Hassan: ಕೆಲ ದಿನಗಳ ಹಿಂದಷ್ಟೇ ಟಾಕ್ಸಿಕ್ ಸಿನಿಮಾದ (Toxic movie) ಸೆಟ್ ನಿರ್ಮಾಣ ಮಾಡಲು ಮರಗಳನ್ನು ಕಡಿದ ಆರೋಪದಲ್ಲಿ ನ್ಯಾಯಾಲಯದ ಆದೇಶದ (Court order) ಮೇರೆಗೆ ಸಿನಿಮಾದ ನಿರ್ಮಾಣ ಸಂಸ್ಥೆಗಳ (Film production companies) ವಿರುದ್ಧ ಎಫ್ಐಆರ್ (FIR) ದಾಖಲಾಗಿತ್ತು . ಈದೀಗ ಅರಣ್ಯಕ್ಕೆ (Forest) ಹಾನಿಯುಂಟು ಮಾಡಿ ಚಿತ್ರೀಕರಣ ಆರೋಪ ಕಾಂತರ-2 (Kantara 2) ಚಿತ್ರ ತಂಡದಿಂದ ಕೇಳಿ ಬಂದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೊಸೂರು ಗ್ರಾಮ ಪಂಚಾಯಿತಿ (Hosur Gram Panchayat) ವ್ಯಾಪ್ತಿಯ ಹೆರೂರು ಗ್ರಾಮದ (Heruru village) ಬಳಿ ಘಟನೆ ನಡೆದಿದೆ. ಕೆಲ ದಿನಗಳಿಂದ ಕಾಂತರ-2 ಸಿನಿಮಾ ಚಿತ್ರೀಕರಣ (Shooting) ನಡೆಯುತ್ತಿತ್ತು. ಚಿತ್ರೀಕರಣಕ್ಕಾಗಿ ಗೋಮಾಳ ಜಾಗಕ್ಕೆ ಪರವಾನಗಿ ಪಡೆದುಕೊಂಡಿತ್ತು ಚಿತ್ರತಂಡ. ಅರಣ್ಯ ಜಾಗದಲ್ಲಿ ಮರಗಳನ್ನು ಕಡಿದು, ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಆರೋಪ ಕೇಳಿ ಬಂದಿದ್ದು, ಸ್ಥಳೀಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚಿತ್ರೀಕರಣಕ್ಕೆ ಯಾವೆಲ್ಲಾ ಪರವಾನಿಗೆ ನೀಡಿದ್ದಾರೆ ಎಂಬ ಮಾಹಿತಿ ಕೊಡಬೇಕು. ಅರಣ್ಯ, ಕಂದಾಯ ಇಲಾಖೆಯವರು (Revenue Department) ಮಾಹಿತಿ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸದ್ಯ ಕಾಡಿನಲ್ಲಿ ಬೆಂಕಿ ಹಚ್ಚಿದ್ದರಿಂದ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎನ್ನಲಾಗಿದೆ. ವನ್ಯಜೀವಿಗಳಿರುವ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು ಎಂಬುದು ಗ್ರಾಮಸ್ಥರ ಆಗ್ರಹ. ‘ಕೂಡಲೇ ಶೂಟಿಂಗ್ ಸ್ಥಗಿತಗೊಳಿಸಿ ಪರಿಸರ ಉಳಿಸಿ. ಇಲ್ಲವಾದರೆ ಡಿಸಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ’ ಎಂದು ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.
ಕಾಂತಾರ ಸಣ್ಣ ಬಜೆಟ್ ಸಿನಿಮಾ ಆಗಿತ್ತು. ಆದ್ರೆ ಕಾಂತಾರ ಪ್ರೀಕ್ವೆಲ್ ಬಿಗ್ ಬಜೆಟ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗ್ತಿದೆ. ಹೊಂಬಾಳೆ ಫಿಲ್ಮ್ಸ್(Hombale Films) ಸಿನಿಮಾ ನಿರ್ಮಾಣ ಮಾಡ್ತಿದೆ. ಪ್ರೀಕ್ವೆಲ್ ಶೂಟಿಂಗ್ಗಾಗಿಯೇ ಕುಂದಾಪುರದ ಬಳಿ ಬೃಹತ್ ಸೆಟ್ (Huge set) ಕೂಡ ಹಾಕಲಾಗಿತ್ತು. ಸಿನಿಮಾ ಕೆಲಸಗಳು ಭರದಿಂದ ಸಾಗ್ತಿರೋ ಸಮಯದಲ್ಲೇ ಸಾಲು ಸಾಲು ವಿಘ್ನಗಳು ಕೂಡ ಎದುರಾಗಿತ್ತು.ಕಾಂತಾರ ಸಿನಿಮಾದ ಮೊದಲ ಚಾಪ್ಟರ್ ಶೂಟಿಂಗ್ ಮಾಡುವಾಗ ಯಾವ್ದೇ ಸಮಸ್ಯೆ ಎದುರಾಗಿರ್ಲಿಲ್ಲ. ಒಂದೇ ಒಂದು ಸಣ್ಣ ವಿವಾದವೂ ಸುದ್ದಿಯಾಗಿರ್ಲಿಲ್ಲ. ಆದ್ರೀಗ ಕಾಂತಾರ ಸಿನಿಮಾದ ಪ್ರೀಕ್ವೆಲ್ ಶೂಟಿಂಗ್ (Kantara prequel shooting) ನಡೀತಿರೋ ಹೊತ್ತಲ್ಲಿ ಮೇಲಿಂದ ಮೇಲೆ ವಿವಾದಗಳು ಸದ್ದು ಮಾಡ್ತಿದೆ ಇದು ದೈವದ ಕಂಟಕಗಳೇ ಆಗಿರಬಹುದು ಎಂದು ಅಲ್ಲಿನ ಜನ ಮಾತಾಡಿಕೊಂಡಿದ್ದಾರೆ ಎನ್ನಲಾಗ್ತಿದೆ