Karnataka: ರಾಜ್ಯ ಸರ್ಕಾರವು ಅನ್ನಭಾಗ್ಯ (Annabhagya Yojana beneficiaries money) ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ವ್ಯಕ್ತಿಗೆ 170 ರೂ ಹಣವನ್ನು ಜುಲೈ 10 ರಿಂದ
ವಿವಿಧ ಕುಟುಂಬಗಳಲ್ಲಿನ ಹಿರಿಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಪ್ರಾರಂಭಿಸಿದೆ. ಮುಂದಿನ 3-4 ದಿನಗಳಲ್ಲಿ ಹಣ ವರ್ಗಾವಣೆ ಬಾಕಿ ಇರುವ ಫಲಾನುಭವಿಗಳಿಗೆ ಹಣ ರವಾನೆಯಾಗಲಿದೆ
ಎಂದು ಆಹಾರ ಇಲಾಖೆ (Department Of Food) ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 10 ರಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಮತ್ತು ಜುಲೈ 26 ರವರೆಗೆ 28 ಜಿಲ್ಲೆಗಳಲ್ಲಿ ಒಟ್ಟು 97.27 ಲಕ್ಷ ಕಾರ್ಡ್ಗಳ 3.26 ಕೋಟಿ ಫಲಾನುಭವಿಗಳಿಗೆ ಬರೋಬ್ಬರಿ 566 ಕೋಟಿ ಹಣವನ್ನು
ಡಿಬಿಟಿ (DBT) ಮೂಲಕ ವಿತರಿಸಲಾಗಿದೆ. ಅಷ್ಟೇ ಅಲ್ಲದೆ ಈಗಾಗಲೇ ಮೂರು ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಒಟ್ಟು 42.3 ಕೋಟಿ ರೂಪಾಯಿ ಪಾವತಿ ಮಾಡಲು ಬಾಕಿ ಉಳಿದಿದೆ.

ಇವರ ಖಾತೆಗೆ ಶೀಘ್ರದಲ್ಲೇ ಹಣ ಪಾವತಿಯಾಗಲಿದೆ
ಇನ್ನೆರಡು ದಿನಗಳಲ್ಲಿ ಒಟ್ಟು 17.47 ಕೋಟಿ ಹಣ ಶಿವಮೊಗ್ಗ (Shimogga) ಜಿಲ್ಲೆಯ 3.08 ಲಕ್ಷ ಕಾರ್ಡುಗಳ ಪೈಕಿ 10.83 ಲಕ್ಷ ಫಲಾನುಭವಿಗಳಿಗೆ ಪಾವತಿಯಾಗಲಿದೆ. ಅದೇ ರೀತಿ ಉಡುಪಿ ಮತ್ತು
ವಿಜಯನಗರ (Vijayanagara) ಜಿಲ್ಲೆಗಳ 3.84 ಲಕ್ಷ ಕಾರ್ಡ್ಗಳ 1.555 ಲಕ್ಷ ಫಲಾನುಭವಿಗಳಿಗೆ 7,254.3 ಕೋಟಿ ರೂಪಾಯಿ ಬಾಕಿ ಪಾವತಿಯನ್ನು ಡಿಎಸ್ಸಿ ಕೀ ಮ್ಯಾಪಿಂಗ್ ನಂತರ ಖಾತೆಗೆ ಜಮಾ
ಮಾಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಉಡುಪಿ (Udupi) ಮತ್ತು ವಿಜಯನಗರ ಜಿಲ್ಲೆಯ ಅದೇ ರೀತಿ ಒಟ್ಟು 15.55 ಲಕ್ಷ ಫಲಾನುಭವಿಗಳ ಅಂದರೆ 3.84 ಲಕ್ಷ ಕಾರ್ಡುಗಳ 25.43 ಕೋಟಿ
ಹಣ ಸಂದಾಯ ಬಾಕಿ ಉಳಿದಿದ್ದು ಆ ಹಣವು ಡಿಎಸ್ಸಿ ಕೀ ಮ್ಯಾಪಿಂಗ್ ಬಳಿಕ ಖಾತೆಗೆ ಬಂದು ಸೇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ
ಈಗಾಗಲೇ ಯಾರಿಗೆಲ್ಲ ಹಣ ಬಂದಿದೆ ಚೆಕ್ ಮಾಡಿ………….
