ನಿಮ್ಮ `ಶೈಕ್ಷಣಿಕ ಅರ್ಹತೆ’ ಏನು? ಎಂಬ ಪ್ರಶ್ನೆಗೆ ಅದ್ಭುತ ಉತ್ತರ ಕೊಟ್ಟ ಆನಂದ್ ಮಹೀಂದ್ರಾ

‘ಸರ್, ನಿಮ್ಮ ಶೈಕ್ಷಣಿಕ ಅರ್ಹತೆ ಏನು ಎಂಬುದನ್ನು ದಯವಿಟ್ಟು ತಿಳಿಸುವಿರಾ?’ ಎಂದು ಟ್ವೀಟರ್(Tweeter) ಬಳಕೆದಾರರೊಬ್ಬರು ಖ್ಯಾತ ಉದ್ಯಮಿ(Businessman) ಆನಂದ್ ಮಹೀಂದ್ರಾ(Anand Mahindra) ಅವರನ್ನು ಪ್ರಶ್ನಿಸಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಅವರು ಆ ಪ್ರಶ್ನೆಗೆ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಟ್ವೀಟರ್‍ನಲ್ಲಿ ಅಭಿಷೇಕ್ ದುಬೇ ಎಂಬುವವರು “ಹಿಮಾಚಲ ಪ್ರದೇಶದಲ್ಲಿ ಚಾರಣ ಮಾಡುತ್ತಿದ್ದಾಗ, ದಟ್ಟ ಕಾನನದಲ್ಲಿ ಹುಡುಗಿಯೊಬ್ಬಳು ಓದುತ್ತಾ ಕುಳಿತಿರುವುದನ್ನು ನೋಡಿದೆ. ಓದಿನಲ್ಲಿ ಮಗ್ನಳಾಗಿರುವ ಆಕೆಯ ತನ್ಮಯತೆಯನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಅಧ್ಭುತ” ಎಂದು ಪೋಟೋದೊಂದಿಗೆ ಬರೆದುಕೊಂಡಿದ್ದರು. ಅಭಿಷೇಕ ದುಬೇ ಅವರ ಈ ಪೋಟೋಗೆ ಪ್ರತಿಕ್ರಿಯಿಸಿದ ಉದ್ಯಮಿ ಆನಂದ್ ಮಹೀಂದ್ರಾ, “ ತುಂಬಾ ಸುಂದರವಾದ ಛಾಯಾಚಿತ್ರ. ಈ ಹುಡುಗಿ ನನಗೆ ಸ್ಪೂರ್ತಿ” ಎಂದಿದ್ದರು. ಈ ಛಾಯಾಚಿತ್ರ ಎಲ್ಲೆಡೆ ವೈರಲ್ ಆಗಿತ್ತು.

ನಂತರ ಆನಂದ್ ಮಹೀಂದ್ರಾ ಅವರ ಅಭಿಪ್ರಾಯಕ್ಕೆ, ವೈಭವ್ ಎಸ್‍ಡಿ ಎಂಬ ಟ್ವೀಟರ್ ಬಳಕೆದಾರ “ಸರ್ ನಿಮ್ಮ ಶೈಕ್ಷಣಿಕ ಅರ್ಹತೆ ಏನು ಎಂಬುದನ್ನು ದಯವಿಟ್ಟು ತಿಳಿಸುವಿರಾ..?” ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರ ನೀಡಿದ ಆನಂದ್ ಮಹೀಂದ್ರಾ “ನೇರವಾಗಿ ಹೇಳಬೇಕೆಂದರೆ, ನನ್ನ ಈ ವಯಸ್ಸಿನಲ್ಲಿ, ನನ್ನ ಅನುಭವವೇ ನನ್ನ ಏಕೈಕ ಅರ್ಹತೆಯಾಗಿದೆ” ಎಂದು ಉತ್ತರ ನೀಡಿದ್ದಾರೆ. ಈ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Latest News

ದೇಶ-ವಿದೇಶ

“ನಮ್ಮ ಮೆಸ್ ಊಟವನ್ನು ಪ್ರಾಣಿಗಳೂ ಸಹ ತಿನ್ನಲು ಸಾಧ್ಯವಿಲ್ಲ”; ಕಣ್ಣೀರಿಟ್ಟ ಪೇದೆ, ವೀಡಿಯೋ ವೈರಲ್

ಅಷ್ಟೇ ಅಲ್ಲದೇ ನನ್ನನ್ನು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ದಾರಿಹೋಕರ ಬಳಿ ಮನೋಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.