Chennai : ಸಂಗೀತ ಮಾಂತ್ರಿಕರೆಂದೇ (Music is magical) ಹೆಸರಾಗಿರುವ ಗಾಯಕ, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ (AR Rahman) ಬಾಳಲ್ಲಿ ಬಿರುಗಾಳಿ ಎದ್ದಿದೆ. ರೆಹಮಾನ್ ಪತ್ನಿ ಸಾಯಿರಾ (Wife Saira ) ತಾವು ಗಂಡನಿಂದ ಬೇರೆಯಾಗುತ್ತಿರುವುದಾಗಿ (Separating from husband) ಘೋಷಣೆ ಮಾಡಿದ್ದಾರೆ. ಸಾಯಿರಾ ಅವರ ವಕೀಲರಾದ ವಂದನಾ ಶಾ (Vandana Shah) ಇಬ್ಬರು ವಿಚ್ಛೇದನ (Divorce) ಪಡೆಯುತ್ತಿರುವ ನಿರ್ಧಾರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಾಲಿವುಡ್‌ನಲ್ಲಿ (Kollywood) ಮಾತ್ರವಲ್ಲದೆ ಭಾರತ ಚಲನಚಿತ್ರರಂಗದಲ್ಲಿ ಈ ಸುದ್ದಿ ಅಚ್ಚರಿಗೊಳ್ಳುವಂತೆ ಮಾಡಿದೆ.

ಮದುವೆಯಾಗಿ ಹಲವು ವರ್ಷಗಳ ನಂತರ, ಸಾಯಿರಾ ಅವರು ತಮ್ಮ ಪತಿ ಎಆರ್ ರೆಹಮಾನ್ (A R Rahaman) ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇವರ ಸಂಬಂಧದಲ್ಲಿ ಆಳವಾದ ಭಾವನಾತ್ಮಕ ಒತ್ತಡದ (Emotional stress) ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಬ್ಬರಿಗೊಬ್ಬರ ನಡುವೆ ಪ್ರೀತಿ ಇದ್ದರೂ, ತಮ್ಮ ನಡುವೆ ಆಗುವ ಮನಸ್ತಾಪಗಳು (Misunderstanding) ಹಾಗೂ ಸಮಸ್ಯೆಗಳು ದೊಡ್ಡ ಅಂತರವನ್ನು ಸೃಷ್ಟಿಸಿದೆ ಎಂದು ದಂಪತಿಗಳು ಕಂಡುಕೊಂಡಿದ್ದಾರೆ. ಈ ಹಂತದಲ್ಲಿ ಯಾರೂ ಕೂಡ ತಮ್ಮ ನಡುವೆ ಸೇತುವೆಯಾಗಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ. ಈ ಕಾರಣದಿಂದಾ ಸಾಯಿರಾ ಅವರು ನೋವು ಹಾಗೂ ಸಂಕಟದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.ಇಂತಹ ಕಷ್ಟದ ಸಮಯದಲ್ಲಿ ಸಾಯಿರಾ, ಸಾರ್ವಜನಿಕರು ಗೌಪ್ಯತೆ (Privacy to the public) , ಘನತೆ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ಎಆರ್ ರಹಮಾನ್ (A R Rahman) ಮತ್ತು ಸಾಯಿರಾ (Saira) 1995ರಲ್ಲಿ ಮದುವೆಯಾಗಿದ್ದರು, ಇವರಿಗೆ ಖತೀಜಾ, ರಹೀಮಾ ಮತ್ತು ಅಮೀನ್ (Khatija, Rahima and Amin ) ಎನ್ನುವ ಮೂವರು ಮಕ್ಕಳಿದ್ದಾರೆ ( 3 Kids). ಎಆರ್ ರೆಹಮಾನ್ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಸಂಗೀತ ನಿರ್ದೇಶಕರು (Music Director) ಭಾರತಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಕೂಡ ಅವರದ್ದಾಗಿದೆ .ಎ ಆರ್ ರೆಹಮಾನ್ (AR Rahman) ಇತ್ತೀಚೆಗೆ ಸಂಗೀತ ನಿರ್ದೇಶನ ಮಾಡಿದ ಧನುಷ್ ನಿರ್ದೇಶನದ ರಾಯನ್ ಸಿನಿಮಾದ ಹಾಡು ಭಾರಿ ಜನಪ್ರಿಯವಾಗಿತ್ತು. ಛಾವಾ, ಥಗ್ ಲೈಫ್ (Thug Life) , ಗಾಂಧಿ ಟಾಕ್ಸ್ (Gandhi Talks) ಮುಂತಾದ ಮುಂದೆ ರಿಲೀಸ್ ಆಗಲಿರುವ ಸಿನಿಮಾಗಳಿಗೆ ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.