- ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 12 ದಿನ ನಡೆಯಲಿರುವ ಫ್ಲವರ್ ಶೋ
- ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ವೀರಗಾಥೆ (Annual flower show begins at Lalbagh)
- ಸ್ವಾತಂತ್ರ್ಯ ದಿನಾಚರಣೆ ಹಿನ್ನಲ್ಲೆ 218ನೇ ವಾರ್ಷಿಕ ಫಲಪುಷ್ಪ ಪ್ರದರ್ಶನ
Bengaluru: ಇನ್ನೇನು ಸ್ವಾತಂತ್ರ್ಯ ದಿನಾಚರಣೆ ಸನಿಹದಲ್ಲಿದೆ, ಪ್ರತೀ ವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆ(Independence day) ಹಿನ್ನೆಲೆಯಲ್ಲಿ ಬೆಂಗಳೂರಿನ
ಲಾಲ್‌ಬಾಗ್‌ನಲ್ಲಿ ತೋಟಗಾರಿಕಾ ಇಲಾಖೆ(Department of Horticulture) ನಡೆಸುವ 218ನೇ ವಾರ್ಷಿಕ ಫಲಪುಷ್ಪ ಪ್ರದರ್ಶನ(Flower show) ಆಯೋಜಿಸಲಾಗಿದೆ.
ಈ ಬಾರಿಯ ವಿಶೇಷತೆ ಎಂದರೇ ಬ್ರಿಟೀಷರ ಸೊಕ್ಕಡಗಿಸಿದ್ದ ವೀರವನಿತೆ ಕಿತ್ತೂರುರಾಣಿ ಚೆನ್ನಮ್ಮ(Kittur Rani Chennamma) ಹಾಗೂ ಆಂಗ್ಲರ ನಿದ್ದೆಗೆಡಿಸಿದ್ದ
ವೀರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(Krantivira Samgolli Rayanna) ವಿಷಯ ಆಧಾರಿತ ವೀರಗಾಥೆಯ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದು 12 ದಿನಗಳ ಕಾಲ ನಡೆಯುವ ಪ್ರದರ್ಶನವಾಗಿದೆ.

109 ಪ್ರಭೇದದ ಸುಮಾರು 36.5 ಲಕ್ಷಕ್ಕೂ ಅಧಿಕ ಬಗೆಬಗೆಯ ಹೂವುಗಳಲ್ಲಿ(flower) ತಯಾರಿಸಲಾದ ವರ್ಣರಂಜಿತ ಫಲ ಪ್ರದರ್ಶನಕ್ಕೆ
ಗಾಜಿನ ಮನೆಯಲ್ಲಿನ(glass house) ಫ್ಲವರ್ ಶೋಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಿದ್ದು.
ಆಗಸ್ಟ್ 18 ರವರೆಗೆ ಅಂದರೆ ಇಂದಿನಿಂದ 12 ದಿನಗಳ ಕಾಲ ಪ್ರದರ್ಶನ ಇರಲಿದೆ. ಇನ್ನೇನು ಶನಿವಾರ- ಬಾನುವಾರದ ವಾರಾಂತ್ಯವು ಬರುತ್ತಿದೆ ಆದ್ದರಿಂದ ಈ ಭಾರಿಯ ಪ್ರದರ್ಶನಕ್ಕೆ
10 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ. ಬೆಳಿಗ್ಗೆ6 ರಿಂದ 9 ಗಂಟೆಯವರೆಗೆ ಲಾಲ್‌ಬಾಗ್‌ನ(Lalbagh) ಎಲ್ಲ ಪ್ರವೇಶ ದ್ವಾರಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6,30ರವರೆಗೆ ಟಿಕೆಟ್ ವಿತರಿಸಲಾಗುವುದು.
ಗಾಜಿನ ಮನೆಯ ಪ್ರವೇಶವು ರಾತ್ರಿ 7 ಗಂಟೆವರೆಗೆ ಮಾತ್ರ ಇರಲಿದೆ. ವಾರಾಂತ್ಯದಲ್ಲಿ 100 ರೂ ಹಾಗೂ 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ(students) 30 ರೂ.
