ಅಂಜೂರ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅದ್ಭುತ ಲಾಭಗಳನ್ನು ಪಡೆಯಬಹುದು. ಉತ್ತಮ ಆರೋಗ್ಯಕ್ಕಾಗಿ ಅಂಜೂರದ ಹಣ್ಣನ್ನು ಸೇವಿಸುವಂತೆ ತಜ್ಞರೂ (Anjeer Health benefits) ಶಿಫಾರಸು ಮಾಡುತ್ತಾರೆ.

ಇವುಗಳಲ್ಲಿ ಪೌಷ್ಟಿಕಾಂಶದ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ನೀವು ಇದನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.
ಅಂಜೂರದ ಹಣ್ಣಿನ (Anjeer Health benefits) ಪ್ರಯೋಜನಗಳೇನು?
ಅಂಜೂರದ ಹಣ್ಣಿನಲ್ಲಿ ಕಬ್ಬಿಣದ ಅಂಶ ಅಪಾರ ಪ್ರಮಾಣದಲ್ಲಿದೆ. ಆದ್ದರಿಂದ ಅಂಜೂರದ ಹಣ್ಣಿನ ಸೇವನೆಯಿಂದ ದೇಹದ ದುರ್ಬಲತೆ ಜೊತೆಗೆ ಆಯಾಸ ದೂರವಾಗುತ್ತದೆ.
ಅಪಾರ ಪ್ರಮಾಣದ ಪೊಟಾಶಿಯಂ ಮತ್ತು ಇನ್ನಿತರ ಖನಿಜಾಂಶಗಳು ಇವೆ. ಇವುಗಳ ಸೇವನೆಯಿಂದ ಜನನಾಂಗದ ಭಾಗಗಳಿಗೆ ಆಮ್ಲಜನಕವನ್ನು
ಹೊಂದಿದ ರಕ್ತ ಹೆಚ್ಚಾಗಿ ಹರಿಯುವುದರಿಂದ ಲೈಂಗಿಕ ಆರೋಗ್ಯ ಅಭಿವೃದ್ಧಿಯಾಗುತ್ತದೆ.
ಇದನ್ನು ಓದಿ: ಇಂಧನ ಹೊಂದಾಣಿಕೆ ಶುಲ್ಕ ನೆಪ, ಡಬಲ್ ಆಯ್ತು ಕರೆಂಟ್ ಬಿಲ್ ; ಹಲವೆಡೆ ಪ್ರತಿಭಟನೆ
ಅಂಜೂರ ಅನೇಕ ಹೃದಯದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅಂಜೂರದಲ್ಲಿ ಒಮೆಗಾ 3 ಮತ್ತು ಒಮೆಗಾ 6 ಅಂಶಗಳ ಜೊತೆಗೆ ಹೃದಯದ ಆರೋಗ್ಯವನ್ನು ಅತ್ಯುತ್ತಮವಾಗಿ
ಕಾಪಾಡುವ ಫಿನಾಲ್ ಸಂಯುಕ್ತಗಳು ಕೂಡ ಇರುತ್ತವೆ. ಇವು ಹೃದಯದ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತವೆ.
ಅಂಜೂರದ ಹಣ್ಣು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ ಎಲ್ಡಿಎಲ್ ಅಂಶದ ಪ್ರಭಾವ ನಮ್ಮ
ರಕ್ತ ಸಂಚಾರದಲ್ಲಿ ಉಂಟಾದರೆ ಅದರಿಂದ ಹೃದಯಕ್ಕೆ ಹಾನಿಯಾಗುತ್ತದೆ. ಅಂಜೂರದ ಹಣ್ಣು ಸೇವನೆ ಮಾಡುವುದರಿಂದ ನಾವು ಇಂತಹ ಸಮಸ್ಯೆಗಳಿಂದ ಪಾರಾಗಬಹುದು.

ಕರುಳಿನಲ್ಲಿ ಅನೇಕ ವಿಷಕಾರಿ ತ್ಯಾಜ್ಯಗಳು ಶೇಖರಣೆಯಾಗುತ್ತದೆ. ಇದರಿಂದ ಕರುಳಿನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಬಹುದು. ಆದರೆ ಅಂಜೂರದ ಹಣ್ಣಿನ ಸೇವನೆಯಿಂದ ನಮ್ಮ ಕರುಳಿನ ಭಾಗ ಸ್ವಚ್ಛವಾಗುತ್ತದೆ.
ಹಾಗಾದ್ರೆ ಅಂಜೂರ ಹಣ್ಣಿನಲ್ಲಿ ಯಾವ ಪೌಷ್ಟಿಕಾಂಶ ಎಷ್ಟು ಪ್ರಮಾಣದಲ್ಲಿ ಇರುತ್ತೆ ಅನ್ನೋದನ್ನು ನೋಡೋಣ. ಒಣಗಿದ 100 ಗ್ರಾಂ ಅಂಜೂರದಲ್ಲಿ
ಎನರ್ಜಿ: 249 ಕೆ.ಕೆ.ಎಲ್
ಪ್ರೋಟೀನ್: 3.3 ಗ್ರಾಂ
ಕಾರ್ಬೋಹೈಡ್ರೇಟ್: 63.9 ಗ್ರಾಂ
ಸಕ್ಕರೆ: 47.92 ಗ್ರಾಂ
ವಿಟಮಿನ್ ಸಿ: 1.2 ಮಿಗ್ರಾಂ
ಕಬ್ಬಿಣ: 2.03 ಮಿಗ್ರಾಂ
ಪೊಟ್ಯಾಸಿಯಮ್: 680 ಮಿಗ್ರಾಂ
ಮೆಗ್ನೀಸಿಯಮ್: 68 ಮಿಗ್ರಾಂ
ಕ್ಯಾಲ್ಸಿಯಂ: 162 ಮಿಗ್ರಾಂ
ಇನ್ನು ಅಂಜೂರದ ಹಣ್ಣನ್ನು ನಿಯಮಿತವಾಗಿ ಮಾತ್ರ ಸೇವಿಸಬೇಕು. ಪ್ರತಿದಿನ ಮಿತಿಮೀರಿ ಇದನ್ನು ಸೇವಿಸುವುದರಿಂದ ದೇಹದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಯಿದೆ.
- ಮಹೇಶ್