Mysore : ಕಳೆದ ಕೆಲ ದಿನಗಳಿಂದ ಮುಡಾ ಸೈಟ್ (MUDA Scam Case) ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಕೋಟಿ ಬೆಲೆ (Crore price) ಬಾಳುವ ನಿವೇಶನಗಳನ್ನು ಕೇವಲ 3,000, 6,000 ರೂ.ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.ಮೂರು ಸಾವಿರಕ್ಕೆ ಒಂದರಂತೆ ಬರೋಬ್ಬರಿ 23 ಸೈಟ್ಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗೆ (Real estate entrepreneur) ಮುಡಾ ಬರೆದುಕೊಟ್ಟಿದೆ. ಮುಡಾ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ (Dinesh and a real estate tycoon)ಬಡಾವಣೆ ಮಂಜುನಾಥ್ (Manjunath) ನಿಂದ ಮಹಾ ಭೂಗಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ.
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/11/6702_4_7_2024_18_29_24_1_MUDA-1024x576.jpeg)
ಮೈಸೂರಿನ ವಿಜಯನಗರದಲ್ಲಿ (Vijayanagar, Mysore) ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ 23 ನಿವೇಶನಗಳನ್ನು ಕೇವಲ 3 ಸಾವಿರ ರೂ.ಗೆ ಮಾರಾಟ ಮಾಡಿರುವ ಆರೋಪ ಮುಡಾದ ವಿರುದ್ಧ ಕೇಳಿಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ (Government Exchequer ) 300 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.ಮುಡಾ ಮಾಜಿ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಕಾರ್ತಿಕ ಬಡಾವಣೆಯ ಮಂಜುನಾಥ್ನಿಂದ ಮಹಾ (Maha from Manjunath of Kartika Barangay) ಭೂಗಳ್ಳತನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಜಾರಿ ನಿರ್ದೇಶನಾಲಯ (ED) ಮುಂದೆ ವಿಚಾರಣೆಗೆ ಹಾಜರಾಗಿದ್ದ ಮುಡಾ ಮಾಜಿ ಆಯುಕ್ತ ದಿನೇಶ್ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ಗೆ ಪ್ರೋತ್ಸಾಹದಾಯಕ (Encouraging Manjunath) ಯೋಜನೆ ಹೆಸರಿನಲ್ಲಿ ಐದೇ ದಿನಗಳಲ್ಲಿ ಒಂದು ನಿವೇಶನಕ್ಕೆ 3 ಸಾವಿರ ರೂಪಾಯಿಯಂತೆ 23 ಸೈಟ್ಗಳನ್ನು ನೀಡಲಾಗಿದೆ.
ಇನ್ನು ಒಂದು ವರ್ಷದ ಹಿಂದೆಯೇ ಮುಡಾ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತದಲ್ಲಿ (Muda in Lokayukta on corruption) ದೂರು ದಾಖಲಾಗಿತ್ತು. ಮುಡಾ ಆಯುಕ್ತ ದಿನೇಶ್ ಉದ್ಯಮಿ ಮಂಜುನಾಥ್ ಮೇಲೆ ಲೋಕಾಯುಕ್ತ ಮೇಲೆ ಒಂದು ವರ್ಷದ ಹಿಂದೆಯೇ ದೂರು ಕೊಡಲಾಗಿತ್ತು. ಕೃಷ್ಣ (Krishna) ಎಂಬ ವ್ಯಕ್ತಿಯಿಂದ ಮೈಸೂರು ಲೋಕಾಯುಕ್ತಕ್ಕೆ (Mysore Lokayukta) ದಾಖಲೆ ಸಮೇತ ದೂರು ನೀಡಲಾಗಿದೆ. ಒಬ್ಬನೇ ವ್ಯಕ್ತಿಯಿಂದ ಸರ್ಕಾರಕ್ಕೆ 300 ಕೋಟಿಗೂ ಅಧಿಕ ನಷ್ಟವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ಕುಮಾರ್, (G. T. Dinesh Kumar) ವಿಶೇಷ ತಹಶೀಲ್ದಾರ್ ಶಿವಕುಮಾರ್ (Shivakumar) , ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ. ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು, ನೌಕರರುಗಳು ಮತ್ತು ತಪ್ಪಿತಸ್ಥರ (Members, Officers, Employees and Offenders) ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿತ್ತು.150 ಪುಟದ ದಾಖಲೆ ಒಂದು ವರ್ಷದ ಹಿಂದೆಯೇ ಕೊಟ್ಟರು ಲೋಕಾಯುಕ್ತ ಮೌನವಹಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದರಿಂದ ಲೋಕಾಯುಕ್ತ ಅಂದಿನ ಎಸ್ಪಿ ಮೇಲೆಯೇ ಅನುಮಾನ ಮೂಡಿದೆ. ಎಲ್ಲಾ ದಾಖಲೆ ಇದ್ದರು ಒಂದೇ ಒಂದು ನೋಟಿಸ್ (Notice) ಕೊಡುವ ಕೆಲಸವನ್ನು ಲೋಕಾಯುಕ್ತ ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ.