New Delhi : ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಭಾರತೀಯ ಮೂಲದ ರಿಷಿ ಸುನಕ್ (Answer To Controversies) ಅವರ ಕುರಿತ ಅನೇಕ ಅಚ್ಚರಿಯ ಸಂಗತಿಗಳು ವೈರಲ್ ಆಗುತ್ತಿವೆ.

ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ತಮ್ಮ ಮೊದಲ ಭಾಷಣದಲ್ಲಿ “ತಮ್ಮ ಸಾಂಸ್ಕೃತಿಕ ಮೂಲ ಮತ್ತು ಧಾರ್ಮಿಕ ಪರಂಪರೆ”ಯನ್ನು ಉಲ್ಲೇಖಿಸಿದರು.
ಭಾರತೀಯ ಮೂಲದ ನಾಯಕ ರಿಷಿ ಸುನಕ್ ಬ್ರಿಟನ್ (Answer To Controversies) ಪ್ರಧಾನಿಯಾಗಿ ನೇಮಕಗೊಂಡ ಮೊದಲ ಹಿಂದೂ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪವಿತ್ರ ಹಿಂದೂ ‘ಕಲವಾ’ ದಾರವನ್ನು ಪ್ರದರ್ಶಿಸಿದರು. 10 ಡೌನಿಂಗ್ ಸ್ಟ್ರೀಟ್ನಲ್ಲಿ ರಿಷಿ ಸುನಕ್ ಅವರು ತಮ್ಮ ಬೆಂಬಲಿಗರತ್ತ ಕೈಬೀಸುತ್ತಿರುವಾಗ ಪವಿತ್ರ ಕೆಂಪು ದಾರವನ್ನು ಧರಿಸಿದ್ದರು. ಈ ಪೋಟೋಗಳು ಇದೀಗ ಎಲ್ಲೆಡೆ ಭಾರೀ ವೈರಲ್(Viral) ಆಗುತ್ತಿವೆ.
https://youtu.be/R3Q1ONHN9_U ಸಂಪೂರ್ಣ ಗುಂಡಿಬಿದ್ದ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಗುಳಿಮಂಗಳ ರಸ್ತೆ !
ಇದಕ್ಕೂ ಮುನ್ನ ಅವರ ಅನೇಕ ಬಾರಿ ತಮ್ಮ ಧಾರ್ಮಿಕ ಪರಂಪರೆಯ ಕುರಿತು ಮಾತನಾಡಿರುವ ವಿಡಿಯೋಗಳು ಕೂಡಾ ಎಲ್ಲೆಡೆ ವೈರಲ್ ಆಗುತ್ತಿವೆ. 2017ರ ಸಾರ್ವತ್ರಿಕ ಚುನಾವಣೆಯ ನಂತರ, ಸುನಕ್ ಹಿಂದೂ ಪವಿತ್ರ ಗ್ರಂಥ ಭಗವದ್ಗೀತೆಯ ಮೇಲೆ ಶಾಸಕರಾಗಿ ನಿಷ್ಠೆಯ ಪ್ರಮಾಣವಚನ ಸ್ವೀಕರಿಸಿದ್ದರು.
ಈ ವೇಳೆ ರಿಷಿ ಸುನಕ್ ಅವರು ತಮ್ಮ ಹಿಂದೂ ಧಾರ್ಮಿಕ ಗುರುತನ್ನು ಹೆಮ್ಮೆಯಿಂದ ಘೋಷಿಸಿದ್ದರು. “ನಾನು ಈಗ ಬ್ರಿಟನ್ ಪ್ರಜೆಯಾಗಿದ್ದೇನೆ. ಆದರೆ ನನ್ನ ಧರ್ಮ ಹಿಂದೂ.
ನನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಭಾರತೀಯ. ನಾನು ಹಿಂದೂ ಮತ್ತು ನನ್ನ ಗುರುತು ಕೂಡ ಹಿಂದೂ ಎಂದು ಹೆಮ್ಮೆಯಿಂದ ಹೇಳುತ್ತೇನೆ” ಎಂದು ಹೇಳಿದ್ದರು.

ರಿಷಿ ಸುನಕ್ ಬ್ರಿಟನ್‌ನ ಸಂಸದರಾದರು ಕೂಡಾ ಅವರು ಧಾರ್ಮಿಕವಾಗಿ ಹಿಂದೂ ಪರಂಪರೆಯನ್ನು ಅನುಸರಿಸುತ್ತಿದ್ದಾರೆ. ಈ ಹಿಂದೆ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಹಬ್ಬದ ಪ್ರಯುಕ್ತ ಹಸುವಿಗೆ ಪೂಜೆ ಸಲ್ಲಿಸಿ, ಆರತಿ ಮಾಡುತ್ತಿರುವುದು ಕಂಡು ಬಂದಿತ್ತು.
ಇದನ್ನೂ ಓದಿ : https://vijayatimes.com/aravind-kejrival-requests-pm/
ಇನ್ನು ರಿಷಿ ಸುನಕ್ ಅವರು ಹ್ಯಾಂಪ್ಶೈರ್ನಲ್ಲಿರುವ ಹಿಂದೂ ದೇವಸ್ಥಾನಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಾರೆ.
ಸೌತಾಂಪ್ಟನ್ನಲ್ಲಿರುವ ವೈದಿಕ್ ಸೊಸೈಟಿಯ ಹಿಂದೂ ದೇವಾಲಯವನ್ನು ರಿಷಿ ಸುನಕ್ ಅವರ ಅಜ್ಜ ರಾಮದಾಸ್ ಸುನಕ್ ಅವರು 1971ರಲ್ಲಿ ಸ್ಥಾಪಿಸಿದರು. ಈಗಲೂ ರಿಷಿ ಸುನಕ್ ಅವರು ಈ ದೇವಸ್ಥಾನದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
- ಮಹೇಶ್.ಪಿ.ಎಚ್