ನ್ಯೂಜಿಲೆಂಡ್, ಆ. 10: ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದ್ದು, ಅನುಭವಿ ರಾಸ್ ಟೇಲರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಅವರನ್ನು ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ರಾಸ್ ಟೇಲರ್ ನ್ಯೂಜಿಲೆಂಡ್ ಪರ 102 ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 7 ಅರ್ಧಶತಕ ಸಹಿತ 1900 ರನ್ ಗಳಿಸಿದ್ದಾರೆ. ಅನುಭವಿ ಆಟಗಾರನಿಗೆ ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ಟಿ20 ತಂಡದಲ್ಲಿ ಯಾವುದೇ ಸ್ಥಾನ ಕೂಡ ದೊರೆತಿಲ್ಲ.
ನ್ಯೂಜಿಲೆಂಡ್ ಪ್ರಕಟಿಸಿದ ಟ20 ತಂಡ ಇಂತಿ್ದೆ:
ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟ್ಲ್ಲೇ, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್ಮಾನ್, ಡೆವನ್ ಕನ್ವೇ, ಲೂಕಿ ಫರ್ಗುಸನ್, ಮಾರ್ಟಟಿನ್ ಗಪ್ಟಿಲ್, ಕೈಲ್ ಜೆಮಿಸನ್, ಡ್ಯಾರೆಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಟಿಮ್ ಸೈಫೆರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥೀ.
ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಾವಳಿಯು ಭಾರತದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣಗಳಿಂದ ಈ ಬಾರಿಯ ಟಿ20 ಪಂದ್ಯಾವಳಿಯು ಯುಎಇ ನಲ್ಲಿ ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ಗೆ ಚಾಲನೆ ದೊರೆಯಲಿದ್ದು ಚುಟುಕು ಕ್ರಿಕೆಟ್ ಸಮರ ನವೆಂಬರ್ 14ರ ವರೆಗೂ ನಡೆಯಲಿದೆ.