Investors from home and abroad), ಗಣ್ಯರು ಬೆಂಗಳೂರಿಗೆ ಬರುತ್ತಿದ್ದು ಈ ರೀತಿ ಜನ ಬರುತ್ತಿರುವ ಸಂದರ್ಭದಲ್ಲಿಯೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ (Traffic jam) ಮಿತಿ ಮೀರಿದ್ದು ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಮಹೀಂದ್ರ & ಮಹೀಂದ್ರ ಸಂಸ್ಥೆಯ (Mahindra & Mahindra Corporation) ಮಾಲೀಕರಾದ ಆನಂದ್ ಮಹೀಂದ್ರಾ (Anand Mahindra) ಅವರು ಮಾಡಿರುವ ಟ್ವೀಟ್ವೊಂದು ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗುತ್ತಿದೆ.

ನಗರದ ಟ್ರಾಫಿಕ್ ಜಾಮ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿದೆ. ಅದರಲ್ಲೂ ನಗರದ ಕೆಲವು ಭಾಗದಲ್ಲಿ ನಿತ್ಯವೂ ಟ್ರಾಫಿಕ್ ಜಾಮ್ ಭಯಂಕರವಾಗಿ ಹೆಚ್ಚಳವಾಗುತ್ತಿದೆ. ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಲ್ಲೇ ಇದೆ. ಈ ರೀತಿ ಇರುವಾಗಲೇ ಆನಂದ್ ಮಹೀಂದ್ರಾ (Anand Mahindra) ಅವರು ಸಹ ಈ ಬಗ್ಗೆ ಟ್ವೀಟ್ವೊಂದನ್ನು (Tweet) ಮಾಡಿದ್ದು. ಭಾರೀ ವೈರಲ್ ಆಗುತ್ತಿದೆ.
ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ (Investors ) ಸಮಾವೇಶದಲ್ಲಿ ಅವರು ಭಾಗವಹಿಸಿದ್ದು. ಇಲ್ಲಿಂದ ಹೋಗುವಾಗ ಅವರು ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಬಗ್ಗೆ ಟ್ವೀಟ್ ಮಾಡಿದ್ದಾರೆ (Tweeted about Bangalore). ಗುಡ್ ಬೈ ಬೆಂಗಳೂರು… ನನ್ನ ಮಹೀಂದ್ರ ಬಿಇ-6 ಕಾರಿನ (Mahindra BE-6 car) ವೇಗಕ್ಕೆ ಥ್ಯಾಂಕ್ಸ್ ಎಂದಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವುದರ ಅನುಕೂಲವೆಂದರೆ ವಾಹನಗಳು ಶೋರೂಂನಲ್ಲಿ (Vehicles in the showroom) ಇರುವಂತೆ ಇರುತ್ತವೆ ಎಂದು ಹೇಳಿದ್ದಾರೆ.