• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ವಾರ್ಷಿಕ ಫಾಸ್‌ಟ್ಯಾಗ್ ಪಾಸ್ ದರ ಏರಿಕೆ; ಏಪ್ರಿಲ್ 1ರಿಂದ ಹೊಸ ಶುಲ್ಕ ಅನ್ವಯ

Teju Srinivas by Teju Srinivas
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ವಾರ್ಷಿಕ ಫಾಸ್‌ಟ್ಯಾಗ್ ಪಾಸ್ ದರ ಏರಿಕೆ; ಏಪ್ರಿಲ್ 1ರಿಂದ ಹೊಸ ಶುಲ್ಕ ಅನ್ವಯ
0
SHARES
8
VIEWS
Share on FacebookShare on Twitter
  • ರಾಷ್ಟ್ರೀಯ ಹೆದ್ದಾರಿಯಲ್ಲಿ (Annual FASTag pass price hike) ಸಂಚರಿಸುವವರಿಗೆ ಮಹತ್ವದ ಸುದ್ದಿ
  • ಫಾಸ್‌ಟ್ಯಾಗ್ ವಾರ್ಷಿಕ ಪಾಸ್ ದರ ಹೆಚ್ಚಳ; 200 ಟೋಲ್ ದಾಟಲು ಹೊಸ ಶುಲ್ಕ
  • 2026 ಏಪ್ರಿಲ್ 1ರಿಂದ ವಾರ್ಷಿಕ ಪಾಸ್ ಬೆಲೆ 3,000ರಿಂದ 3,075 ರೂ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಖಾಸಗಿ ವಾಹನ ಮಾಲೀಕರಿಗೆ ಬಳಸುವ ಫಾಸ್‌ಟ್ಯಾಗ್ (Annual FASTag pass price hike) ವಾರ್ಷಿಕ ಪಾಸ್ ದರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದೆ.

2026–27ರ ಹಣಕಾಸು ವರ್ಷದಿಂದ ಈ ಹೊಸ ದರ ಜಾರಿಗೆ ಬರಲಿದ್ದು, ವಾರ್ಷಿಕ ಪಾಸ್ ಶುಲ್ಕದಲ್ಲಿ 75 ರೂಪಾಯಿ ಏರಿಕೆ ಮಾಡಲಾಗಿದೆ.

ಈಗಾಗಲೇ 3,000 ರೂ ಇದ್ದ ಪಾಸ್ ದರವನ್ನು 3,075 ರೂಗೆ ಹೆಚ್ಚಿಸಲಾಗಿದೆ. ಈ ಪರಿಷ್ಕೃತ ದರಗಳು 2026ರ ಏಪ್ರಿಲ್ 1ರಿಂದ ದೇಶದಾದ್ಯಂತ ಜಾರಿಗೆ ಬರುತ್ತವೆ.

Annual FASTag pass price hike

ಈ ಪಾಸ್‌ನ್ನು ಖಾಸಗಿ ಬಳಕೆಗೆ ನೊಂದಾಯಿಸಲಾದ ಕಾರು, ಜೀಪ್ (Jeep) ಮತ್ತು ವ್ಯಾನ್‌ಗಳಿಗೆ ಮಾತ್ರ ನೀಡಲಾಗುತ್ತದೆ.

ಫಾಸ್‌ಟ್ಯಾಗ್ ವಾರ್ಷಿಕ ಪಾಸ್ ಯೋಜನೆಯನ್ನು 2025ರ ಸ್ವಾತಂತ್ರ್ಯೋತ್ಸವದ ದಿನದಂದು (Annual FASTag pass price hike) ಕೇಂದ್ರ ಸರ್ಕಾರ ಆರಂಭಿಸಿತ್ತು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವ ಖಾಸಗಿ ವಾಹನ ಮಾಲೀಕರಿಗೆ ಟೋಲ್ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಈ ಯೋಜನೆ ಪರಿಚಯಿಸಲಾಯಿತು.

ಸಾಮಾನ್ಯವಾಗಿ ಪ್ರತೀ ಟೋಲ್ ಪ್ಲಾಜಾದಲ್ಲಿ ಬೇರೆ ಬೇರೆ ದರಗಳು ಇರುವುದರಿಂದ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಆದರೆ ವಾರ್ಷಿಕ ಪಾಸ್ ಹೊಂದಿದವರಿಗೆ ಈ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ನಿರಂತರವಾಗಿ ರೀಚಾರ್ಜ್ ಮಾಡುವ ತೊಂದರೆ ತಪ್ಪುತ್ತದೆ.

