• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಅಕ್ಟೋಬರ್‌ನಿಂದ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಅಕ್ಟೋಬರ್‌ನಿಂದ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
0
SHARES
12
VIEWS
Share on FacebookShare on Twitter
  • ಅನರ್ಹ ಕಾರ್ಡ್‌ದಾರರ ಪತ್ತೆಯಿಂದ ನಿಜವಾದ ಬಡವರಿಗೆ ಸೌಲಭ್ಯ
  • ಅಕ್ಟೋಬರ್‌ನಿಂದ ಹೊಸ ಅರ್ಜಿಗೆ ಅವಕಾಶ
  • ನಿಜವಾದ ಬಡ ಕುಟುಂಬಗಳ ಹಕ್ಕು ಕಸಿಯದಂತೆ ಎಚ್ಚರಿಕೆ

Udupi: ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿಗಳ ಕುರಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಅಕ್ಟೋಬರ್ (October) ತಿಂಗಳಿನಿಂದ ಹೊಸ ಪಡಿತರ ಚೀಟಿಗಳಿಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಅವಕಾಶ ನೀಡಲಾಗುತ್ತಿದೆ. (Applications for new ration cards)

ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ (K.H.Munniyappa) ಅವರು ಉಡುಪಿಯಲ್ಲಿ ಮಾತನಾಡಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ಸುಮಾರು 7.70 ಲಕ್ಷ ಪಡಿತರ ಚೀಟಿಗಳನ್ನು ಅನರ್ಹವೆಂದು ಗುರುತಿಸಲಾಗಿದೆ.

ಅಕ್ಟೋಬರ್ ತಿಂಗಳಿನಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸ್ವೀಕರಿಸುವ ಅವಕಾಶ ನೀಡುತ್ತಿದೆ.

ಈ ಪಡಿತರ ಚೀಟಿಗಳನ್ನು ಹೊಂದಿರುವವರು ವಾಸ್ತವದಲ್ಲಿ ಬಿಪಿಎಲ್ (Below Poverty Line) ವರ್ಗಕ್ಕೆ ಸೇರಿದವರಲ್ಲ ಎಂಬುದು ಸಮೀಕ್ಷೆಯಲ್ಲಿ ಹೊರಬಂದಿದೆ. ಇದರಿಂದಾಗಿ, ಆ ಚೀಟಿಗಳನ್ನು ಬಿಪಿಎಲ್‌ನಿಂದ ಎಪಿಎಲ್ (Above Poverty Line) ವಿಭಾಗಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಯಾವುದೇ ಪರಿಶೀಲನೆ ಇಲ್ಲದೆ ಬಿಪಿಎಲ್ ಕಾರ್ಡ್‌ಗಳನ್ನು(BPL Card) ಅನೇಕ ಜನರಿಗೆ ಹಂಚಲಾಗುತ್ತಿತ್ತು.

ಇದರಿಂದಾಗಿ ನಿಜವಾದ ಬಡವರಿಗೆ ಸಿಗಬೇಕಾದ ಸೌಲಭ್ಯ ಅನರ್ಹ ವ್ಯಕ್ತಿಗಳಿಗೆ ತಲುಪುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್‌ಗಳ ಪರಿಶೀಲನಾ ಕಾರ್ಯವನ್ನು ಆರಂಭಿಸಿತು.

ಅದರಲ್ಲೇ 7.70 ಲಕ್ಷ ಪಡಿತರ ಚೀಟಿಗಳು ನಿಯಮಾವಳಿ ಪ್ರಕಾರ ಅರ್ಹವಲ್ಲವೆಂದು ಸ್ಪಷ್ಟವಾಗಿದೆ.ಸಚಿವ ಮುನಿಯಪ್ಪ ಅವರು ಹೋಲಿಕೆ ನೀಡುತ್ತಾ, ಆಂಧ್ರಪ್ರದೇಶ (Andhra Pradesh) , ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಬಿಪಿಎಲ್ ಕಾರ್ಡ್‌ಗಳ ಪ್ರಮಾಣ ಶೇ.50 ಕ್ಕಿಂತ ಕಡಿಮೆ ಇದ್ದು, ಅಭಿವೃದ್ಧಿ ಹೊಂದಿದ ಕರ್ನಾಟಕದಲ್ಲಿ ಮಾತ್ರ ಅದು ಶೇ.75 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು.

