Colombo : ದ್ವೀಪರಾಷ್ಟ್ರ ಶ್ರೀಲಂಕಾದ (Sri Lanka) ಅಧ್ಯಕ್ಷೀಯ ಚುನಾವಣೆಯಲ್ಲಿ (election) ಮಾರ್ಕ್ಸ್ವಾದಿ ನಾಯಕ ಅನುರಾ ಕುಮಾರ (Anura Kumar) ಡಿಸ್ಸಾನಾಯಕೆ ಅವರು 42.31 (votes) ಗಳಿಸುವ ಮೂಲಕ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಎಡಪಂಥೀಯ ಒಕ್ಕೂಟವಾದ (Leftist federalism) ಪೀಪಲ್ಸ್ ಲಿಬರೇಶನ್ ಫ್ರಂಟ್ (ಜೆವಿಪಿ) ಪಕ್ಷದ ನಾಯಕ ಅನುರಾ ಕುಮಾರ ಡಿಸ್ಸಾನಾಯಕೆ ಚುನಾವಣೆಯ (Election) ಸಂಪೂರ್ಣ ಫಲಿತಾಂಶ ಅಧಿಕೃತವಾಗಿ ಬಿಡುಗಡೆಗೂ ಮುನ್ನವೇ ಗೆಲುವು ಸಾಧಿಸಿದ್ದಾರೆ. “ಈ ಗೆಲುವು ನಮ್ಮೆಲ್ಲರಿಗೂ ಸೇರಿದ್ದು” ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ(Twitter) ತಿಳಿಸಿದ್ದಾರೆ, ಚುನಾವಣಾ ಆಯೋಗವು ಅವರ ಮುನ್ನಡೆಯನ್ನು ಖಚಿತಪಡಿಸಿದೆ.
ಕೊಲಂಬೊದ ಅಧ್ಯಕ್ಷೀಯ (Presidency of Colombo) ಕಾರ್ಯದರ್ಶಿ ಕಚೇರಿಯಲ್ಲಿ ಸೋಮವಾರ ಡಿಸಾನಾಯಕೆ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ ಶೇ.3 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದ ಪೀಪಲ್ಸ್ ಲಿಬರೇಶನ್ ಫ್ರಂಟ್ (ಜೆವಿಪಿ) ಪಕ್ಷಕ್ಕೆ ಈ ಗೆಲುವು ಭಾರೀ ಶಕ್ತಿ ನೀಡಿದೆ. 3ನೇ ಸ್ಥಾನಕ್ಕೆ ಕುಸಿದ ರನಿಲ್ ವಿಕ್ರಮಸಿಂಘೆ (Ranil Wickramasinghe) : ಪ್ರತಿಪಕ್ಷದ ನಾಯಕ ಸಜಿತ್ (Sajith) ಪ್ರೇಮದಾಸ ಅವರು 32.76 ಶೇಕಡಾ ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 2022 ರ ಆರ್ಥಿಕ ಕುಸಿತದ ಸಮಯದಲ್ಲಿ ದೇಶವನ್ನು ಮುನ್ನಡೆಸಿದ್ದ ನಿರ್ಗಮಿತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಶೇಕಡಾ 17.27 ರೊಂದಿಗೆ ಮೂರನೇ ಸ್ಥಾನಕ್ಕೆ (third place) ಕುಸಿದಿದ್ದಾರೆ.
2022ರಲ್ಲಿ ಶ್ರೀಲಂಕಾದಲ್ಲಿ (Sri Lanka) ನಡೆದ ರಾಷ್ಟ್ರವ್ಯಾಪಿ ದಂಗೆಯ ನಂತರ ಅಧಿಕಾರ ವಹಿಸಿಕೊಂಡ ರನಿಲ್ ವಿಕ್ರಮಸಿಂಘೆ (Wickramasinghe) ಅವರು ದೇಶವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವಲ್ಲಿ ವಿಫಲರಾಗಿದ್ದರು. ವಿಕ್ರಮ ಸಿಂಘೆಯವರ ಕಠಿಣ ಕಟ್ಟುನಿಟ್ಟಿನ ಕ್ರಮಗಳು, ತೆರಿಗೆ ಹೆಚ್ಚಳ ಮತ್ತು ಸಾಮಾಜಿಕ ವೆಚ್ಚಗಳಿಗೆ (expenses) ಕಡಿತ ಸೇರಿದಂತೆ ಅನೇಕ ಕ್ರಮಗಳು ವ್ಯಾಪಕವಾದ ಸಾರ್ವಜನಿಕ ವಿರೋಧವನ್ನು ಎದುರಿಸಿದವು. ಸಾಮಾನ್ಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು IMF ಒಪ್ಪಂದದ ನಿಯಮಗಳನ್ನು ಮರುಸಂಧಾನ ಮಾಡುವ ಭರವಸೆಯೊಂದಿಗೆ ಡಿಸ್ಸಾನಾಯಕ್ ಅವರ ಪ್ರಚಾರವು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.