ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ, ಅನುಶ್ರೀಗೆ ಡ್ರಗ್‌ ಪೆಡ್ಲರ್ ನಂಟು – ಕಿಶೋರ್​ ಅಮನ್​ ಶೆಟ್ಟಿ

ಬೆಂಗಳೂರು ಸೆ 8 : ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆಯ ಜನಪ್ರಿಯ ಆಂಕರ್ ಅನುಶ್ರೀ ಅವರ ವಿರುದ್ದ ಮಂಗಳೂರು ಪೊಲೀಸರು ಪ್ರಕರಣದ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅನುಶ್ರೀ ಡ್ರಗ್ಸ್‌ ಸೇವನೆ ಮಾತ್ರವಲ್ಲದೆ ಡ್ರಗ್ಸ್‌ ಸಾಗಾಟ ಕೂಡ ಮಾಡುತ್ತಿದ್ದರು ಎಂಬ ಆತಂಕಕಾರಿ ಆಂಶವನ್ನು  ಪ್ರಕರಣದ ಎ2 ಆರೋಪಿಯಾಗಿರುವ ಕಿಶೋರ್​ ಅಮನ್​ ಶೆಟ್ಟಿ ಅವರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಿಶೋರ್ ರಿಯಾಲಿಟಿ ಶೋನ ಕೊರಿಯೋಗ್ರಾಫರ್​ ಆಗಿದ್ದ ತರುಣ್​ ಮುಖಾಂತರ ತನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್​ ರೂಮ್​ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದೆವು. ಡ್ಯಾನ್ಸ್ ಪ್ರಾಕ್ಟೀಸ್​ಗೆ ಬರುವಾಗ ಅನುಶ್ರೀ ಎಕ್ಸ್‌ಟಸಿ ಡ್ರಗ್ಸ್​ ಖರೀದಿಸಿ  ತರುತ್ತಿದ್ದರು. ನಮಗೆ ಎಕ್ಸ್‌ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಡ್ಯಾನ್ಸ್ ನಲ್ಲಿ ಅಭ್ಯಾಸ ಮಾಡಲು ಡ್ರಗ್ಸ್ ಸೇವಿಸಿದರೆ ಶಕ್ತಿ ಬರುತ್ತದೆ ಎಂದು ಹೇಳುತ್ತಿದ್ದರು. ಅನುಶ್ರೀಗೆ ಡ್ರಗ್ಸ್ ಪೆಡ್ಲರ್​ಗಳ ಪರಿಚಯವಿದೆ. ಡ್ರಗ್ಸ್ ಎಲ್ಲಿ ಸಿಗುತ್ತೆ, ಯಾರು ಪೂರೈಸುತ್ತಾರೆಂದು ಆಕೆಗೆ ಗೊತ್ತಿತ್ತು. ಡ್ರಗ್ಸ್​ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ. ಎಂದು ಚಾರ್ಜ್​ಶೀಟ್​​ನಲ್ಲಿ ಕಿಶೋರ್‌ ಶೆಟ್ಟಿ ಉಲ್ಲೇಖಿಸಿದ್ದಾನೆ.

2007-08 ರಲ್ಲಿ ಸಮಯದಲ್ಲಿ ರಿಯಾಲಿಟಿ ಶೋ ನಡೆಯುತ್ತಿತ್ತು. ಆಗ ಅನುಶ್ರೀ, ತರುಣ್ ಹಾಗೂ ಕಿಶೋರ್ ಒಡನಾಟವಿತ್ತು. ನಟಿ ಅನುಶ್ರೀ, ತರುಣ್ ಹಾಗೂ ಕಿಶೋರ್ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದರು. ಊಟಕ್ಕೂ ಮುನ್ನ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಕಿಶೋರ್ ಹೇಳಿಕೆಯನ್ನು ನೀಡಿದ್ದಾರೆ.

Latest News

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.