ಶುಲ್ಕವಿರುತ್ತೆ. ಸಮವಸ್ತ್ರದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಮಾತ್ತ ಎಲ್ಲಾ 12 ದಿನಗಳಲ್ಲಿ ಉಚಿತ ಪ್ರವೇಶವಿರುತ್ತದೆ.
ಟ್ರಾಫಿಕ್ ಸಮಸ್ಯೆ ತಪ್ಪಿಸಲು ಲಾಲ್‌ಬಾಗ್‌ಗೆ ಬರುವ ವೀಕ್ಷಕರು ಮೆಟ್ರೋ ರೈಲು ಸೇವೆ ಮತ್ತು ಬಿಎಂಟಿಸಿ ಬಸ್ ಸೇವೆ ಬಳಸುವಂತೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ಜಗದೀಶ್, ಲಾಲ್‌ಬಾಗ್ ಉಪ ನಿರ್ದೇಶಕ ಬಾಲಕೃಷ್ಣ ಮನವಿ ಮಾಡಿದ್ದಾರೆ.
ಈ ಭಾರಿಯ ಫಲಪುಷ್ಪ ಪ್ರದರ್ಶನಕ್ಕೆ 136 ಸಿಸಿಟಿವಿ ಅಳವಡಿಕೆ ಜೊತೆಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗುತ್ತಿದೆ.
ಲಾಲ್‌ಬಾಗ್‌ನ 4 ಪ್ರವೇಶದ್ವಾರಗಳಲ್ಲಿ(entrances) ಬೇರೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
ಲಾಲ್‌ಬಾಗ್ ಜೋಡಿ ರಸ್ತೆ ದ್ವಾರದಿಂದ ಆಗಮಿಸುವ ಶಾಲಾ ಕಾಲೇಜು ವಾಹನಗಳು, ವಿಕಲಚೇತನರ ವಾಹನಗಳು, ಆಂಬುಲೆನ್ಸ್, ಅಗ್ನಿ ಶಾಮಕ ವಾಹನ,
ಪೊಲೀಸ್ ಹಾಗೂ ಇಲಾಖಾ ವಾಹನಗಳನ್ನು ಮಾತ್ರ ಲಾಲ್‌ಬಾಗ್ ಜೋಡಿ ರಸ್ತೆಯ ಹತ್ತಿರದ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರದರ್ಶನದ ಸಮಯದಲ್ಲಿ ಲಾಲ್‌ಬಾಗ್‌ಗೆ ಬರುವ ವಾಯುವಿಹಾರಿಗಳ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಇದನ್ನು ಓದಿ : ಗಣೇಶ ಹಬ್ಬಕ್ಕೆ ಬಿಬಿಎಂಪಿ ಅಲರ್ಟ್: ಪಿಒಪಿ ಮೂರ್ತಿಗಳಿಗೆ ನಿಷೇಧ, ತಯಾರಿಸಿದ್ರೆ ಬೀಳುತ್ತೆ ಕೇಸ್, ವಿಸರ್ಜನೆಗೆ ವಿಶೇಷ ವ್ಯವಸ್ಥೆ
ಫ್ಲವರ್ ಶೋಗೆ ವಾಹನದಲ್ಲಿಆಗಮಿಸುವವರಿಗೆ ಪಾರ್ಕಿಂಗ್‌ಗೆ ಸಮಸ್ಯೆಯಾಗಭಾರದೆಂದು ಶಾಂತಿನಗರ ಟಿಟಿಎಂಸಿ, ಜೆಸಿ ರಸ್ತೆ ಬಿಬಿಎಂಪಿ ಕಾಂಪ್ಲೆಕ್ಸ್ ಹಾಗೂ ಅಲ್‌ಅಮೀನ್ ಕಾಲೇಜು ಆವರಣದ ನಿಲ್ದಾಣ ಪ್ರದೇಶದಲ್ಲಿ ತಮ್ಮ ವಾಹನಗಳಿಗೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. (Annual flower show begins at Lalbagh)