ವಾರ್ಷಿಕ ಫಾಸ್‌ಟ್ಯಾಗ್ ಪಾಸ್ ಹೊಂದಿರುವವರು ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಸುಮಾರು 200 ಟೋಲ್ ಪ್ಲಾಜಾಗಳನ್ನು ಬಳಸಬಹುದು.

ಈ ಪಾಸ್ ಒಂದು ವರ್ಷದವರೆಗೆ ಮಾನ್ಯವಾಗಿದ್ದು, ಆ ಅವಧಿಯಲ್ಲಿ 200 ಬಾರಿ ಟೋಲ್ ಪ್ಲಾಜಾಗಳನ್ನು (Toll Plaza) ದಾಟುವ ಅವಕಾಶ ಸಿಗುತ್ತದೆ.

ಯಾವ ಟೋಲ್ ಪ್ಲಾಜಾದಲ್ಲಿ ದರ ಹೆಚ್ಚು ಅಥವಾ ಕಡಿಮೆ ಇದ್ದರೂ ಅದು ವಾರ್ಷಿಕ ಪಾಸ್‌ಗೆ ಪ್ರತ್ಯೇಕವಾಗಿ ಲೆಕ್ಕವಾಗುವುದಿಲ್ಲ.

ಆದರೆ ಒಂದು ವರ್ಷದೊಳಗೆ 200 ಬಾರಿ ಟೋಲ್ ದಾಟುವ ಮಿತಿಯನ್ನು ಮೀರಲು ಸಾಧ್ಯವಿಲ್ಲ ಎಂಬ ನಿಯಮ ಇದೆ.

ಈ ಯೋಜನೆ ಆರಂಭವಾದ ಬಳಿಕ ವಾಹನ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ ಈಗಾಗಲೇ ದೇಶದಾದ್ಯಂತ 50 ಲಕ್ಷಕ್ಕೂ ಹೆಚ್ಚು ಜನರು ಫಾಸ್‌ಟ್ಯಾಗ್ ವಾರ್ಷಿಕ ಪಾಸ್ ಖರೀದಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಕಾರುಗಳಿಂದ ನಡೆಯುವ ಒಟ್ಟು ಟೋಲ್ ವಹಿವಾಟಿನ ಸುಮಾರು 20 ಶೇಕಡಾ ಭಾಗ ಈ ವಾರ್ಷಿಕ ಪಾಸ್ ಮೂಲಕವೇ ನಡೆಯುತ್ತಿದೆ.

ಇದರಿಂದ ಪ್ರಯಾಣ ಸಮಯ ಉಳಿಯುವುದರ ಜೊತೆಗೆ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲು ಕೂಡ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವಾರ್ಷಿಕ ಫಾಸ್‌ಟ್ಯಾಗ್ ಪಾಸ್ ಪಡೆಯುವುದು ಬಹಳ ಸುಲಭವಾಗಿದೆ. ರಾಜಮಾರ್ಗ್ ಯಾತ್ರಾ (Rajmarg Yatra) ಮೊಬೈಲ್ ಆ್ಯಪ್ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಪಾಸ್ ಖರೀದಿಸಬಹುದು.

ಬಳಕೆದಾರರು ತಮ್ಮ ಫಾಸ್‌ಟ್ಯಾಗ್‌ಗೆ ಜೋಡಿಸಲಾದ ಬ್ಯಾಂಕ್ ಖಾತೆ ವಿವರ, ವಾಹನ ನೋಂದಣಿ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಬೇಕು. ಅಗತ್ಯ ವಿವರಗಳನ್ನು ನೀಡಿದ ಬಳಿಕ ಪಾವತಿ ಮಾಡಿದರೆ ವಾರ್ಷಿಕ ಪಾಸ್ ಸಕ್ರಿಯವಾಗುತ್ತದೆ.

ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವ ಖಾಸಗಿ ವಾಹನ ಮಾಲೀಕರಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : https://vijayatimes.com/fire-accident-in-cuttack-medical-college-icu/

Tags: FASTagHikepassesPricetoll

Related News

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್
ಪ್ರಮುಖ ಸುದ್ದಿ

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್

April 16, 2026
ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ
ದೇಶ-ವಿದೇಶ

ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ

April 16, 2026
ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ
ಪ್ರಮುಖ ಸುದ್ದಿ

ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ

April 16, 2026
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಪ್ರಮುಖ ಸುದ್ದಿ

ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

April 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.