ಕರ್ನಾಟಕವು ಬಡವರ ಸಂಖ್ಯೆ ಕಡಿಮೆಯಾಗುತ್ತಿರುವ ರಾಜ್ಯವಾಗಿದ್ದರೂ, ಇನ್ನೂ 1.28 ಕೋಟಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರನ್ನು ಹೊಂದಿದೆ.

ಇನ್ನು ಪರಿಶೀಲನೆ ವೇಳೆ ನಿಜವಾಗಿಯೂ ಬಿಪಿಎಲ್ ಕುಟುಂಬಗಳ ಕಾರ್ಡ್‌ಗಳನ್ನು ತಪ್ಪಾಗಿ ಎಪಿಎಲ್ (APL) ವಿಭಾಗಕ್ಕೆ ಬದಲಾಯಿಸಿದ ಸಂದರ್ಭಗಳೂ ಇರಬಹುದು. ಇಂತಹ ಫಲಾನುಭವಿಗಳಿಗೆ ಸರ್ಕಾರ ಮತ್ತೊಂದು ಅವಕಾಶ ನೀಡುತ್ತಿದೆ.

ಅವರು ಮರುಅರ್ಜಿ ಸಲ್ಲಿಸಿ, ತಮ್ಮ ಬಿಪಿಎಲ್ ಹಕ್ಕನ್ನು ದೃಢೀಕರಿಸಿಕೊಳ್ಳಬಹುದು. ಸರ್ಕಾರವು ಅವರಿಗೆ ಒಂದು ದಿನದೊಳಗೆ ಪಡಿತರ ಧಾನ್ಯ ಪೂರೈಸುವುದಾಗಿ ಭರವಸೆ ನೀಡಿದೆ.

ಈ ತಿದ್ದುಪಡಿ ಕಾರ್ಯ ಮುಗಿದ ಬಳಿಕ, ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.(Applications for new ration cards)

ಹೀಗಾಗಿ, ಅರ್ಹ ಕುಟುಂಬಗಳು ತಮ್ಮ ವಿವರಗಳನ್ನು ಸಲ್ಲಿಸಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ (APL Card) ಪಡೆಯಬಹುದು. ಇದು ಜನರಲ್ಲಿ ಪಾರದರ್ಶಕತೆ ಮತ್ತು ನ್ಯಾಯವನ್ನು ಸಾಧಿಸುವ ಹೆಜ್ಜೆಯಾಗಿದೆ ಎಂದು ಸಚಿವರು ಹೇಳಿದರು.

ಸರ್ಕಾರವು ಕೈಗೊಂಡಿರುವ ಇತ್ತೀಚಿನ ಸಮೀಕ್ಷೆಯ ಉದ್ದೇಶ, ಪಡಿತರ ಚೀಟಿಗಳ ನಿಜವಾದ ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿರುವವರು ಸರ್ಕಾರದಿಂದ ಅಕ್ಕಿ, ಗೋಧಿ ಮತ್ತು ಇತರ ಅಗತ್ಯ ಧಾನ್ಯಗಳನ್ನು ತಲುಪಿಸಿಕೊಳ್ಳುತ್ತಾರೆ.

ಆದರೂ, ಅನರ್ಹರು ಈ ಸೌಲಭ್ಯ ಪಡೆದುಕೊಳ್ಳುವುದರಿಂದ ನಿಜವಾದ ಬಡವರು ಹಿಂದುಳಿದಿದ್ದರು.ಹೀಗಾಗಿ, ನಿಜವಾದ ಬಡವರಿಗೆ ತಲುಪಬೇಕಾದ ಧಾನ್ಯ ಮತ್ತು ಸಬ್ಸಿಡಿ ಸರಿಯಾಗಿ ತಲುಪುವಂತೆ ಮಾಡಲು ಈ ಪರಿಷ್ಕರಣೆ ಅತೀ ಮುಖ್ಯವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ರಾಜ್ಯ ಸರ್ಕಾರವು ಪಾರದರ್ಶಕ ವ್ಯವಸ್ಥೆ ರೂಪಿಸಿರುವುದರಿಂದ, ಅರ್ಜಿ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.

Tags: aplcardbplCongressGovernmentKarnatakapolitics

Related News

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ
ಪ್ರಮುಖ ಸುದ್ದಿ

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ

September 11, 2026
ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ
ಪ್ರಮುಖ ಸುದ್ದಿ

ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ

September 11, 2026
BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ
ದೇಶ-ವಿದೇಶ

BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ

September 11, 2026
ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.