• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಪವರ್ ಸ್ಟಾರ್ ಅಪ್ಪು ಅವರ ಕನಸಿನ ಕೂಸು ‘ಗಂಧದ ಗುಡಿ’ ಟ್ರೈಲರ್ಗೆ ಮೆಚ್ಚುಗೆಗಳ ಮಹಾಪೂರ ; ಇದೇ ಅ.28ಕ್ಕೆ ಬಿಡುಗಡೆ

Mohan Shetty by Mohan Shetty
in ಮನರಂಜನೆ
Powerstar
0
SHARES
0
VIEWS
Share on FacebookShare on Twitter

Bengaluru : ನಗುಮೊಗದ ಒಡೆಯ ಅಪ್ಪು (Appu) ಇಂದಿಗೂ, ಎಂದೆಂದಿಗೂ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ರಾಜಕುಮಾರ. ಅದೆಷ್ಟೋ ಅನಾಥ ಆಶ್ರಮ,

ಅದೆಷ್ಟೋ ವೃದ್ದಾಶ್ರಮ ಮತ್ತು ಹಲವು ಮಕ್ಕಳ ವಿದ್ಯಾಭ್ಯಾಸವನ್ನ ನೋಡಿಕೊಳ್ಳುತ್ತಿದ್ದ ನಟ (Actor) ಪುನೀತ್ ರಾಜಕುಮಾರ್ (Puneeth Rajkumar) ಅವರು ಈಗ ನಮ್ಮ ಜೊತೆ ಇಲ್ಲ ಅನ್ನುವುದು ಮನಸ್ಸಿಗೆ ಬೇಸರ ತರುವ ಸಂಗತಿ.

Power star

ಆದರೆ ತಮ್ಮ ಮುಗ್ಧ ನಗು ಮತ್ತು ನಡುವಳಿಕೆಯ ಮೂಲಕ ಅಪ್ಪು ಲಕ್ಷಾಂತರ ಜನರ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಇದೀಗ,

ಬಹುದೊಡ್ಡ ಕನಸಿನೊಂದಿಗೆ ಅಪ್ಪು ರೂಪಿಸಿದ್ದ ‘ಗಂಧದ ಗುಡಿ’ (Gandada Gudi) ಟ್ರೈಲರ್ (Trailer) ಬಿಡುಗಡೆಯಾಗಿ ಪುನೀತ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ವೈಲ್ಡ್ ಲೈಫ್(Wildlife) ಜಗತ್ತಿನ ಕಥೆಯುಳ್ಳ ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು.

ಇದನ್ನೂ ಓದಿ : https://vijayatimes.com/health-benefits-of-litchi-fruit/


ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಕೂಸಾಗಿದ್ದ ‘ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಟ್ರೇಲರ್ ಅನ್ನು, ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ (Narthaki Theatre) ಅಭಿಮಾನಿಗಳ ಸಮ್ಮುಖದಲ್ಲಿ ಭಾನುವಾರ ಎಂದರೆ ಅಕ್ಟೋಬರ್ 9ರಂದು ಅನಾವರಣ ಮಾಡಲಾಯಿತು.

ಟ್ರೈಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿಮ್ಮ ಅಪ್ಪು ಚಿತ್ರವನ್ನು ನೋಡಿ ಹಾರೈಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡರು.

Appu

ಗಂಧದಗುಡಿ ಟ್ರೈಲರ್ ನೋಡಿದ ನಂತರ ಪುನೀತ್ ಪತ್ನಿ ಅಶ್ವಿನಿ, ಪತಿಯನ್ನು ನೆನೆದು ಭಾವುಕರಾದರು. ಟ್ರೈಲರ್ನಲ್ಲಿ ಅಪ್ಪುವನ್ನು ನೋಡಿ ರಾಘಣ್ಣ ದಂಪತಿ ಕೂಡ ಕಣ್ಣೀರು ಹಾಕಿದರು.

ಮತ್ತೊಂದು ಕಡೆ ಟ್ರೈಲರ್ ನೋಡಿ ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಸಂಭ್ರಮಿಸಿದರು, ಆದರೂ ಅಪ್ಪು ಇಲ್ಲದ ನೋವು ಎಲ್ಲರ ಮೊಗದಲ್ಲೂ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ : https://vijayatimes.com/health-tips-for-fasting/

ಈಗಾಗಲೇ, ಯೂಟ್ಯೂಬ್ನಲ್ಲಿ(Youtube) ‘ಗಂಧದ ಗುಡಿ’ ಟ್ರೇಲರ್ ಧೂಳೆಬ್ಬಿಸುತ್ತಿದೆ. ಒಂದೇ ದಿನದಲ್ಲಿ ಬರೋಬ್ಬರಿ 1 ಕೋಟಿ ವೀಕ್ಷಣೆ ಕಂಡಿದೆ, ಆ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿ ಮಾಡಿದೆ.

ಗಂಧದ ಗುಡಿ ಟ್ರೈಲರ್ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Appu Fans Hearts Wave For GG Trailer


ದಟ್ಟ ಅರಣ್ಯದೊಳಗಿನ ರಣರೋಚಕಗಳನ್ನ ವಿವರಿಸುವ, ನಟ ಪುನೀತ್ ರಾಜ್ಕುಮಾರ್ ಅವರ ಈ ಡ್ರೀಮ್ ಪ್ರಾಜೆಕ್ಟ್ ನಲ್ಲಿ, ಪುನೀತ್ ಹಾಗೂ ಡಾ.ರಾಜ್ ಕುಮಾರ್ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ.

ಗಂಧದ ಗುಡಿ ಟ್ರೈಲರ್ ನೋಡಿದ ಪ್ರತಿಯೊಬ್ಬರು ಅಪ್ಪು ಅವರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.

https://twitter.com/narendramodi/status/1579013188703907840?s=20&t=-W5hQ60jQjE4LKlMWDRaKQ

ಇದೇ ತಿಂಗಳ 28 ರಂದು ಗಂಧದಗುಡಿ ತೆರೆಗೆ ಅಪ್ಪಳಿಸಲಿದೆ. ಅಕ್ಟೋಬರ್ 29ಕ್ಕೆ ಅಪ್ಪು ಅಗಲಿ ಒಂದು ವರ್ಷ ತುಂಬಲಿದ್ದು, ಅವರ ಸ್ಮರಣೆಗಾಗಿ ಗಂಧದಗುಡಿ ಬೆಳ್ಳಿತೆರೆಗೆ ಬರಲಿದೆ.

ಇದಕ್ಕಾಗಿ ಅಭಿಮಾನಿಗಳು ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಪ್ರೀತಿಯ ಅಪ್ಪುವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
  • ಪವಿತ್ರ
Tags: cinemaGandada Gudikannada cinemaPowerStar Puneeth Rajkumar

Related News

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’
ಪ್ರಮುಖ ಸುದ್ದಿ

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’

June 3, 2023
ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.