Mumbai : ಬಾಲಿವುಡ್ ಕಿಂಗ್ ಖಾನ್(Bollywood king Khan), ನಟ ಶಾರುಖ್ ಖಾನ್(Shah Rukh Khan) ಅಭಿನಯದ ಪಠಾಣ್ ಸಿನಿಮಾ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಭಾರಿ ಸದ್ದು (another reason Pathan’s victory) ಮಾಡುತ್ತಿದ್ದು,
ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದೆ.
ಈ ಮಧ್ಯೆ ಬಾಲಿವುಡ್ ಚಿತ್ರರಂಗದ ಅನೇಕ ನಟ-ನಟಿಯರು ಶಾರೂಖ್ ಖಾನ್ ಮತ್ತು ಪಠಾಣ್ ಚಿತ್ರತಂಡಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದರೇ,
ಇತ್ತ ನಟಿ ಕಂಗನಾ(Kangana Ranaut), ಪಠಾಣ್ ಹಾಗೂ ಶಾರೂಖ್ ಖಾನ್ ಅವರ ವಿರುದ್ಧ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಬಿಡುಗಡೆಯ ಮೊದಲ ದಿನದಿಂದಲೂ ವಿವಾದಗಳ ಅಲೆಗೆ ಸಿಲುಕಿ, ಅದನ್ನೆಲ್ಲಾ ಬೇಧಿಸಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಪಠಾಣ್(Pathan) ಚಿತ್ರಕ್ಕೆ ಪದೇ ಪದೇ ಅಡಚಣೆಗಳು ಸಿಲುಕುತ್ತಿರುವುದು ಇದೀಗ ಮುನ್ನೆಲೆಗೆ ಬಂದಿದೆ.
ಪಠಾಣ್ ಸಿನಿಮಾ ಬಿಡುಗಡೆಯಾದ ಮೂರೇ ದಿನಗಳಲ್ಲಿ 150 ಕೋಟಿ ರೂ.ಗಳನ್ನು ಗಳಿಸಿದ್ದು, ಹಿಂದಿನ ದಾಖಲೆಗಳನ್ನು ಪುಡಿ ಮಾಡಿ ನೂತನ ದಾಖಲೆಯನ್ನು ಬರೆಯಲು ಸಜ್ಜಾಗಿದೆ.
ಶಾರೂಖ್ ಖಾನ್ ಅವರ ಅಭಿಮಾನಿಗಳು ಮತ್ತು ಬಾಲಿವುಡ್(Bollywood) ಸೆಲೆಬ್ರಿಟಿಗಳು ಬಹುದಿನಗಳ ನಂತರ ಬಾಲಿವುಡ್ ಸಿನಿಮಾ ಒಂದು ಪಡೆದಿರುವ(another reason Pathan’s victory) ಗೆಲುವನ್ನು ಸಂಭ್ರಮಿಸುವಲ್ಲಿ ಮಗ್ನರಾಗಿದ್ದಾರೆ.
ಇದನ್ನೂ ಓದಿ: 6.1 ದರದೊಂದಿಗೆ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ : ಐಎಂಎಫ್ ವರದಿ
ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ಸದಾ ಒಂದಲ್ಲ ಒಂದು ವಿಷಯಕ್ಕೆ ಮತ್ತು ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ
ರಾಷ್ಟ್ರ ಪ್ರಶಸ್ತಿ(National Award) ಪಡೆದ ನಟಿ ಕಂಗನ ರಣಾವತ್ ಅವರು ಪಠಾಣ್ ಸಿನಿಮಾದ ಕುರಿತಾಗಿ ಒಂದು ಅಚ್ಚರಿ ಹೇಳಿಕೆಯೊಂದನ್ನು ನೀಡಿರುವುದು ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ!
ಪಠಾಣ್ ಚಿತ್ರ ಬಿಡುಗಡೆಗೂ ಮೊದಲು ಬಾಯ್ಕಾಟ್ ಪಠಾಣ್(Boycott Pathan) ಅಭಿಯಾನ ಪ್ರಾರಂಭವಾಗಿತ್ತು. ಹಿಂದೂ ಪರ ಸಂಘಟನೆಗಳು ಹಲವೆಡೆ ಚಿತ್ರ ವಿರೋಧಿಸಿ ಗಲಭೆ ಮಾಡಿದ ಘಟನೆಗಳು ಕೂಡಾ ವರದಿಯಾಗಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ವ್ಯಕ್ತವಾದ ವಿರೋಧವನ್ನು ಕಂಡು ಪಠಾಣ್ ಚಿತ್ರ ಬಾಕ್ಸ್ ಆಫೀಸ್ ನ(Box Office) ಲೆಕ್ಕಾಚಾರ ತೆಲೆಕೆಳಗಾಗಲಿದೆ ಎಂದು ಹೇಳಲಾಗಿತ್ತು.
ಆದರೆ ಈ ಊಹಾಪೋಹಗಳನ್ನು ಮೆಟ್ಟಿ ಮುನ್ನುಗ್ಗುತ್ತಿರುವ ಪಠಾಣ್ ಸಿನಿಮಾ, ಸದ್ಯ ಗೆಲುವಿನ ಸವಾರಿ ನಡೆಸುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿದ ನಟಿ ಕಂಗನಾ ರಣಾವತ್,
ಪಠಾಣ್ ಸಿನಿಮಾದ ಗೆಲುವಿನ ಹಿಂದೆ ಐ.ಎಸ್.ಐ(ISI) ಕೈವಾಡ ಇದೆ ಎಂದು ಆರೋಪ ಮಾಡಿದ್ದಾರೆ. ಈ ಸ್ಪೋಟಕ ಹೇಳಿಕೆ ಹೊರಬೀಳುತ್ತಿದ್ದಂತೆ ಬಾಲಿವುಡ್ ಅಂಗಳದಲ್ಲಿ ಹಲವು ಬಗೆಯ ಮಾತುಗಳು ಹರಿದಾಡುತ್ತಿವೆ.
ಆದ್ರೆ ನಟಿಯ ಈ ಹೇಳಿಕೆಗೆ ನಟ ಶಾರುಖ್ ಖಾನ್ ಅವರು ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ!
ನಟಿ ಕಂಗನಾ ರಣಾವತ್ ಅವರ ಈ ಒಂದು ಹೇಳಿಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.