ಪ್ರಪಂಚದಲ್ಲಿರುವ ಅತ್ಯಮೂಲ್ಯ ಬ್ರಾಂಡ್ಗಳ ಪಟ್ಟಿಯನ್ನು ಆನುವಲ್ ಗ್ಲೋಬಲ್ 500 – 2022 ಬಿಡುಗಡೆ ಮಾಡಿದ್ದು, ವಿಶ್ವದ ಪ್ರತಿಷ್ಠಿತ ಕಂಪನಿಗಳ (Annual Global 500 – 2022) ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಟಾಪ್ 100ರಲ್ಲಿ ಭಾರತದ ಏಕೈಕ ಕಂಪನಿ ಕಾಣಿಸಿಕೊಂಡಿದ್ದು, ಬಹುತೇಕ ಕಂಪನಿಗು (Annual Global 500 – 2022) ಅಮೇರಿಕಾದ ಮೂಲದ್ದಾಗಿವೆ.
ಆನುವಲ್ ಗ್ಲೋಬಲ್ 500 ಪ್ರಕಾರ ಪ್ರಪಂಚದ ಟಾಪ್ 10 ಅತ್ಯಮೂಲ್ಯ ಬ್ರಾಂಡ್ಗಳೆಂದರೆ,
ಆಪಲ್: $355.1 ಬಿಲಿಯನ್
ಅಮೆಜಾನ್: $350.3 ಬಿಲಿಯನ್
ಗೂಗಲ್: $263.4 ಬಿಲಿಯನ್
ಮೈಕ್ರೋಸಾಫ್ಟ್: $135.4 ಬಿ
ವಾಲ್ಮಾರ್ಟ್: $184.2 ಬಿಲಿಯನ್
ಸ್ಯಾಮ್ಸಂಗ್: $107.3 ಬಿಲಿಯನ್
ಫೇಸ್ಬುಕ್: $101.2 ಬಿಲಿಯನ್
ICBC: $75.1 ಬಿಲಿಯನ್
ಹುವಾವೇ: $71.2 ಬಿಲಿಯನ್
ವೆರಿಝೋನ್: $69.6 ಬಿಲಿಯನ್
ಟಾಪ್ 100 ಕ್ಲಬ್ನಲ್ಲಿ ಭಾರತದ ಟಾಟಾ ಗ್ರೂಪ್:
ಆನುವಲ್ ಗ್ಲೋಬಲ್ 500 ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಬ್ರಾಂಡ್ ಎಂದರೆ ಟಾಟಾ ಗ್ರೂಪ್. ಈ ವರ್ಷ ಟಾಟಾ ಗ್ರೂಪ್ 77 ನೇ ಸ್ಥಾನದಲ್ಲಿದೆ. ಟಾಟಾ ಗ್ರೂಪ್ ದಕ್ಷಿಣ
ಏಷ್ಯಾದಲ್ಲಿ ಅತಿ ದೊಡ್ಡ ಬ್ರ್ಯಾಂಡ್ ಕಂಪನಿಯಾಗಿದ್ದು ಟಾಟಾ ಗ್ರೂಪ್ನ ಒಟ್ಟು ಮೌಲ್ಯ $23.9 ಬಿಲಿಯನ್ ಆಗಿದೆ.

TikTok ಅತಿಹೆಚ್ಚು ಆದಾಯ ಗಳಿಸುವ ಸಾಮಾಜಿಕ ಅಪ್ಲಿಕೇಶನ್ : ಪ್ರಪಂಚದಲ್ಲೇ ಅತಿಹೆಚ್ಚು ಆದಾಯ ಗಳಿಸುವ ಸಾಮಾಜಿಕ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೆ TikTok ಪಾತ್ರವಾಗಿದೆ.
TikTok ಪ್ರತಿದಿನ $2.5 ಮಿಲಿಯನ್ ಆದಾಯ ಗಳಿಸುತ್ತಿದ್ದು, ಪ್ರತಿ ತಿಂಗಳು ಸರಿಸುಮಾರು $75.8 ಮಿಲಿಯನ್ ಆದಾಯವನ್ನು ಟಿಕ್ ಟಾಕ್ ಹೊಂದಿದೆ.
ವಿಶ್ವದ ಅತ್ಯಂತ ಮೌಲ್ಯಯೂತ ಬ್ರಾಂಡ್ ಎಂಬ ಹೆಗ್ಗಳಿಕೆಯನ್ನು Apple ಕಂಪನಿ ಹೊಂದಿದೆ. ಈ ಕಂಪನಿಯ ಒಟ್ಟು ಮಾರುಕಟ್ಟೆಯ ಮೌಲ್ಯ 355 ಶತಕೋಟಿ ಡಾಲರ್ ಎನ್ನಲಾಗಿದೆ. ನಂತರದ ಸ್ಥಾನವನ್ನು
Amazon ಮತ್ತು Google ಹೊಂದಿವೆ. ಯುಎಸ್ ಮತ್ತು ಚೀನಾದ ಕಂಪನಿಗಳು ಶ್ರೇಯಾಂಕದಲ್ಲಿ ಬ್ರಾಂಡ್ ಮೌಲ್ಯದ 2/3 ರಷ್ಟು ಪ್ರಾಬಲ್ಯ ಸಾಧಿಸಿವೆ. ಚೀನಾದ WeChat 100 ರಲ್ಲಿ 93.3 ಟಾಪ್ ಸ್ಕೋರ್
ಮತ್ತು ಎಲೈಟ್ AAA+ ರೇಟಿಂಗ್ನೊಂದಿಗೆ ಸತತ ಎರಡನೇ ವರ್ಷ ವಿಶ್ವದ ಪ್ರಬಲ ಬ್ರ್ಯಾಂಡ್ ಎಂದು ಹೆಸರಿಸಲ್ಪಟ್ಟಿವೆ.