ದುಬಾರಿ ಬೆಲೆಯ ವಾಟರ್ ಬಾಟಲ್ ಮಾರುಕಟ್ಟೆಗೆ ಬಿಟ್ಟ ಆಪಲ್ ಸಂಸ್ಥೆ ; ಈ ಬಾಟಲ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಆಪಲ್ ಕಂಪನಿ(Apple Company) ನೀರಿನ ಬಾಟಲಿಯೊಂದನ್ನು ಬಿಡುಗಡೆ ಮಾಡಿದೆ. ಅರೇ, ನೀರಿನ ಬಾಟಲ್ ತಾನೇ ಅಂತ ಅಸಡ್ಡೆ ಮಾಡ್ಬೇಡಿ, ಈ ಬಾಟಲ್ ನ ಬೆಲೆ ಕೇಳಿದರೆ ನೀವು ಶಾಕ್‌ ಆಗೋದು ಖಂಡಿತ.

ಆಪಲ್ ಕಂಪನಿಯು ಪ್ರಸ್ತುತ ಈ ಉತ್ಪನ್ನವನ್ನು ಅಮೆರಿಕಾದಲ್ಲಿ(America) ಬಿಡುಗಡೆ ಮಾಡಿದೆ. ಇದಕ್ಕೆ ಹೈಡ್ರೆಟ್‌ ಸ್ಪಾರ್ಕ್(Hidrate Spark) ಅನ್ನೋ ಹೆಸರು ಕೊಡಲಾಗಿದೆ.‌ ಆಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೈಡ್ರೇಟ್ ಸ್ಪಾರ್ಕ್‌ ಪ್ರೋ ವಾಟರ್(Pro Water Bottle) ಬಾಟಲನ್ನು ನೀವು ನೋಡಬಹುದು. ಇದರ ಚಿಲ್ಲರೆ ಬೆಲೆ $ 59.95 ಅಂದರೆ ಭಾರತದ ಕರೆನ್ಸಿಯಲ್ಲಿ ಸುಮಾರು 4,600 ರೂ. ಇದು ಪ್ರಸ್ತುತ ಯುಎಸ್ ಮಾರುಕಟ್ಟೆಯಲ್ಲಿ ಮಾತ್ರ ಸಿಗುತ್ತಂತೆ. ಸುಮಾರು 4600 ರೂಪಾಯಿ ಬೆಲೆ ಬಾಳುವ ಈ ನೀರಿನ ಬಾಟಲಿಯಲ್ಲಿ ಇರೋವಂತ ವಿಶೇಷತೆಯಾದ್ರು ಏನು ಅಂತ ಯೋಚಿಸುತ್ತಿದ್ದೀರಾ?

ಇಲ್ಲಿದೆ ನೋಡಿ ಉತ್ತರ, ಇತರ ಆಪಲ್ ಉತ್ಪನ್ನಗಳಂತೆ ಈ ಬಾಟಲ್ ಕೂಡ ತುಂಬಾನೇ ವಿಶೇಷತೆಗಳನ್ನ ಒಳಗೊಂಡಿದೆ. ಆಪಲ್ ಹೈಡ್ರೇಟ್ ಸ್ಪಾರ್ಕ್ ಅನ್ನೋದು ಸಾಮಾನ್ಯ ನೀರಿನ ಬಾಟಲಿಯಲ್ಲ, ಬದಲಿಗೆ ಇದೊಂದು ಸ್ಮಾರ್ಟ್ ವಾಟರ್ ಬಾಟಲ್. ಇದು ನಿಮ್ಮ ದೈನಂದಿನ ನೀರಿನ ಸೇವನೆಯ ಲೆಕ್ಕಾಚಾರವನ್ನ ನೋಡಿಕೊಂಡು ನಿಮ್ಮ ದೇಹ ಹೈಡ್ರೇಟ್ ಆಗಿದ್ಯೋ ಇಲ್ವೋ ಎನ್ನುವುದರ ಮೇಲ್ವಿಚಾರಣೆ ಮಾಡುತ್ತದೆ. ಅಷ್ಟೇ ಅಲ್ಲ ಈ ಮಾಹಿತಿಯನ್ನು ನಿಮ್ಮ ಆಪಲ್ ಹೆಲ್ತ್‌ನೊಂದಿಗೆ ಸಿಂಕ್ ಮಾಡುತ್ತದೆ.

ಆಪಲ್ ಐಫೋನ್ ತರಹ, ಈ ಬಾಟಲಿಯು ಕೂಡ ಎರಡು ರೂಪಾಂತರಗಳಲ್ಲಿ ಸಿಗುತ್ತದೆ. ಹೈಡ್ರೇಟ್ ಸ್ಪಾರ್ಕ್ ಪ್ರೋ ಮತ್ತು ಹೈಡ್ರೇಟ್ ಸ್ಪಾರ್ಕ್ ಪ್ರೊ ಸ್ಟೀಲ್. ಇದರ ಬೆಲೆ ಕ್ರಮವಾಗಿ $ 59.95 ಮತ್ತು $ 79.95 (ರೂ. 6,100). ಈ ಬಾಟಲಿಯು ವ್ಯಾಕ್ಯೂಮ್‌ ಐಸೋಲೆಟೆಡ್‌ ಆಗಿರುವುದರಿಂದ, ಇದು 24 ಗಂಟೆಗಳವರೆಗೆ ನೀರನ್ನು ತಂಪಾಗಿರಿಸುತ್ತದೆ. ಇದರ ತೂಕ ಸುಮಾರು 910 ಗ್ರಾಂ. ಈ ಬಾಟಲಿಯ ಡೇಟಾವನ್ನು ತಿಳಿದುಕೊಳ್ಬೇಕಾದ್ರೆ, ನೀವು ಹೈಡ್ರೇಟ್ ಸ್ಪಾರ್ಕ್ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ಅದು ನಿಮ್ಮ ಆಪಲ್‌ ಹೇಲ್ತ್ ಡೇಟಾದೊಂದಿಗೆ ಸಿಂಕ್ ಮಾಡುತ್ತದೆ. ಈ ಅಪ್ಲಿಕೇಶನ್ ಸಂಪೂರ್ಣವಾಗಿ ಉಚಿತವಾಗಿದೆ. ಭಾರತ ಸೇರಿದಂತೆ ಇತರ ದೇಶಗಳಲ್ಲಿ ಈ ಬಾಟಲ್ ಬಿಡುಗಡೆಯ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ. ಆದ್ರೆ ಆದಷ್ಟು ಬೇಗ ಇತರ ದೇಶದ ಮಾರುಕಟ್ಟೆಗಳಲ್ಲೂ ಇದು ಬಿಡುಗಡೆಯಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಆಪಲ್ ಅಭಿಮಾನಿಗಳು.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.