Chennai : “ನೀವು ಹಿಂದೂ ಆಗಿರುವವರೆಗೂ ಅಸ್ಪೃಶ್ಯರಾಗಿರುತ್ತೀರಿ” ಎಂದು ಹೇಳಿಕೆ ನೀಡಿರುವ ತಮಿಳುನಾಡಿನ(Tamilnadu) ಡಿಎಂಕೆ(DMK) ಪಕ್ಷದ ಸಂಸದ(MP) ಎ.ರಾಜಾ ವಿರುದ್ದ ತಮಿಳುನಾಡು ರಾಜ್ಯ ಬಿಜೆಪಿ(BJP) ಘಟಕದ ರಾಜ್ಯಾಧ್ಯಕ್ಷ ಅಣ್ಣಾಮಲೈ(AnnaMalai) ತೀವ್ರ ವಾಗ್ದಾಳಿ ನಡೆಸಿದ್ದು,

ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ತುಷ್ಟೀಕರಣ ರಾಜಕಾರಣ(Politics) ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, “ತಮಿಳುನಾಡಿನ ರಾಜಕೀಯ ಚರ್ಚೆಯ ಸ್ಥಿತಿ ಹೀಗಿರುವುದಕ್ಕೆ ಕ್ಷಮಿಸಿ.
ಅರಿವಾಲಯಂ ಸಂಸದರು ಇತರರನ್ನು ಓಲೈಸುವ ಏಕೈಕ ಉದ್ದೇಶದಿಂದ ಒಂದು ಸಮುದಾಯದ ವಿರುದ್ಧ ಮತ್ತೊಮ್ಮೆ ದ್ವೇಷವನ್ನು ಉಗುಳಿದ್ದಾರೆ. ತಮಿಳುನಾಡು ತಾವೇ ಎಂದು ಭಾವಿಸುವ ಈ ರಾಜಕೀಯ ಪಕ್ಷದ ನಾಯಕರ ಮನಸ್ಥಿತಿ ಅತ್ಯಂತ ದುರದೃಷ್ಟಕರ” ಎಂದು ಅಣ್ಣಾಮಲೈ ಹೇಳಿದ್ದಾರೆ.
ಇದೇ ವೇಳೆ ಡಿಎಂಕೆ ಸಂಸದ ಎ ರಾಜಾ ಹೇಳಿಕೆಯ ವಿಡಿಯೋವನ್ನು ಅಣ್ಣಾಮಲೈ ಹಂಚಿಕೊಂಡಿದ್ದಾರೆ. ಎ ರಾಜಾ ಏನು ಹೇಳಿದ್ದರು? ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷದ ಹಿರಿಯ ನಾಯಕ ಎ.ರಾಜಾ ಅವರು ಅನೇಕ ವಿವಾದಾತ್ಮಕ(Controversial) ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು.
ಅದೇ ರೀತಿ 2ಜಿ ಹಗರಣದಂತಹ ಭ್ರಷ್ಟಾಚಾರ ಪ್ರಕರಣಗಳಲ್ಲಿ ಇವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ತಮಿಳುನಾಡಿನ ನಾಮಕ್ಕಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ವರ್ಣ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದ ಶೂದ್ರರು ವೇಶ್ಯೆಯರ ಮಕ್ಕಳು.

ಹೀಗಾಗಿ ಹಿಂದೂ ಆಗುವವರೆಗೆ ನೀನು ಶೂದ್ರ. ನೀನು ಶೂದ್ರನಾಗಿರುವ ತನಕ ವೇಶ್ಯೆಯ ಮಗ. ನೀವು ಹಿಂದೂ ಆಗುವವರೆಗೆ ನೀವು ದಲಿತ ಮತ್ತು ನೀವು ಹಿಂದೂ ಆಗುವವರೆಗೆ ಅಸ್ಪೃಶ್ಯ”ಎಂದು ಎ ರಾಜಾ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ.