Bengaluru : ರಾಜ್ಯ ಬಿಜೆಪಿ(State BJP) ಸರ್ಕಾರ ನಿನ್ನೆ ರಾಜ್ಯ ವಿಧಾನ ಪರಿಷತ್ನಲ್ಲಿ “ಮತಾಂತರ ನಿಷೇಧ ಕಾಯ್ದೆ”ಯನ್ನು(Conversion Law) ಜಾರಿಗೊಳಿಸಿದೆ. ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಕಾಯ್ದೆ ಪಾಸ್ಮಾಡಲಾಗಿತ್ತು.

ಆದರೆ ವಿಧಾನ ಪರಿಷತ್ನಲ್ಲಿ ಸಂಖ್ಯಾಬಲದ ಕೊರತೆ ಇದ್ದ ಕಾರಣ ಬಿಜೆಪಿ ಸರ್ಕಾರ ಸುಗ್ರಿವಾಜ್ಞೆಯ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದೀಗ ವಿಧಾನ ಪರಿಷತ್ನಲ್ಲೂ ಕಾಯ್ದೆಯನ್ನು ಪಾಸ್ಮಾಡಿದೆ.
ಅಂಗೀಕಾರಗೊಂಡ ಮತಾಂತರ ನಿಷೇಧ ಕಾಯ್ದೆಯಲ್ಲಿರುವ ಪ್ರಮುಖ ಅಂಶಗಳು ಹೀಗಿವೆ :
- ಮತಾಂತರಗೊಂಡ ವ್ಯಕ್ತಿಗಳಿಗೆ ಸರ್ಕಾರದಿಂದ ಸಿಗುವ ನೆರವಿಗೆ ತಡೆ.
- ಮತಾಂತರದಲ್ಲಿ ತೊಡಗುವ ಸಂಸ್ಥೆಗಳಿಗೆ ಸರ್ಕಾರದಿಂದ ಸಿಗುತ್ತಿರುವ ಅನುದಾನ ಸ್ಥಗಿತ.
- ಮತಾಂತರಗೊಂಡವರು ಮಾತೃ ಧರ್ಮಕ್ಕೆ ಮರಳಿದರೆ ಅದು ಅಪರಾಧವಾಗುವುದಿಲ್ಲ.
- ಮತಾಂತರದಂತಹ ಕೃತ್ಯಗಳಲ್ಲಿ ವೃದ್ಧಾಶ್ರಮಗಳು, ಎನ್ಜಿಒಗಳು, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳು ಭಾಗಿಯಾಗಿರುವುದು ಧೃಡಪಟ್ಟಲ್ಲಿ ಅವುಗಳಿಗೆ ನೀಡಲಾಗುವ ಸರ್ಕಾರದ ನೆರವು, ಅನುದಾನ ರದ್ದಾಗಲಿದೆ.
- ಅಪ್ರಾಪ್ತ ವ್ಯಕ್ತಿ, ಮಹಿಳೆ, ಪರಿಶಿಷ್ಟ ಜಾತಿ, ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಬಲವಂತದ ಮತಾಂತರ ಮಾಡಿದ್ದಲ್ಲಿ 3 ರಿಂದ 10 ವರ್ಷ ಜೈಲು ಶಿಕ್ಷೆ. 50,000 ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ.
- ಮತಾಂತರಗೊಳ್ಳುವ 30 ದಿನದ ಮುನ್ನ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ : https://vijayatimes.com/why-cardiac-happens-to-youth-the-most/
- ಅರ್ಜಿ ಸಲ್ಲಿಸಿದವರನ್ನು ಪೊಲೀಸರ ಸಮ್ಮುಖದಲ್ಲಿ ಡಿಸಿ ವಿಚಾರಣೆ.
- ಮತಾಂತರಗೊಂಡ ವ್ಯಕ್ತಿಯ ಕುಟುಂಬಸ್ಥರು, ಸಹವರ್ತಿಗಳಿಗೆ ದೂರು ನೀಡಲು ಅವಕಾಶ.
- ಮತಾಂತರಕ್ಕೆ ಶಿಕ್ಷಣ ಸಂಸ್ಥೆ ಧಾರ್ಮಿಕ ಮಿಷನರಿಗಳು ಪ್ರಚೋದನೆ ನೀಡುವಂತಿಲ್ಲ.
- ಯಾವುದೇ ಧರ್ಮದ ಪದ್ಧತಿ, ಸಂಪ್ರದಾಯ, ಆಚರಣೆಗಳನ್ನು ಇನ್ನೊಂದು ಧರ್ಮಕ್ಕೆ ಎದುರಾಗಿ ಧಕ್ಕೆಯಾಗುವ ರೀತಿಯಲ್ಲಿ ಚಿತ್ರಿಸುವುದು ಶಿಕ್ಷಾರ್ಹ ಅಪರಾಧ.
- ಮತಾಂತರ ಸಾಬೀತಾದರೆ, ತಪ್ಪಿತಸ್ಥರು 5 ಲಕ್ಷದವರೆಗೂ ಪರಿಹಾರ ನೀಡಬೇಕು.
- ಮದುವೆಯ ವಾಗ್ದಾನ ನೀಡಿ, ಆಮಿಷ ಒಡ್ಡಿ ಮತಾಂತರ ಮಾಡುವುದು ಸಂಪೂರ್ಣ ನಿಷೇಧ.
- ಮತಾಂತರ ಮಾಡುವ ಉದ್ದೇಶದಿಂದ ಮಾಡಿದ ಮದುವೆ ಅಸಿಂಧು ಎಂದು ಪರಿಗಣನೆ.
- ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ.

- 25,000 ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ.
- ಬಲವಂತ, ವಂಚನೆ, ಒತ್ತಾಯದ ಮತಾಂತರಕ್ಕೆ ನಿಷೇಧ.
- ಹಣ, ವಸ್ತು ಹಾಗೂ ಇನ್ನಿತರ ಆಮಿಷದ ಮೂಲಕ ಮಾಡುವ ಮತಾಂತರ ನಿಷೇಧ.
- ಮದುವೆ ಹೆಸರಿನಲ್ಲಿ ನಡೆಸುವ ಮತಾಂತರಕ್ಕೆ ನಿಷೇಧ
- ಮಹೇಶ್ ಪಿ.ಎಚ್