ರಂಜಾನ್(Ramzan) ಹಬ್ಬದಲ್ಲಿ ಯಾವುದೇ ಕಾರಣಕ್ಕೂ ಹಿಂದೂ ವ್ಯಾಪಾರಿಗಳ ಬಳಿ ಬಟ್ಟೆ ಖರೀದಿ ಮಾಡಬೇಡಿ ಎಂದು ಅನೇಕ ಕಡೆಗಳಲ್ಲಿ ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. ಹೀಗೆ ಫತ್ವಾ ಹೊರಡಿಸಿದರು ಸುಮ್ಮನೆ ಇರಬೇಕಾ? ಸಾವಿರಾರೂ ಕೋಟಿ ರೂ. ಚಿನ್ನದ ವ್ಯವಹಾರ ಆಗುವ ಅಕ್ಷಯ ತೃತೀಯದಂದು ಮುಸ್ಲಿಮರ ಬಳಿ ಬಂಗಾರ ಖರೀದಿಸಬೇಡಿ ಎಂದು ನಾವು ಹಿಂದೂಗಳಲ್ಲಿ ಜಾಗೃತಿ ಮೂಡಿಸಿ, ಮನವಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಆಂದೋಲ ಶ್ರೀ ಪ್ರಶ್ನಿಸಿದರು.
ಇನ್ನು ಮುಸ್ಲಿಮರು ನಡೆಸುವ ಚಿನ್ನದ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡಿದ್ರೆ ದೇಶದೊಳಗೆ ಒರ್ವ ಶತ್ರುವನ್ನು ನಾವೇ ಬೆಳೆಸಿದಂತಾಗುತ್ತದೆ. ಹೀಗಾಗಿ ದೇಶದ ಹಿತದೃಷ್ಟಿಯಿಂದ ಮುಸ್ಲಿಮರ ಬಳಿ ಚಿನ್ನ ಖರೀದಿ ಮಾಡದೇ, ಹಿಂದೂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡಿ ಎಂದು ಮನವಿ ಮಾಡುತ್ತೇನೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿ. ಯಾವುದೇ ವಿಷಯವಿರಲಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ಮೂಲಕ ವೋಟ್ ಪಡೆಯಲು ಪ್ರಯತ್ನ ನಡೆಸುತ್ತಾರೆ. ಇವರ ಪ್ರೇರಣೆಯಿಂದಲೇ ರಾಜ್ಯದಲ್ಲಿ ಗಲಭೆಗಳು ಹೆಚ್ಚುತ್ತಿವೆ.
ಪ್ರೇರಣೆ ನೀಡುವ ಇಂತಹ ರಾಜಕಾರಣಿಗಳನ್ನು ಮೊದಲು ಒಳಗೆ ಹಾಕಬೇಕು. ಆಗ ಮಾತ್ರ ರಾಜ್ಯ ಮತ್ತು ದೇಶದಲ್ಲಿ ಶಾಂತಿ ನೆಲೆಸುತ್ತದೆ.
ಇನ್ನು ರಾಜ್ಯದಲ್ಲಿ ಧರ್ಮ ದಂಗಲ್ ಮುಂದುವರೆದಿದ್ದು, ಅಕ್ಷಯ ತೃತೀಯದಂದು ಮುಸ್ಲಿಮರ ಚಿನ್ನದ ಅಂಗಡಿಗಳಲ್ಲಿ ಚಿನ್ನ ಖರೀದಿಸದಂತೆ ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಹೊಸ ಅಭಿಯಾನ ಪ್ರಾರಂಭಿಸಿವೆ. ಹಿಂದೂಗಳು ಹಿಂದೂ ವ್ಯಾಪಾರಿಗಳ ಚಿನ್ನದ ಅಂಗಡಿಗಳಲ್ಲಿ ಮಾತ್ರ ಚಿನ್ನ ಖರೀದಿಸಿ ಎಂಬ ಸಂದೇಶಗಳು ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿವೆ.