Application Invitation for 1476 Anganwadi Posts: Apply Today
Bengaluru: ರಾಜ್ಯದ ಅಂಗನವಾಡಿ ಕಾರ್ಯಕರ್ತೆ (Anganwadi Worker) ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಮಂಡ್ಯ, ದಕ್ಷಿಣ ಕನ್ನಡ, ರಾಯಚೂರು, ರಾಮನಗರ, ಉಡುಪಿ (Mandya, Dakshina Kannada, Raichur, Ramanagar, Udupi) ಜಿಲ್ಲೆಗಳಲ್ಲಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಇರುವ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಟ್ಟು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು : 408
ಒಟ್ಟು ಅಂಗನವಾಡಿ ಸಹಾಯಕಿಯರ ಹುದ್ದೆಗಳು : 1068
ವಯೋಮಿತಿ : ಕನಿಷ್ಠ 19 ವರ್ಷ ಹಾಗೂ 35 ವರ್ಷ ವಯಸ್ಸು ಮೀರಿರಬಾರದು. OBC ವರ್ಗದವರಿಗೆ 3 ವರ್ಷ, SC/ ST / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಹತೆಗಳು :
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ ಅಥವಾ ತತ್ಸಮಾನ ಶಿಕ್ಷಣ ಪಾಸಾಗಿರಬೇಕು.
ಅಂಗನವಾಡಿ ಸಹಾಯಕಿ ಹುದ್ದೆಗೆ SSLC ಅಥವಾ ತತ್ಸಮಾನ ಶಿಕ್ಷಣ ಪಾಸಾಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
• ಜನನ ಪ್ರಮಾಣ ಪತ್ರ
• ಎಸ್ಎಸ್ಎಲ್ಸಿ / ಪಿಯುಸಿ (PUC) ಅಂಕಪಟ್ಟಿ.
• ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
• ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.
• ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.
• ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.
• ವಾಸಸ್ಥಳ ದೃಢೀಕರಣ ಪತ್ರ.
• ಆಧಾರಕಾರ್ಡ್ ಮತ್ತು ಮೊಬೈಲ್ ನಂಬರ್ (Mobile Number)
ಅರ್ಜಿ ಸಲ್ಲಿಸಲು : karnemakaone.kar.nic.in/abcd/ApplicationForm_JA_org.aspx ವೆಬ್ ವಿಳಾಸಕ್ಕೆ ಭೇಟಿ ನೀಡಿ.
ಸೂಚನೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ (September) 29ರವರೆಗೆ ಕಾಲಾವಕಾಶ ನೀಡಲಾಗಿದೆ. ಹುದ್ದೆಗಳ ಕುರಿತು ಆಯಾ ಜಿಲ್ಲೆಯ ಡಬ್ಲ್ಯೂಸಿಡಿ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆಯಬಹುದು.
Anganwadi Recruitment 2024 Last Date Karnataka
Bengaluru: An official notification has been issued for the recruitment of Anganwadi Worker and Assistant posts in the state. It has been decided to fill these posts under Child Development Plan in Mandya, Dakshina Kannada, Raichur, Ramanagar, Udupi districts and applications are invited from interested and eligible candidates.
Total Posts of Anganwadi Workers : 408
Total Anganwadi Assistant Posts : 1068
Age Limit: Minimum 19 years and not more than 35 years. Age relaxation is 3 years for OBC category, 5 years for SC/ST/Category-1 candidates.
Qualifications:
For Anganwadi Worker post 12th pass or equivalent education.
SSLC or equivalent education pass for the post of Anganwadi Assistant.
Documents required to apply:
- Birth certificate
- SSLC / PUC Marks List.
- Certificate regarding educational qualification.
- Reservation and caste certificate.
- Death certificate of husband in case of widow.
- Certificate in case of project refugee.
- Residence confirmation letter.
- Aadhaar Card and Mobile Number
To apply visit web address : karnemakaone.kar.nic.in/abcd/ApplicationForm_JA_org.aspx
Note: Time has been given till September 29 to apply for these posts. You can get more details about the posts by visiting the WCD department of the respective district.