ರಾಜ್ಯದ ಪ್ರತಿ ಹಳ್ಳಿಯ ಪಟ್ಟಿಯನ್ನು ಆಹಾರ, ನಾಗರಿಕ ಸರಬರಾಜು ಇಲಾಖೆ ಬಿಡುಗಡೆ ಮಾಡಿದೆ. ಇದರ ಮೂಲಕ ಕುಳಿತಲ್ಲಿಯೇ ಮೊಬೈಲ್ನಲ್ಲೇ(Mobile) ನಿಮ್ಮೂರಿನ ಯಾರಿಗೆಲ್ಲ ಅನ್ನಭಾಗ್ಯ ಯೋಜನೆಯ
ಹಣ ಬಂದಿದೆ ಎಂಬುವುದನ್ನು ಚೆಕ್ ಮಾಡಲು ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೇ ಎಂದು ಚೆಕ್ ಮಾಡಲು ಮೊದಲಿಗೆ ಇಲ್ಲಿ ಕ್ಲಿಕ್ (Click) ಮಾಡಿ https://ahara.kar.nic.in/Home/EServices

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕೃತ ವೆಬ್ಸೈಟ್ನ (Website) ಮುಖಪುಟ ಇಲ್ಲಿ ಕಾಣಿಸುತ್ತದೆ. ಇಲ್ಲಿ ನಿಮಗೆ ಎಡಭಾಗದಲ್ಲಿ 3 ಅಡ್ಡ ಗೆರೆಗಳು
ಕಾಣಿಸುತ್ತವೆ ಇದರ ಮೇಲೆ ಕ್ಲಿಕ್ ಮಾಡಿ, ನಂತರ ನಿಮಗೆ ಇಲ್ಲಿ ಕೆಳಗಡೆ e-Ration ಕಾರ್ಡ್ (E Ration Card) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.ನಂತರ
show village list ಎಂಬ ಆಯ್ಕೆ ಇಲ್ಲಿ ಕೆಳಗಡೆ ಸಿಗುತ್ತದೆ ಈಗ ಅದರ (Annabhagya Yojana beneficiaries money) ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯ 2,000 ರೂ.ಗಳ ಪ್ರೋತ್ಸಾಹಧನ ಪಡೆಯಲು ರೇಷನ್ ಕಾರ್ಡ್ ಯಜಮಾನ ಹೆಸರು ಬದಲಾವಣೆ ಹೇಗೆ? ಇಲ್ಲಿದೆ ಸರಳ ವಿಧಾನ
ಬಳಿಕ ಯಥಾವತ್ತಾಗಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ, ಗ್ರಾಮವನ್ನು ಆಯ್ಕೆ ಮಾಡಿದ ನಂತರ GO ಎಂಬ ಆಯ್ಕೆ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಊರಿನಲ್ಲಿ
ರೇಷನ್ ಕಾರ್ಡ್(Ration Card) ಇರುವ ಅಷ್ಟೂ ಕುಟುಂಬಗಳ ಹೆಸರು, ರೇಷನ್ ಕಾರ್ಡ್ ನಂಬರ್, ಕಾರ್ಡ್ ವಿಧ, ವಿಳಾಸ, ಹಾಗೂ ಕುಟುಂಬದ ಸದಸ್ಯರ ಸಂಖ್ಯೆಯ ಮಾಹಿತಿ ದೊರೆಯುತ್ತೆ.
ದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಿ…
ರಶ್ಮಿತಾ ಅನೀಶ್